ಸೈಯದ್ ಮೋದಿ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್: ಫೈನಲ್ ತಲುಪಿದ ಸೌರಭ್ ವರ್ಮಾ

ಭಾರತದ ಸೌರಭ್ ವರ್ಮಾ ಅವರು ಇಲ್ಲಿ ನಡೆಯುತ್ತಿರುವ ಸೈಯದ್ ಮೋದಿ ಇಂಟರ್‍ನ್ಯಾಷನಲ್ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಫೈನಲ್ ತಲುಪಿದ್ದಾರೆ.
ಸೌರಭ್ ವರ್ಮಾ
ಸೌರಭ್ ವರ್ಮಾ
Updated on

ಲಖನೌ: ಭಾರತದ ಸೌರಭ್ ವರ್ಮಾ ಅವರು ಇಲ್ಲಿ ನಡೆಯುತ್ತಿರುವ ಸೈಯದ್ ಮೋದಿ ಇಂಟರ್‍ನ್ಯಾಷನಲ್ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಫೈನಲ್ ತಲುಪಿದ್ದಾರೆ.

ಶನಿವಾರ ನಡೆದ ಪುರುಷರ ಸಿಂಗಲ್ಸ್ ಸೆಮಿಫೈನಲ್ಸ್ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಸೌರಭ್ ವರ್ಮಾ ಅವರು 21-17, 16-21, 21-18 ಅಂತರದಲ್ಲಿ ಕೊರಿಯಾದ ಹೀ ಕ್ವಾಂಗ್ ಹೀ ವಿರುದ್ಧ ಗೆದ್ದು ಪ್ರಶಸ್ತಿ ಸುತ್ತಿಗೆ ಪ್ರವೇಶ ಮಾಡಿದ್ದಾರೆ.

26ರ ಪ್ರಾಯದ ಭಾರತ ಆಟಗಾರ ಹೈದರಾಬಾದ್ ನಲ್ಲಿ ನಡೆದಿದ್ದ ಬಿಡಬ್ಲ್ಯುಎಫ್ ಸೂಪರ್ 100 ಹಾಗೂ ವಿಯಟ್ನಾಂ ಎರಡು ಪ್ರಶಸ್ತಿಯನ್ನು ಈ ವರ್ಷ ಬಾಚಿಕೊಂಡಿದ್ದಾರೆ. ಇದೀಗ, ಸೈಯದ್ ಮೋದಿ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್ ಫೈನಲ್ ತಲುಪುವ ಮೂಲಕ ಮತ್ತೊಂದು ಪ್ರಶಸ್ತಿ ಭರವಸೆ ಮೂಡಿಸಿದ್ದಾರೆ. ಪ್ರಶಸ್ತಿ ಸುತ್ತಿನಲ್ಲಿ ತೈವಾನ್ ನ ವಾಂಗ್ ಟಿಜು ವೀ ವಿರುದ್ಧ ಸೌರಭ್ ವರ್ಮಾ ಸೆಣಸಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com