ಟೋಕಿಯೊ ಒಲಂಪಿಕ್ಸ್: ಜುಡೋದಲ್ಲಿ ಭಾರತದ ಸವಾಲು ಅಂತ್ಯ

ಶನಿವಾರ ಇಲ್ಲಿ ನಡೆದ ಮಹಿಳಾ 48 ಕೆಜಿ ಆರಂಭಿಕ ಜೂಡೋ ಸುತ್ತಿನಲ್ಲಿ ಭಾರತದ ಆಟಗಾರ್ತಿ ಸುಶೀಲಾ ದೇವಿ ಲಿಕ್ಮಾಬಾಮ್ ಹಂಗೇರಿಯ ಇವಾ ಸೆರ್ನೋವಿಕ್ ವಿರುದ್ಧ 10-0 ರಿಂದ ಸೋತರು.
ಸುಶೀಲಾ ದೇವಿ
ಸುಶೀಲಾ ದೇವಿ

ಟೋಕಿಯೊ: ಶನಿವಾರ ಇಲ್ಲಿ ನಡೆದ ಮಹಿಳಾ 48 ಕೆಜಿ ಆರಂಭಿಕ ಜೂಡೋ ಸುತ್ತಿನಲ್ಲಿ ಭಾರತದ ಆಟಗಾರ್ತಿ ಸುಶೀಲಾ ದೇವಿ ಲಿಕ್ಮಾಬಾಮ್ ಹಂಗೇರಿಯ ಇವಾ ಸೆರ್ನೋವಿಕ್ ವಿರುದ್ಧ 10-0 ರಿಂದ ಸೋತರು.

ಟೋಕಿಯೊ ಒಲಿಂಪಿಕ್ ಕ್ರೀಡಾಕೂಟ 2020 ರಲ್ಲಿ ಜೂಡೋದಲ್ಲಿ ಭಾರತವನ್ನು ಪ್ರತಿನಿಧಿಸಿದ ಏಕೈಕ ಆಟಗಾರ್ತಿ ಸುಶೀಲಾ ದೇವಿ ಮತ್ತು ಅವರ ಸೋಲು ಜೂಡೋದಲ್ಲಿ ಭಾರತದ ಸವಾಲನ್ನು ಕೊನೆಗೊಳಿಸಿತು.

ಲಂಡನ್ 2012 ರ ಒಲಿಂಪಿಕ್ ಕಂಚಿನ ಪದಕ ವಿಜೇತ ಸೆರ್ನೋವಿಕ್ ಗೆಲುವಿನೊಂದಿಗೆ ಕೊನೆಯ 16 ಕ್ಕೆ ಮುನ್ನಡೆದರು, ಅಲ್ಲಿ ಅವರು ಜಪಾನ್‌ನ ಫೂನಾ ಟೋನಕಿಯನ್ನು ಎದುರಿಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com