ಕೊರೋನಾಗೆ ಡೊಂಟ್ ಕೇರ್: ಫುಟ್ಬಾಲ್ ಪಂದ್ಯ ವೀಕ್ಷಿಸಲು ಸಾವಿರಾರೂ ಸಂಖ್ಯೆಯಲ್ಲಿ ಸೇರಿದ ಪ್ರೇಕ್ಷಕರು!

ಇಟಲಿಯಲ್ಲಿ ಕೊರೋನಾ ರೌದ್ರತಾಂಡವವಾಡಲು ಫುಟ್ಬಾಲ್ ಪಂದ್ಯವೊಂದು ಕಾರಣ ಎಂದು ಹೇಳಲಾಗುತ್ತಿದೆ. ಇಂತಹ ಆಘಾತಕಾರಿ ಸನ್ನಿವೇಶದಲ್ಲೇ ಮತ್ತೊಂದು ದೇಶದಲ್ಲಿ ಫುಟ್ಬಾಲ್ ವೀಕ್ಷಿಸಲು ಕ್ರೀಡಾಂಗಣದಲ್ಲಿ ಸಾವಿರಾರೂ ಸಂಖ್ಯೆಯಲ್ಲಿ ಪ್ರೇಕ್ಷಕರು ಸೇರಿದ್ದುಆತಂಕಕ್ಕೆ ಕಾರಣವಾಗಿದೆ. 
ಪ್ರೇಕ್ಷಕರು
ಪ್ರೇಕ್ಷಕರು
Updated on

ಬ್ರೆಸ್ಟ್: ಇಟಲಿಯಲ್ಲಿ ಕೊರೋನಾ ರೌದ್ರತಾಂಡವವಾಡಲು ಫುಟ್ಬಾಲ್ ಪಂದ್ಯವೊಂದು ಕಾರಣ ಎಂದು ಹೇಳಲಾಗುತ್ತಿದೆ. ಇಂತಹ ಆಘಾತಕಾರಿ ಸನ್ನಿವೇಶದಲ್ಲೇ ಮತ್ತೊಂದು ದೇಶದಲ್ಲಿ ಫುಟ್ಬಾಲ್ ವೀಕ್ಷಿಸಲು ಕ್ರೀಡಾಂಗಣದಲ್ಲಿ ಸಾವಿರಾರೂ ಸಂಖ್ಯೆಯಲ್ಲಿ ಪ್ರೇಕ್ಷಕರು ಸೇರಿದ್ದು ಆತಂಕಕ್ಕೆ ಕಾರಣವಾಗಿದೆ. 

ಜಾಗತಿಕ ಸಾಂಕ್ರಾಮಿಕ ರೋಗ ಕೊರೊನಾ ವೈರಸ್ ಕೋವಿಡ್ -19 ಸೋಂಕನ್ನು ಹರಡದಂತೆ ತಪ್ಪಿಸಲು, ಸಾಮಾಜಿಕ ಅಂತರದ ಬಗ್ಗೆ ಕಾಯ್ದುಕೊಳ್ಳಲು ಸೂಚಿಸಲಾಗುತ್ತಿದೆ. 

ಆದರೆ ಭಾನುವಾರ ಬೆಲಾರಸ್‌ನಲ್ಲಿ 1000 ಅಭಿಮಾನಿಗಳು ಫುಟ್ಬಾಲ್ ಪಂದ್ಯ ವೀಕ್ಷಿಸಿದರು, ಅಲ್ಲದೆ ಸಾಮಾಜಿಕ ಅಂತರವನ್ನು ಗಾಳಿಗೆ ತೂರಲಾಗಿದೆ.

ಪ್ರಪಂಚದಾದ್ಯಂತ ಕೊರೊನಾ ಹರಡುತ್ತಿರುವುದರಿಂದ ಎಲ್ಲಾ ಫುಟ್ಬಾಲ್ ಚಟುವಟಿಕೆಗಳನ್ನು ನಿಲ್ಲಿಸಲಾಗಿದೆ. ಆದರೆ ಬೆಲಾರಸ್‌ನಲ್ಲಿ ಮಾತ್ರ ಫುಟ್ಬಾಲ್ ಟೂರ್ನಿ ಆಯೋಜಿಸಲಾಗಿದ್ದು, ಪಂದ್ಯಗಳನ್ನು ವೀಕ್ಷಿಸಲು ಉತ್ತಮ ಸಂಖ್ಯೆಯ ಜನರು ಬರುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com