ಕುಸ್ತಿಪಟು ದೀಪಕ್ ಪುನಿಯಾಗೆ ಕೋವಿಡ್-19 ಪಾಸಿಟಿವ್

ವಿಶ್ವ ಕುಸ್ತಿ ಚಾಂಪಿಯನ್ ಷಿಪ್ ನ ಬೆಳ್ಳಿ ಪದಕ ವಿಜೇತ  ದೀಪಕ್ ಪೂನಿಯಾಗೆ ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿದೆ.
ಕುಸ್ತಿಪಟು ದೀಪಕ್ ಪುನಿಯಾ
ಕುಸ್ತಿಪಟು ದೀಪಕ್ ಪುನಿಯಾ

ನವದೆಹಲಿ: ವಿಶ್ವ ಕುಸ್ತಿ ಚಾಂಪಿಯನ್ ಷಿಪ್ ನ ಬೆಳ್ಳಿ ಪದಕ ವಿಜೇತ  ದೀಪಕ್ ಪೂನಿಯಾಗೆ ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿದೆ.

ಸೋನೆಪತ್ ನಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಆಯೋಜಿಸಿರುವು ರಾಷ್ಟ್ರೀಯ ಶಿಬಿರದಲ್ಲಿದ್ದ ದೀಪಕ್ ಪುನಿಯಾಗೆ  ಕೋವಿಡ್-19 ಪಾಸಿಟಿವ್ ಬಂದಿದ್ದು, ಸಾಯ್ ಮಾನ್ಯತೆ ಹೊಂದಿರುವ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ ಎಂದು ಸಾಯ್ ನ ನೋಡಲ್ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದೀಪಕ್ ಆರೋಗ್ಯ ಸ್ಥಿರವಾಗಿದ್ದು,ಯಾವುದೇ ರೀತಿಯ ರೋಗ ಲಕ್ಷಣಗಳು ಕಂಡುಬಂದಿಲ್ಲ, ಹೋಮ್ ಕ್ವಾರಂಟೈನ್ ನಲ್ಲಿರುವಂತೆ ವೈದ್ಯರು ಸೂಚಿಸಿದ್ದಾರೆ. ಅವರ ಹೋಮ್ ಸ್ಟೇ ಜಿಲ್ಲಾ ಕೋವಿಡ್ ನೋಡಲ್ ಅಧಿಕಾರಿಯಿಂದ ಅನುಮೋದಿಸಲ್ಪಟ್ಟಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com