ದಕ್ಷಿಣ ಏಷ್ಯನ್ ಕ್ರೀಡಾಕೂಟ: 300 ಪದಕ ಗೆದ್ದು ಭಾರತೀಯರ ಹೊಸ ದಾಖಲೆ!

 ಇಲ್ಲಿ ನಡೆಯುತ್ತಿರುವ ದಕ್ಷಿಣ ಏಷ್ಯಾ ಕ್ರೀಡಾಕೂಟ 2019ದಲ್ಲಿ ಭಾರತದ ಪದಕ ಬೇಟೆ ನಿರಂತರವಾಗಿದ್ದು ಒಟ್ಟೂ ಪದಕಗಳ ಸಂಖ್ಯೆ ಮುನ್ನೂರರ ಗಡಿ ದಾಟಿದೆ. ಈ ಮೂಲಕ ಇಷ್ಟು ಸಂಖ್ಯೆಯ ಪದಕಗಳನ್ನು ತನ್ನದಾಗಿಸಿಕೊಂಡ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಯಿತು 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಕಟ್ಮಂಡು: ಇಲ್ಲಿ ನಡೆಯುತ್ತಿರುವ ದಕ್ಷಿಣ ಏಷ್ಯಾ ಕ್ರೀಡಾಕೂಟ 2019ದಲ್ಲಿ ಭಾರತದ ಪದಕ ಬೇಟೆ ನಿರಂತರವಾಗಿದ್ದು ಒಟ್ಟೂ ಪದಕಗಳ ಸಂಖ್ಯೆ ಮುನ್ನೂರರ ಗಡಿ ದಾಟಿದೆ. ಈ ಮೂಲಕ ಇಷ್ಟು ಸಂಖ್ಯೆಯ ಪದಕಗಳನ್ನು ತನ್ನದಾಗಿಸಿಕೊಂಡ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಯಿತು

ಇದಕ್ಕೂ ಮುನ್ನ ಸೋಮವಾರ ಭಾರತ ಪದಕಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿತ್ತು. ಭಾರತವು ಸೋಮವಾರದವರೆಗೆ 149 ಚಿನ್ನ, 87 ಬೆಳ್ಳಿ ಮತ್ತು 43 ಕಂಚಿನ ಪದಕಗಳನ್ನು ಗೆದ್ದಿದೆ.

ಸ್ಪರ್ಧೆಯ ಎಂಟನೇ ದಿನ ಭಾರತೀಯ ಆಟಗಾರರು 31 ಚಿನ್ನ, 12 ಬೆಳ್ಳಿ ಮತ್ತು ಮೂರು ಕಂಚು ಸೇರಿದಂತೆ 46 ಪದಕಗಳನ್ನು ಗೆದ್ದಿದ್ದಾರೆ.ಕ್ರೀಡಾಕೂಟದ ಕಡೇ ದಿನ ಭಾರತ ಒಟ್ಟೂ ಏಳು ಬಾಕ್ಸಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸಬೇಕಾಗಿರುವುದರಿಂದ ಗುವಾಹಟಿಯಲ್ಲಿನ 309 ಪದಕಗಳ ದಾಖಲೆಯನ್ನು ಮುರಿಯುವುದು ಕಷ್ಟ ಎನ್ನಲಾಗಿದೆ.

ಸೋಮವಾರ ನಡೆದ ಕ್ರೀಡಾಕೂಟಗಳಲ್ಲಿ ಮಹಿಳಾ ಫುಟ್‌ಬಾಲ್‌ನಲ್ಲಿ ನೇಪಾಳವನ್ನು 2-0 ಗೋಲುಗಳಿಂದ ಸೋಲಿಸಿದ ಭಾರತ ಚಿನ್ನದ ಪದಕ ಗಳಿಸಿ ಅಗ್ರಸ್ಥಾನದಲ್ಲಿದೆ.

ಇನ್ನೊಂದೆಡೆ ಭಾರತದ ಕೈಯಲ್ಲಿ ಸೋಲನ್ನು ಎದುರಿಸಿದ ನೇಪಾಳ ಮಹಿಳಾ ಫುಟ್ಬಾಲ್ ತಂಡದ ಕೋಚ್ ರಾಜೀನಾಮೆ ನೀಡಿದದ್ದಾರೆ.  ದಕ್ಷಿಣ ಏಷ್ಯಾ ಕ್ರೀಡಾಕೂಟದ ಫೈನಲ್‌ನಲ್ಲಿ ಆತಿಥೇಯ ರಾಷ್ಟ್ರಕ್ಕೆ ಇದು ಸತತ ಮೂರನೇ ಸೋಲಾಗಿತ್ತು.

ಇನ್ನು ಭಾರತ ಕಬಡ್ಡಿ ಆಟಗಾರರು ಮಹಿಳಾ ಹಾಗೂ ಪುರುಷ ವಿಭಾಗಗಳಲ್ಲಿ ಸಹ ಗೆಲುವು ಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. ಭಾರತವು ಬಾಕ್ಸಿಂಗ್, ಈಜು ಮತ್ತು ಜೂಡೋದಲ್ಲಿ ಚಿನ್ನ ಗೆದ್ದಿದ್ದು, ಪದಕದ ಮೊತ್ತವನ್ನು ಮತ್ತಷ್ಟು ಹೆಚ್ಚಿಸಿದೆ.

ಭಾರತೀಯ ಬ್ಯಾಸ್ಕೆಟ್‌ಬಾಲ್ ತಂಡಗಳು ಪುರುಷರು ಮತ್ತು ಮಹಿಳಾ ವಿಭಾಗಗಳಲ್ಲಿ 3x3 ಬ್ಯಾಸ್ಕೆಟ್‌ಬಾಲ್ ಸ್ಪರ್ಧೆಗಳಲ್ಲಿ ತಲಾ ಒಂದು ಚಿನ್ನ ಗೆದ್ದವು.

ಫೆನ್ಸಿಂಗ್‌ನಲ್ಲಿ, ಭಾರತದ ಮಹಿಳಾ ತಂಡವು ದಿನದ ಎರಡೂ ಸ್ಪರ್ಧೆಗಳನ್ನು ಗೆಲ್ಲುವ ಮೂಲಕ 2 ಚಿನ್ನದ ಪದಕಗಳನ್ನು ತಂದರೆ, ಪುರುಷರ ತಂಡವು ಒಂದು ಚಿನ್ನವನ್ನು ಗಳಿಸಿತು.

ಜೂಡೋದಲ್ಲಿ ಭಾರತ 4 ಚಿನ್ನ ಮತ್ತು 3 ಬೆಳ್ಳಿ ಗೆದ್ದಿದೆ. ಭಾರತೀಯ ಬಾಕ್ಸರ್ ಗಳಿಗೆ  ಒಂದು ಚಿನ್ನ ಮತ್ತು ಎರಡು ಬೆಳ್ಳಿ ಸಿಕ್ಕಿತು.

ಕ್ರೀಡಾಕೂಟದಲ್ಲಿ ಅತಿಥೇಯ ರಾಷ್ಟ್ರ ನೇಪಾಳ 49 ಚಿನ್ನ, 53 ಬೆಳ್ಳಿ ಮತ್ತು 87 ಕಂಚಿನ ಪದಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com