ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌: ಮೊದಲ ದಿನವೇ ಭಾರತಕ್ಕೆ ಸ್ವರ್ಣ ಸಂಭ್ರಮ

ಚೀನಾದ ಕ್ಸಿಯಾನ್ ನಲ್ಲಿ ನಡೆಯುತ್ತಿರುವ ಏಷ್ಯನ್ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಸಯತ್ಬೇಕ್ ಒಕಾಸಾವ್ ಅವರನ್ನು 12-7 ಅಂಕಗಳಿಂದ ಮಣಿಸಿದ ಬಾರತದ ನಲ್ಮೆಯ ಕುಸ್ತಿಪಟು ಬಜರಂಗ್ ಪುನಿಯಾ ಚಿನ್ನದ ಪದಕ ಗಳಿಸಿದರು.
ಬಜರಂಗ್ ಪುನಿಯಾ
ಬಜರಂಗ್ ಪುನಿಯಾ
Updated on
ಕ್ಸಿಯಾನ್(ಚೀನಾ) ಚೀನಾದ ಕ್ಸಿಯಾನ್ ನಲ್ಲಿ ನಡೆಯುತ್ತಿರುವ ಏಷ್ಯನ್ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಸಯತ್ಬೇಕ್ ಒಕಾಸಾವ್ ಅವರನ್ನು 12-7 ಅಂಕಗಳಿಂದ ಮಣಿಸಿದ ಬಾರತದ ನಲ್ಮೆಯ ಕುಸ್ತಿಪಟು ಬಜರಂಗ್ ಪುನಿಯಾ ಚಿನ್ನದ ಪದಕ ಗಳಿಸಿದರು. 
65 ಕೆ.ಜಿ ಫ್ರೀ ಸ್ಟೈಲ್ ವಿಭಾಗದಲ್ಲಿ ಪುನಿಯಾ ಈ ಸಾಧನೆ ಮಾಡಿದ್ದಾರೆ. ಚಿಆನಾದ ಎದುರಾಳಿಗೆ ಮೊದಲ ಸುತ್ತಿನಲ್ಲಿ  2-5 ಅಂತರದಿಂದ ಸೋತಿದ್ದ ಪುನಿಯಾ ಕಡೆಗೆ ಅಂತಿಮವಾಗಿ 12-7 ಅಂತರದ ಜಯ ಸಾಧಿಸಿದ್ದರು. 
ಮಂಗಳವಾರದಿಂದ ಪ್ರಾರಂಬವಾಗಿರುವ ಏಷ್ಯನ್ ಕುಸ್ತಿ ಚಾಂಪಿಯನ್ ಶಿಪ್ ಮೊದಲ ದಿನ ಭಾರತಕ್ಕೆ ಒಲಿದ ಮೊದಲ ಚಿನ್ನದ ಪದಕ ಇದಾಗಿದೆ.
2017ರ ಸಾಲಿನಲ್ಲಿ ಪುನಿಯಾ ಇದೇ ಪಂದ್ಯಾವಳಿಯಲ್ಲಿ ಕಂಚಿನ ಪದಕ ಗಳಿಸಿ ಸಾಧನೆ ಮೆರೆದಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com