ಬಾಕ್ಸರ್ ದುರ್ಯೋಧನ್ ಸಿಂಗ್ ಗೆ ಕೋವಿಡ್-19 ದೃಢ

ಭಾರತದ ಮುಂಚೂಣಿ ಬಾಕ್ಸರ್ ದುರ್ಯೋಧನ್ ಸಿಂಗ್ ನೇಗಿ ಅವರಿಗೆ ಕೋವಿಡ್-19 ಸೋಂಕು ಇರುವುದು ದೃಢಪಟ್ಟಿದೆ. ಹೀಗಾಗಿ ಅವರನ್ನು ಪಟಿಯಾಲಾದಿಂದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಬಾಕ್ಸರ್ ದುರ್ಯೋಧನ್ ಸಿಂಗ್  ನೇಗಿ
ಬಾಕ್ಸರ್ ದುರ್ಯೋಧನ್ ಸಿಂಗ್ ನೇಗಿ
Updated on: 

ನವದೆಹಲಿ: ಭಾರತದ ಮುಂಚೂಣಿ ಬಾಕ್ಸರ್ ದುರ್ಯೋಧನ್ ಸಿಂಗ್ ನೇಗಿ ಅವರಿಗೆ ಕೋವಿಡ್-19 ಸೋಂಕು ಇರುವುದು ದೃಢಪಟ್ಟಿದೆ. ಹೀಗಾಗಿ ಅವರನ್ನು ಪಟಿಯಾಲಾದಿಂದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಪಟಿಯಾಲಾ ಕೇಂದ್ರದ ಸಾಯ್ ಎನ್ ಎಸ್ ಎನ್ಐಎಸ್ ನಲ್ಲಿ ಅಭ್ಯಾಸ ನಡೆಸುತ್ತಿರುವ ನೇಗಿ ಅವರಲ್ಲಿ ಕೊರೋನಾ ಪತ್ತೆಯಾಗಿದೆ.

ಮುಂಜಾಗ್ರತಾ ಕ್ರಮವಾಗಿ ನೇಗಿ ಅವರನ್ನು ಸ್ಥಳೀಯ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ದೀಪಾವಳಿಗೆ ರಜೆ ಪಡೆದಿದ್ದ ನೇಗಿ ಅವರು ಕ್ವಾರಂಟೈನ್ ಅವಧಿ ಮುಗಿಸಿ ಮತ್ತೆ ತರಬೇತಿಗೆ ಮರಳಿದಾಗ ಟೆಸ್ಟ್ ನಡೆಸಲಾಯಿತು. ಈ ವೇಳೆ ಅವರಿಗೆ ಕೋವಿಡ್-19 ಇರುವುದು ಪತ್ತೆಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com