ನವದೆಹಲಿ: ಓಮನ್ ನ ಮಸ್ಕತ್ ನಲ್ಲಿ ನಡೆಯುತ್ತಿರುವ ಏಷ್ಯನ್ ಚಾಂಪಿಯನ್ ಶಿಪ್ ಪುರುಷರ ಹಾಕಿ ಪಂದ್ಯಾವಳಿಯಲ್ಲಿ ಜಪಾನ್ ಅನ್ನು 3-2 ಗೋಲುಗಳಿಂದ ಮಣಿಸಿದ ಭಾರತ ಫೈನಲ್ ಸುತ್ತು ಪ್ರವೇಶಿಸಿದೆ.
ಶನಿವಾರ ನಡೆದ ಸೆಮಿ ಫೈನಲ್ಸ್ ಹಣಾಹಣಿಯಲ್ಲಿ ಭಾರತ ಪ್ರಾರಂಭದಲ್ಲಿಯೇ ಮುನ್ನಡೆ ಸಾಧಿಸಿದೆ. ಟೀಂ ಇಂಡಿಯಾ ಪರವಾಗಿ ಗುರ್ಜಂತ್ ಸಿಂಗ್ (19ನೇ ನಿಮಿಷ) ಚಿನ್ಲೆನ್ಸನಾ (44ನೇ ನಿಮಿಷ) ಹಾಗೂ ದಿಲ್ಪ್ರೀತ್ ಸಿಂಗ್ (55ನೇ ನಿಮಿಷ)ದಲಿ ಗೋಲು ಗಳಿಸಿದ್ದಾರೆ.
ಜಪಾನ್ ಪರವಾಗಿ ಪಂದ್ಯದ 22ನೇ ಹಾಗೂ 56ನೇ ನಿಮಿಷಗಳಲ್ಲಿ ಗೋಲು ದಾಖಲಾಗಿತ್ತು.
ಹಾಲಿ ಚಂಪಿಯನ್ ಆಗಿರುವ ಭಾರತ ತಂಡ ಇದಕ್ಕೆ ಮುನ್ನ ನಡೆದ ಲೀಗ್ ಹಂತದ ಪಂದ್ಯದಲ್ಲಿ ಜಪಾನ್ ಅನ್ನು 9-0 ಗೋಲುಗಳಿಂದ ಸೋಲಿಸಿ ಭರ್ಜರಿ ಪ್ರದರ್ಶನ ನೀಡಿತ್ತು.
ಇನ್ನು ಫೈನಲ್ ಗೆ ಪ್ರವೇಶಿದ ಭಾರತ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದೊಡನೆ ಪ್ರಶಸ್ತಿಗಾಗಿ ಸೆಣೆಸಲಿದೆ