ತಂದೆಯನ್ನೇ ಮೀರಿಸುವಂತಿದೆ ಜೂನಿಯರ್ ರೊನಾಲ್ಡೋ ಕಾಲ್ಚೆಳಕ!

ಫುಟ್ಬಾಲ್ ಲೋಕದ ದಂತಕಥೆ ಕ್ರಿಸ್ಟಿಯಾನೋ ರೊನಾಲ್ಡೋ ಪುತ್ರ ರೊನಾಲ್ಡೋ ಜೂನಿಯರ್ ಕೂಡ ತಮ್ಮ ತಂದೆಯ ಹಾದಿಯಲ್ಲೇ ಸಾಗಿದ್ದಾರೆ.
ಜೂನಿಯರ್ ರೊನಾಲ್ಡೋ ಕಾಲ್ಚಳಕ
ಜೂನಿಯರ್ ರೊನಾಲ್ಡೋ ಕಾಲ್ಚಳಕ
ನವದೆಹಲಿ: ಫುಟ್ಬಾಲ್ ಲೋಕದ ದಂತಕಥೆ ಕ್ರಿಸ್ಟಿಯಾನೋ ರೊನಾಲ್ಡೋ ಪುತ್ರ ರೊನಾಲ್ಡೋ ಜೂನಿಯರ್ ಕೂಡ ತಮ್ಮ ತಂದೆಯ ಹಾದಿಯಲ್ಲೇ ಸಾಗಿದ್ದಾರೆ.
ಇತ್ತೀಚೆಗೆ ಕ್ರಿಸ್ಟಿಯಾನೋ ರೊನಾಲ್ಡೋ ಪ್ರತಿನಿಧಿಸುವ ಜುವೆಂಟಸ್ ತಂಡ ಶಾಲಾ ಮಕ್ಕಳಿಗಾಗಿ ಫುಟ್ಬಾಲ್ ತರಬೇತಿ ಆಯೋಜಿಸಿತ್ತು. ಈ ವೇಳೆ ನೂರಾರು ಶಾಲಾ ಮಕ್ಕಳು ಫುಟ್ಬಾಲ್ ಪಂದ್ಯದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ  ಜುವೆಂಟಸ್ ಯೂತ್ ತಂಡವನ್ನು ಪ್ರತಿನಿಧಿಸಿದ್ದ ಜೂನಿಯರ್ ರೊನಾಲ್ಡೋ ಏಕಾಂಗಿಯಾಗಿ 2 ಗೋಲು ಬಾರಿಸಿದ್ದರು.
ಈ ವಿಡಿಯೋವನ್ನು ಸೀನಿಯರ್ ರೊನಾಲ್ಡೋ ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದು, ವಿಡಿಯೋಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಅಂತೆಯೇ ಜೂನಿಯರ್ ರೊನಾಲ್ಡೋ ಕಾಲ್ಚಳಕ ಕೂಡ ರೊನಾಲ್ಡೋ ಅಭಿಮಾನಿಗಳ ಮನಸೂರೆಗೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com