ಮಾರ್ಕೆಟಾ ವೊಂಡ್ರೊಸೊವಾ
ಮಾರ್ಕೆಟಾ ವೊಂಡ್ರೊಸೊವಾ

ವಿಂಬಲ್ಡನ್ ಗೆದ್ದ ಮಾರ್ಕೆಟಾ ವೊಂಡ್ರೊಸೊವಾ; ಗ್ರ್ಯಾನ್ ಸ್ಲಾಮ್ ಗೆದ್ದ ಮೊದಲ ಶ್ರೇಯಾಂಕ ರಹಿತ ಆಟಗಾರ್ತಿ

ಜೆಕ್ ಗಣರಾಜ್ಯದ ಮಾರ್ಕೆಟಾ ವೊಂಡ್ರೊಸೊವಾ ವಿಂಬಲ್ಡನ್ ಗೆದ್ದಿದ್ದು, ಗ್ರ್ಯಾನ್ ಸ್ಲ್ಯಾಮ್ ಗೆದ್ದ ಮೊದಲ ಶ್ರೇಯಾಂಕ ರಹಿತ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 

ಲಂಡನ್: ಜೆಕ್ ಗಣರಾಜ್ಯದ ಮಾರ್ಕೆಟಾ ವೊಂಡ್ರೊಸೊವಾ ವಿಂಬಲ್ಡನ್ ಗೆದ್ದಿದ್ದು, ಗ್ರ್ಯಾನ್ ಸ್ಲ್ಯಾಮ್ ಗೆದ್ದ ಮೊದಲ ಶ್ರೇಯಾಂಕ ರಹಿತ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 

ಟ್ಯುನಿಷಿಯಾದ ಓನ್ಸ್ ಜಬೇರ್ ಅವರನ್ನು ಮಣಿಸಿ ಮಾರ್ಕೆಟಾ ವೊಂಡ್ರೊಸೊವಾ ವಿಂಬಲ್ಡನ್ ಗೆದ್ದಿದ್ದಾರೆ. ಮಾರ್ಕೆಟಾ ವೊಂಡ್ರೊಸೊವಾ, ಆಲ್ ಇಂಗ್ಲೆಂಡ್ ಕ್ಲಬ್ ನಲ್ಲಿ ಫೈನಲ್ ತಲುಪಿದ ಮೊದಲ ಶ್ರೇಯಾಂಕ ರಹಿತ ಆಟಗಾರ್ತಿಯಾಗಿದ್ದಾರೆ. 2022 ರಲ್ಲಿ ಮಾರ್ಕೆಟಾ ವೊಂಡ್ರೊಸೊವಾ 99 ನೇ ಶ್ರೇಯಾಂಕವನ್ನು ಹೊಂದಿದ್ದರು. 

ಇನ್ನು ಈ ಬಾರಿ ಮಾರ್ಕೆಟಾ ವೊಂಡ್ರೊಸೊವಾ ವಿರುದ್ಧ ಪರಾಭವಗೊಂಡಿರುವ ಜಬೇರ್ ಕಳೆದ ವರ್ಷದ ವಿಂಬಲ್ಡನ್ ನಲ್ಲಿಯೂ ಸೋಲು ಕಂಡಿದ್ದರು.

Related Stories

No stories found.

Advertisement

X
Kannada Prabha
www.kannadaprabha.com