ಫಿಫಾ 2022: ವಿಶ್ವಕಪ್ ಫುಟ್ಬಾಲ್ ರಾಯಭಾರಿಗೂ ಕೊರೋನಾ ಸೋಂಕು!

2022ರ ಕತಾರ್‌ನಲ್ಲಿ ನಡೆಯಲಿರುವ ವಿಶ್ವಕಪ್ ಫುಟ್ಬಾಲ್‌ನ ರಾಯಭಾರಿ ಆದೆಲ್ ಖಾಮಿಸ್ ಕೊರೊನಾ ವೈರಸ್‌ಗೆ ಸೋಂಕಿತರಾಗಿದ್ದಾರೆ. ಕೋವಿಡ್ 19 ಪರೀಕ್ಷೆಯಲ್ಲಿ ಆದೆಲ್ ಖಾಮಿಸ್  ಪಾಸಿಟಿವ್ ಬಂದಿದೆ ಎಂದು ಆಯೋಜಕರು  ಮಾಹಿತಿ ನೀಡಿದ್ದಾರೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ದೋಹಾ: 2022ರ ಕತಾರ್‌ನಲ್ಲಿ ನಡೆಯಲಿರುವ ವಿಶ್ವಕಪ್ ಫುಟ್ಬಾಲ್‌ನ ರಾಯಭಾರಿ ಆದೆಲ್ ಖಾಮಿಸ್ ಕೊರೊನಾ ವೈರಸ್‌ಗೆ ಸೋಂಕಿತರಾಗಿದ್ದಾರೆ. ಕೋವಿಡ್ 19 ಪರೀಕ್ಷೆಯಲ್ಲಿ ಆದೆಲ್ ಖಾಮಿಸ್  ಪಾಸಿಟಿವ್ ಬಂದಿದೆ ಎಂದು ಆಯೋಜಕರು  ಮಾಹಿತಿ ನೀಡಿದ್ದಾರೆ. 

ಕತಾರ್‌ನ ನಿವೃತ್ತ ಮಿಡ್‌ ಫೀಲ್ಡರ್ ಆಗಿರುವ ಆದೆಲ್ ಖಾಸಿಮ್‌ಗೆ 54 ವರ್ಷ ವಯಸ್ಸಾಗಿದ್ದು, "ದುದೃಷ್ಟವಶಾತ್ ಆದೆಲ್ ಖಾಸಿಮ್ ಅವರು ಕೊರೊನಾ ವೈರಸ್‌ಗೆ ತುತ್ತಾಗಿದ್ದಾರೆ. ಶೀಘ್ರದಲ್ಲಿ ಅವರು ಚೇತರಿಸಿಕೊಳ್ಳಲಿ ಎಂದು 2022ರ ಸರ್ವೋಚ್ಛ ಆಯೋಜನಾ ಸಮಿತಿ  ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದೆ. 

ಆದೆಲ್ ಖಾಸಿಮ್ 2022ರ ಫುಟ್ಬಾಲ್ ವಿಶ್ವಕಪ್‌ನ ಪ್ರಮುಖ ಆಕರ್ಷಣೆಯಾಗಿದ್ದಾರೆ. ಫುಟ್ಬಾಲ್ ವಿಶ್ವಕಪ್‌ಗೆ ಸಿದ್ಧಗೊಳ್ಳುತ್ತಿರುವ 3 ಸ್ಟೇಡಿಯಮ್‌ಗಳಲ್ಲಿ  ಕರ್ತವ್ಯದಲ್ಲಿರುವ ಹಲವಾರು ಮಂದಿ ಕೊರೊನಾ ವೈರಸ್‌ಗೆ ತುತ್ತಾಗಿದ್ದಾರೆ ಎಂದು ಹೇಳಲಾಗುತ್ತಿದೆ. 
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com