ದಕ್ಷಿಣ ಏಷ್ಯಾ ಕ್ರೀಡಾಕೂಟ: ಒಂದೇ ದಿನ 50 ಪದಕ ಗಳಿಸಿ ಸಾಧನೆ! ಟಾಪ್ ಸ್ಪಾಟ್ ಕಾಯ್ದುಕೊಂಡ ಟೀಂ ಇಂಡಿಯಾ

ವುಶು ಆಟಗಾರರು ಮತ್ತು ಈಜುಗಾರರ ಶ್ರೇಷ್ಠ ಪ್ರದರ್ಶನದಿಂದಾಗಿ ಭಾರತ ಗುರುವಾರ ನಡೆದ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ತನ್ನ ಅಗ್ರ ಸ್ಥಾನವನ್ನು ಗಟ್ಟಿಗೊಳಿಸಿಕೊಂಡಿದೆ.  ನಾಲ್ಕನೇ ದಿನದ ಸ್ಪರ್ಧೆಯಲ್ಲಿ ದೇಶವು ಒಟ್ಟಾರೆ 50 ಪದಕಗಳನ್ನು ಗೆಲ್ಲುವ ಮೂಲಕ 100 ಪದಕಗಳ ಸಂಖ್ಯೆಯನ್ನು ದಾಟಿದೆ. 
ದಕ್ಷಿಣ ಏಷ್ಯಾ ಕ್ರೀಡಾಕೂಟ: ಒಂದೇ ದಿನ 50 ಪದಕ ಗಳಿಸಿ ಸಾಧನೆ! ಟಾಪ್ ಸ್ಪಾಟ್ ಕಾಯ್ದುಕೊಂಡ ಟೀಂ ಇಂಡಿಯಾ
ದಕ್ಷಿಣ ಏಷ್ಯಾ ಕ್ರೀಡಾಕೂಟ: ಒಂದೇ ದಿನ 50 ಪದಕ ಗಳಿಸಿ ಸಾಧನೆ! ಟಾಪ್ ಸ್ಪಾಟ್ ಕಾಯ್ದುಕೊಂಡ ಟೀಂ ಇಂಡಿಯಾ

ಕಠ್ಮಂಡು: ವುಶು ಆಟಗಾರರು ಮತ್ತು ಈಜುಗಾರರ ಶ್ರೇಷ್ಠ ಪ್ರದರ್ಶನದಿಂದಾಗಿ ಭಾರತ ಗುರುವಾರ ನಡೆದ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ತನ್ನ ಅಗ್ರ ಸ್ಥಾನವನ್ನು ಗಟ್ಟಿಗೊಳಿಸಿಕೊಂಡಿದೆ.  ನಾಲ್ಕನೇ ದಿನದ ಸ್ಪರ್ಧೆಯಲ್ಲಿ ದೇಶವು ಒಟ್ಟಾರೆ 50 ಪದಕಗಳನ್ನು ಗೆಲ್ಲುವ ಮೂಲಕ 100 ಪದಕಗಳ ಸಂಖ್ಯೆಯನ್ನು ದಾಟಿದೆ. 

ಕ್ರೀಡಾಕೂಟದ ಇತಿಹಾಸದಲ್ಲಿ ಭಾರತ ಇದೇ ಮೊದಲ ಬಾರಿಗೆ ಒಂದೇ ದಿನ ಇಷ್ಟು ಸಂಖ್ಯೆಯ ಪದಕ ಗಳಿಸಿ ಸಾಧನೆ ಮೆರೆದಿದೆ. ಭಾರತವು  58 ಚಿನ್ನ, 41 ಬೆಳ್ಳಿ ಮತ್ತು 19 ಕಂಚಿನೊಂದಿಗೆ ಒಟ್ಟಾರೆ 118 ಪದಕ ಗಳಿಸಿ ಪದಕ ಪಟ್ಟಿಯ ಅಗ್ರಸ್ಥಾನದಲ್ಲಿ ಮುಂದುವರಿದಿದೆ. ಆತಿಥೇಯ ನೇಪಾಳ ಎರಡನೇ ಸ್ಥಾನದಲ್ಲಿದೆ.ನೇಪಾಳ 36 ಚಿನ್ನ, 26 ಬೆಳ್ಳಿ ಮತ್ತು 34 ಕಂಚಿನ ಪದಕಗಳೊಡನೆ ಒಟ್ಟು 96 ಪದಕ ಗಳಿಸಿದೆ. ಶ್ರೀಲಂಕಾ (16 ಚಿನ್ನ, 31 ಬೆಳ್ಳಿ, 52 ಕಂಚು) ಮೂರನೇ ಸ್ಥಾನದಲ್ಲಿದೆ

ಭಾರತದ ಬಹುಪಾಲು ಪದಕಗಳು ಈಜು, ವುಶು, ವೇಟ್‌ಲಿಫ್ಟಿಂಗ್ ಮತ್ತು ಅಥ್ಲೆಟಿಕ್ಸ್‌ನಿಂದ ಬಂದವು. ಭಾರತದ ಚಿನ್ನದ ಬೇಟೆ  ವುಶುನಿಂದ ಪ್ರಾರಂಭವಾಗಿದ್ದು ವುಶು ಸ್ಪರ್ಧೆಯಲ್ಲಿ ಏಳು ಸ್ವರ್ಣ ಪದಕಗಳು ಬಂದಿವೆ. 

ವೈ ಸನತೋಯ್ ದೇವಿ (ಮಹಿಳಾ ಸಾನ್ಸೌ 52 ಕೆಜಿ), ವೂನಂ  (ಮಹಿಳಾ 75 ಕೆಜಿ), ದೀಪಿಕಾ (ಮಹಿಳಾ 70 ಕೆಜಿ), ಸುಶೀಲಾ (ಮಹಿಳಾ 65 ಕೆಜಿ), ರೋಶಿಬಿನಾ ದೇವಿ (ಮಹಿಳಾ 60 ಕೆಜಿ) ) ಮತ್ತು ಸುನೀಲ್ ಸಿಂಗ್ (ಪುರುಷರ 52 ಕೆಜಿ) ಅವರುಗಳು ತಮ್ಮ ತಮ್ಮ ವಿಭಾಗದಲ್ಲಿ ಅಗ್ರಸ್ಥಾನ ಗಳಿಸಿಕೊಂಡಿದ್ದರು.ಓ ಬಿಡಿಯಾಪತಿ ಚಾನು ಮಹಿಳೆಯರ ಸಾನ್ಸೌ 56 ಕೆಜಿ ವಿಭಾಗದಲ್ಲಿ ಕಂಚಿಗೆ ಕೊರಳೊಡ್ಡಿದ್ದರು.

ಭಾರತಕ್ಕೆ ಆರು ಪದಕಗಳನ್ನು ಗಳಿಸಿಕೊಟ್ಟ (3 ಚಿನ್ನ, 2 ಬೆಳ್ಳಿ ಮತ್ತು 1 ಕಂಚು) ಟೇಕ್ವಾಂಡೋ ಆಟಗಾರರ ಪ್ರಭಾವಶಾಲಿ ಪ್ರದರ್ಶನವೂ ಮುಂದುವರೆಯಿತುಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಹಸ್ತಕ್ಷೇಪದ ನಂತರ ಹನ್ನೊಂದನೇ ಗಂಟೆಗೆ ಎಸ್‌ಎಜಿಯಲ್ಲಿ ಟೇಕ್ವಾಂಡೋ ವಿಭಾಗದಲ್ಲಿ ಭಾರತದ ಭಾಗವಹಿಸುವಿಕೆಯನ್ನು ಅನುಮತಿಸಲಾಗಿದೆ. ಪೂರ್ವಾ ದತ್ತರಿ ದೀಕ್ಷಿತ್ (ಮಹಿಳೆಯರ 49 ಕೆಜಿ), ರುಚಿಕಾ ಭಾವೆ (ಮಹಿಳೆಯರ 67 ಕೆಜಿ) ಮತ್ತು ಮಾರ್ಗರೇಟ್ ಮಾರಿಯಾ (ಮಹಿಳೆಯರ 73 ಕೆಜಿ) ಚಿನ್ನದ ಪದಕ ಗಳಿಸಿದರೆ ನೀರಜ್ ಚೌಧರಿ (ಪುರುಷರ 58 ಕೆಜಿ) ಮತ್ತು ಅಕ್ಷಯ್ ಹೂಡಾ (ಪುರುಷರ 87 ಕೆಜಿ) ತಲಾ ಒಂದು ಬೆಳ್ಳಿ ಗೆದ್ದರು. ಲಕ್ಷ್ಯ ಅವರು  80 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಗಳಿಸಿಕೊಟ್ಟಿದ್ದಾರೆ. 

ಟ್ರ್ಯಾಕ್ ಮತ್ತು ಫೀಲ್ಡ್ ಕ್ರೀಡಾಪಟುಗಳು ಗುರುವಾರ ಒಂದು ಚಿನ್ನ ಸೇರಿದಂತೆ ಆರು ಪದಕಗಳನ್ನು ಟಾರ್ಗೆಟ್ ಮಾಡಿದ್ದರು.ಟ್ರಿಪಲ್ ಜಿಗಿತಗಾರ ಕಾರ್ತಿಕ್ ಉನ್ನಿಕೃಷ್ಣನ್ ಅವರು 16.47 ಮೀಟರ್ ದೂರ ಜಿಗಿದು ಥ್ಲೆಟಿಕ್ಸ್‌ನಲ್ಲಿ ಏಕೈಕ ಚಿನ್ನದ ವಿಜೇತರಾಗಿದ್ದರೆ, ಮೊಹಮ್ಮದ್ ಸಲಾಹುದ್ದೀನ್ 16.16 ಮೀಟರ್ ಜಿಗಿದು ಭಾರತಕ್ಕೆ ಬೆಳ್ಳಿ ತಂದುಕೊಟ್ಟಿದ್ದಾರೆ.

ಸುರೇಂದರ್ ಜಯಕುಮಾರ್ (ಪುರುಷರ 110 ಮೀ ಹರ್ಡಲ್ಸ್), ಅಪರ್ಣ ರಾಯ್ (ಮಹಿಳೆಯರ 100 ಮೀ ಹರ್ಡಲ್ಸ್) ಮತ್ತು ಪ್ರಿಯಾ ಹಬ್ಬತಾನಹಲ್ಲಿ (ಮಹಿಳೆಯರ 400 ಮೀ) ತಲಾ ಒಂದು ಬೆಳ್ಳಿ ಗೆದ್ದರೆ, ಕೆ.ಎಸ್.ಜೀವನ್ (ಪುರುಷರ 400 ಮೀ) ಕಂಚು ಪಡೆದರು.

Related Article

ದಕ್ಷಿಣ ಏಷ್ಯನ್ ಕ್ರೀಡಾಕೂಟ: ಈಜುಸ್ಪರ್ಧೆಯಲ್ಲಿ ಕರ್ನಾಟಕದ ಲಿಖಿತ್ ಗೆ ಬಂಗಾರ

ದಕ್ಷಿಣ ಏಷ್ಯನ್ ಕ್ರೀಡಾಕೂಟ: ಭಾರತ ವೇಟ್‌ಲಿಫ್ಟರ್ ಗಳಿಗೆ ನಾಲ್ಕು ಚಿನ್ನ

ದಕ್ಷಿಣ ಏಷ್ಯನ್ ಕ್ರೀಡಾಕೂಟ: 71 ಪದಕ ಗಳಿಸಿದ ಭಾರತ, ಪದಕ ಪಟ್ಟಿಯಲ್ಲಿ ಟಾಪರ್!

ದಕ್ಷಿಣ ಏಷ್ಯನ್ ಕ್ರೀಡಾಕೂಟ ಟೇಬಲ್ ಟೆನಿಸ್‌- ಭಾರತಕ್ಕೆ  2 ಚಿನ್ನ, 1 ಬೆಳ್ಳಿ

ದಕ್ಷಿಣ ಏಷ್ಯನ್ ಕ್ರೀಡಾಕೂಟ: ಬ್ಯಾಡ್ಮಿಂಟನ್ ವಿಭಾಗದಲ್ಲಿ ಭಾರತಕ್ಕೆೆ 8 ಪದಕ ಖಚಿತ

ದಕ್ಷಿಣ ಏಷ್ಯಾ ಕ್ರೀಡಾಕೂಟ:10 ಮೀ. ಏರ್ ರೈಫಲ್ಸ್ ನಲ್ಲಿ ಮೆಹುಲಿಗೆ ಸ್ವರ್ಣ,ಪದಕಗಳ ಕ್ಲೀನ್ ಸ್ವೀಪ್ ಮಾಡಿದ ಭಾರತ

ದಕ್ಷಿಣ ಏಷ್ಯಾ ಕ್ರೀಡಾಕೂಟ: ಬ್ಯಾಡ್ಮಿಂಟನ್ ನಲ್ಲಿ ಭಾರತಕ್ಕೆ ಎರಡು ಚಿನ್ನ

ದಕ್ಷಿಣ ಏಷ್ಯಾ ಕ್ರೀಡಾಕೂಟ: ಟ್ರಯಥ್ಲಾನ್ ನಲ್ಲಿ ಭಾರತಕ್ಕೆ 1 ಸ್ವರ್ಣ ಸೇರಿ 4 ಪದಕಗಳ ಹಾರ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com