ಸಂಗೀತ ನಿರ್ದೇಶಕ ರೆಹಮಾನ್, ಗೀತ ರಚನೆಗಾರ ಗುಲ್ಜಾರ್ ರಿಂದ ಹಾಕಿ ವಿಶ್ವಕಪ್ ಶೀರ್ಷಿಕೆ ಗೀತೆ!

ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಸರ್ಕಾರ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಮತ್ತು ಗೀತ ರಚನೆಗಾರ ಗುಲ್ಜಾರ್ ಅವರೊಂದಿಗೆ ಪುರುಷರ ಹಾಕಿ ವಿಶ್ವಕಪ್ 2018 ರ ಶೀರ್ಷಿಕೆ ಗೀತೆ....
ಗಲ್ಝಾರ್ ಸಾಹಬ್  ಹಾಗೂ ಎ ಆರ್ ರೆಹಮಾನ್
ಗಲ್ಝಾರ್ ಸಾಹಬ್ ಹಾಗೂ ಎ ಆರ್ ರೆಹಮಾನ್
Updated on
ಭುವನೇಶ್ವರ್: ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಸರ್ಕಾರ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಮತ್ತು ಗೀತ ರಚನೆಗಾರ ಗುಲ್ಜಾರ್ ಅವರೊಂದಿಗೆ ಪುರುಷರ ಹಾಕಿ ವಿಶ್ವಕಪ್ 2018 ರ ಶೀರ್ಷಿಕೆ ಗೀತೆ ರಚಿಸಲು ಸಹಯೋಗ  ನಡೆಸಲಿದೆ ಎಂದು ಘೋಷಿಸಿದೆ. 
ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ಕುರಿತು ಪ್ರಕಟಣೆ ನಿಡಿರುವ ಪಟ್ನಾಯಕ್ ಈ ವರ್ಷಒಡಿಶಾದಲ್ಲಿ ನಡೆಯಲಿರುವ ಪ್ರತಿಷ್ಠಿತ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ರಹಮಾನ್ ಲೈವ್ ಪರ್ಫಾರ್ಮೆನ್ಸ್ ನೀಡಲಿದ್ದಾರೆ ಎಂದು ಹೇಳಿದ್ದಾರೆ.
"ಭಾರತದ ಹೆಮ್ಮೆ ಎ ಆರ್ ರೆಹಮಾನ್ ಹಾಗೂ ಗಲ್ಝಾರ್ ಸಾಹಬ್ ಜೊತೆ  ಸೇರಿ ಹಾಕಿ ವಿಶ್ವಕಪ್ 2018 ಉದ್ಘಾಟನಾ ಗೀತೆ ರಚನೆಗಾಗಿ ಸಹಯೋಗ ನಿಡಲಿದೆ.  ಉದ್ಘಾಟನಾ ಸಮಾರಂಭದಲ್ಲಿ ಒಡಿಶಾದಲ್ಲಿ ರೆಹಮಾನ್ ಇದೇ ಪ್ರಥಮ ಬಾರಿಗೆ ಲೈವ್ ಪರ್ಫಾರ್ಮೆನ್ಸ್ ಅನ್ನು ನೀಡಲಿದ್ದಾರೆ." ಅವರು ಬರೆದುಕೊಂಡಿದ್ದಾರೆ.
ಹಾಕಿ ವಿಶ್ವಕಪ್ ನ 14 ನೆಯ ಆವೃತ್ತಿಯು ನವೆಂಬರ್ 28 ರಿಂದ ಡಿಸೆಂಬರ್ 16 ರವರೆಗೆ ಒಡಿಶಾದಲ್ಲಿ ನಡೆಯಲಿದೆ. ಕ್ರೀಡಾಕೂಟ ಆಯೋಜಕ ರಾಷ್ಟ್ರ ಭಾರತದೊಡನೆ ಜಗತ್ತಿನ ಹದಿನಾರು ರಾಷ್ಟ್ರೀಯ ತಂಡಗಳು ಪ್ರತಿಷ್ಠಿತ ಟ್ರೋಫಿಗಾಗಿ ಸೆಣಸಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com