ಲಿಯೋನೆಲ್ ಮೆಸ್ಸಿಗೆ "ವರ್ಷದ ಫಿಫಾ ಆಟಗಾರ" ಪ್ರಶಸ್ತಿ

ವಿಶ್ವ ಶ್ರೇಷ್ಠ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಅವರು ವರ್ಷದ ಫಿಫಾ ಪುರುಷರ ಫಿಫಾ ಆಟಗಾರ ಪ್ರಶಸ್ತಿಗೆ ಸೋಮವಾರ ಭಾಜನರಾಗಿದ್ದಾರೆ. 
ಲಿಯೋನೆಲ್ ಮೆಸ್ಸಿ
ಲಿಯೋನೆಲ್ ಮೆಸ್ಸಿ
Updated on: 

ರೋಮ್: ವಿಶ್ವ ಶ್ರೇಷ್ಠ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಅವರು ವರ್ಷದ ಫಿಫಾ ಪುರುಷರ ಫಿಫಾ ಆಟಗಾರ ಪ್ರಶಸ್ತಿಗೆ ಸೋಮವಾರ ಭಾಜನರಾಗಿದ್ದಾರೆ. 

ಕಳೆದ ಆವೃತ್ತಿಯ ಚಾಂಪಿಯನ್ಸ್ ಲೀಗ್ ಚಾಂಪಿಯನ್ ಲಿವರ್ಪೂಲ್ ತಂಡದ ವರ್ಗಿಲ್ ವಾನ್ ಡಿಜ್ಕ್ ಅವರು ಕಳೆದ ತಿಂಗಳು ಯುಇಎಫ್‍ಎ ಆಟಗಾರ ಪ್ರಶಸ್ತಿ ಪಡೆದುಕೊಂಡಿದ್ದರು. ಇದೀಗ, ಅವರನ್ನು ಮೆಸ್ಸಿ ಹಿಂದಿಕ್ಕಿ ವರ್ಷದ ಫಿಫಾ ಆಟಗಾರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.

ಜುವೆಂಟಾಸ್ ಮುಂಚೂಣಿ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಕೂಡ ಈ ಪ್ರಶಸ್ತಿ ರೇಸ್‍ನಲ್ಲಿ ಇದ್ದರು. ಆದರೆ, ಪ್ರಶಸ್ತಿ ವಿತರಣಾ ಕಾರ್ಯಕ್ರಮಕ್ಕೆ ಹಾಜರಾಗಿರಲಿಲ್ಲ. ಇನ್ನು ಮಹಿಳೆಯರ ವಿಭಾಗದಲ್ಲಿ ಅಮೆರಿಕದ ಮೆಗನ್ ರಾಪಿನೋಯಿ ಅವರು ಮುಡಿಗೇರಿಸಿಕೊಂಡರು.

ಇನ್ನು ಫಿಫಾದ ಪ್ರತಿಷ್ಠಿತ ಬ್ಯಾಲನ್ ಡಿ ಓರ್ ಪ್ರಶಸ್ತಿ ರೇಸ್ ನಲ್ಲೂ ಮೆಸ್ಸಿ ಮತ್ತು ವರ್ಗಿಲ್ ವಾನ್ ಡಿಜ್ಕ್ ಇದ್ದು, ಡಿಸೆಂಬರ್ 2ರಂದು ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com