19 ಪದಕಗಳು: ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲೇ ಭಾರತ ಶ್ರೇಷ್ಠ ಪ್ರದರ್ಶನ

ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದ ಇತಿಹಾಸದಲ್ಲೇ ಭಾರತದ ಅಥ್ಲೀಟ್ ಗಳು ಶ್ರೇಷ್ಟ ಪ್ರದರ್ಶನ ನೀಡಿದ್ದು, ಭಾರತದ ಪದಕಗಳ ಗಳಿಕೆ 19ಕ್ಕೆ ಏರಿಕೆಯಾಗಿದೆ.
ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲೇ ಭಾರತ ಶ್ರೇಷ್ಠ ಪ್ರದರ್ಶನ
ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲೇ ಭಾರತ ಶ್ರೇಷ್ಠ ಪ್ರದರ್ಶನ
Updated on

ಟೋಕಿಯೊ: ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದ ಇತಿಹಾಸದಲ್ಲೇ ಭಾರತದ ಅಥ್ಲೀಟ್ ಗಳು ಶ್ರೇಷ್ಟ ಪ್ರದರ್ಶನ ನೀಡಿದ್ದು, ಭಾರತದ ಪದಕಗಳ ಗಳಿಕೆ 19ಕ್ಕೆ ಏರಿಕೆಯಾಗಿದೆ.

ಟೋಕಿಯೊದಲ್ಲಿ ನಡೆದ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ  ಐದು ಚಿನ್ನ, ಎಂಟು ಬೆಳ್ಳಿ ಮತ್ತು ಆರು ಕಂಚಿನ ಪದಕಗಳೊಂದಿಗೆ ಒಟ್ಟು 19ಪದಕಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದ್ದು, ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತವು ತನ್ನ ಅತಿದೊಡ್ಡ ಪದಕ ದಾಖಲೆಯನ್ನು ದಾಖಲಿಸಿದೆ.

2016 ರ ರಿಯೋ ಡಿ ಜನೈರೊದಲ್ಲಿ ನಡೆದ ಕ್ರೀಡಾಕೂಟದಲ್ಲಿ ಭಾರತವು ತನ್ನ ಹಿಂದಿನ ಅತ್ಯುತ್ತಮ ನಾಲ್ಕು ಪದಕಗಳನ್ನು ಹಿಂದಿಕ್ಕಿತ್ತು. ವಾಸ್ತವವಾಗಿ, ಟೋಕಿಯೊ ಪ್ಯಾರಾಲಿಂಪಿಕ್ಸ್‌ಗಿಂತ ಮೊದಲು ಭಾರತವು ಒಟ್ಟು 12 ಪದಕಗಳನ್ನು ಪಡೆದಿತ್ತು.  

ಭಾರತವು ತನ್ನ ಮೊದಲ ಪದಕವನ್ನು ಭಾವಿನಾಬೆನ್ ಪಟೇಲ್ ಮೂಲಕ ಗೆದ್ದಿದ್ದರು. ಅವರು ಟೇಬಲ್ ಟೆನಿಸ್ ಮಹಿಳೆಯರ ಸಿಂಗಲ್ಸ್ (ಕ್ಲಾಸ್ 4)ನಲ್ಲಿ ಬೆಳ್ಳಿಪದಕ ತಂದುಕೊಟ್ಟರು. ಇದೀಗ ಹಾಲಿ ಕ್ರೀಡಾಕೂಟದಲ್ಲಿ ಕೃಷ್ಣ ನಗರ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ (SH6) ನಲ್ಲಿ ಚಿನ್ನ ಗೆದ್ದಿದ್ದು, ಕೊನೆಯ ದಿನದಂದು ಭಾರತದ ಅಭಿಯಾನವನ್ನು ಅಂತ್ಯಗೊಂಡಿದೆ.

ಹಾಲಿ ಟೂರ್ನಿಯಲ್ಲಿ ಭಾರತೀಯ ಶೂಟರ್‌ಗಳು ಎರಡು ಚಿನ್ನದ ಪದಕಗಳನ್ನು ತಂದುಕೊಟ್ಟಿದ್ದರೆ. ಅವನಿ ಲೇಖರ ಮತ್ತು ಸಿಂಗರಾಜ್ ಅದಾನ ತಲಾ ಎರಡು ಪದಕಗಳನ್ನು ಗೆದ್ದು ತಂದಿದ್ದಾರೆ. ಆರ್ಚರಿಯಲ್ಲಿ ಒಂದು ಸೇರಿದಂತೆ ಒಟ್ಟು ಐದು ಚಿನ್ನದ ಪದಕಗಳು ಭಾರತದ ತಕ್ಕೆಗೆ ಸೇರಿದೆ.

ಇತ್ತ ಭಾರತ ಅಥ್ಲೆಟಿಕ್ಸ್‌ನಲ್ಲಿ ಮಿಂಚು ಹರಿಸಿದ್ದು,  ಹೈ ಜಂಪ್ ನಲ್ಲಿ ನಾಲ್ಕು, ಜಾವೆಲಿನ್ ಎಸೆತದಲ್ಲಿ ಮೂರು ಮತ್ತು ಡಿಸ್ಕಸ್ ಥ್ರೋನಲ್ಲಿ ಒಂದು ಪದಕ.  ಜಾವೆಲಿನ್ ಎಸೆತಗಾರ ಸುಮಿತ್ ಆಂಟಿಲ್ ಭಾರತಕ್ಕಾಗಿ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಏಕೈಕ ಅಥ್ಲೆಟಿಕ್ಸ್ ಚಿನ್ನದ ಪದಕವನ್ನು ಪಡೆದಿದ್ದಾರೆ.  ಪ್ರಮೋದ್ ಭಗತ್ ಮತ್ತು ಕೃಷ್ಣ ನಗರ ಇಬ್ಬರೂ ಚಿನ್ನ ಗೆದ್ದಿದ್ದು, ಆ ಮೂಲಕ ಭಾರತೀಯ ಶಟ್ಲರ್‌ಗಳು ಒಟ್ಟು ನಾಲ್ಕು ಪದಕಗಳನ್ನು ಜಯಿಸಿದ್ದಾರೆ.  

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com