ಹಾಂಗ್ ಕಾಂಗ್ ಓಪನ್: ಸಿಂಧೂ, ಶ್ರೀಕಾಂತ್ ಪ್ರಿ ಕ್ವಾರ್ಟರ್ ಗೆ ಲಗ್ಗೆ, ಸೋತ ಸೈನಾ ಮನೆಗೆ

ಹಾಂಕ್ ಕಾಂಗ್ ಓಪನ್ ಬ್ಯಾಡ್ಮಿಂಟನ್ ಟೂರಿಯಲ್ಲಿ ಭಾರತದ ಪಿ.ವಿ. ಸಿಂಧೂ ಮತ್ತು ಕಿಡಂಬಿ ಶ್ರೀಕಾಂತ್ ಪ್ರಿ ಕ್ವಾರ್ಟರ್ ಸುತ್ತಿಗೆ ಪ್ರವೇಶಿಸಿದ್ದಾರೆ.
ಪಿವಿ ಸಿಂಧೂ, ಕಿಡಂಬಿ ಶ್ರೀಕಾಂತ್
ಪಿವಿ ಸಿಂಧೂ, ಕಿಡಂಬಿ ಶ್ರೀಕಾಂತ್
ಕೌಲೂನ್(ಹಾಂಗ್ ಕಾಂಗ್): ಹಾಂಕ್ ಕಾಂಗ್ ಓಪನ್ ಬ್ಯಾಡ್ಮಿಂಟನ್ ಟೂರಿಯಲ್ಲಿ ಭಾರತದ ಪಿ.ವಿ. ಸಿಂಧೂ ಮತ್ತು ಕಿಡಂಬಿ ಶ್ರೀಕಾಂತ್ ಪ್ರಿ ಕ್ವಾರ್ಟರ್ ಸುತ್ತಿಗೆ ಪ್ರವೇಶಿಸಿದ್ದಾರೆ.
ಥಾಯ್ ಲ್ಯಾಂಡಿನ ನಿಚ್ವಾನ್ ಜಿಂದಪೊ ಅವರನ್ನು 21-15, 13-21, 21-17 ಸೆಟ್ ಗಳಿಂದ ಮಣಿಸಿದ ಸಿಂಧೂ ಮುಂದಿನ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ. ಅವರು ತಮ್ಮ ಮುಂದಿನ ಸ್ಪರ್ಧೆಯಲ್ಲಿ ವಿಶ್ವ ನಂ.10 ದಕ್ಷಿಣ ಕೊರಿಯಾದ ಸುಂಗ್ ಜಿ ಹ್ಯುನ್ ಅವರನ್ನು ಎದುರಿಸಲಿದ್ದಾರೆ.
ಪುರುಷರ ಸಿಂಗಲ್ಸ್ ಸುತ್ತಿನಲ್ಲಿ ಭಾರತದ ಅನುಭವಿ ಆಟಗಾರ ಕಿಡಂಬಿ ಶ್ರೀಕಾಂತ್ ಚೀನಾದ ವಾಂಗ್ ವಿಂಗ್ ಕಿ ವಿನ್ಸೆಂಟ್ ಅವರನ್ನು 21-11.21-15 ಸೆಟ್ ಗಳಿಂದ ಪರಾಭವಗೊಳಿಸಿದ್ದಾರೆ.
ಇದೇ ವೇಳೆ ಭಾರತದ ಇನ್ನೋರ್ವ ಆಟಗಾರ್ತಿ ಸೈನಾ ನೆಹ್ವಾಲ್ ತಮ್ಮ ಎದುರಾಳಿ ಜಪಾನ್ ನ ಅಕೆನೆ ಯಮಾಗುಚ್ ಎದುರು  21-10, 10-21, 19-21 ಸೆಟ್ ಗಳಿಂದ ಪರಾಭವಗೊಂಡು ಸರಣಿಯಿಂದ ಹೊರನಡೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com