
ಪ್ಯಾರಿಸ್: ಶುಕ್ರವಾರ ಇಲ್ಲಿ ನಡೆದ ಪುರುಷರ ಹಾಕಿ ಪೂಲ್ ಬಿ ಪಂದ್ಯದಲ್ಲಿ ಭಾರತ ತಂಡ 3-2 ಗೋಲುಗಳ ಅಂತರದಿಂದ ತನ್ನ ಪ್ರಬಲ ಎದುರಾಳಿ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿತು. ಪ್ಯಾರಿಸ್ ಒಲಿಂಪಿಕ್ಸ್‌ನ ಪುರುಷರ ಹಾಕಿ ಸ್ಪರ್ಧೆಯ ಕ್ವಾರ್ಟರ್‌ಫೈನಲ್‌ಗೆ ಭಾರತ ಈಗಾಗಲೇ ಅರ್ಹತೆ ಪಡೆದಿದೆ.
ನಾಯಕ ಹರ್ಮನ್ ಪ್ರೀತ್ ಸಿಂಗ್ 13 ಹಾಗೂ 32ನೇ ನಿಮಿಷದಲ್ಲಿ 2 ಗೋಲು ಗಳಿಸಿದರೆ, ಅಭಿಷೇಕ್ 12ನೇ ನಿಮಿಷದಲ್ಲಿ ಮತ್ತೊಂದು ಗೋಲು ಗಳಿಸುವ ಮೂಲಕ ಭಾರತಕ್ಕೆ ಮುನ್ನಡೆ ತಂದುಕೊಟ್ಟರು. ಆಸ್ಟ್ರೇಲಿಯಾದ ಪರ ಟಾಮ್ ಕ್ರೇಗ್ (25ನೇ ನಿಮಿಷ ) ಮತ್ತು ಬ್ಲೇಕ್ ಗೋವರ್ಸ್ (55ನೇ) ಗೋಲು ಗಳಿಸಿದರು.
ಕೊನೆಯ ಅಂತರಾಷ್ಟ್ರೀಯ ಪಂದ್ಯಾವಳಿ ಆಡುತ್ತಿರುವ ಭಾರತದ ಅನುಭವಿ ಗೋಲ್‌ಕೀಪರ್ ಪಿಆರ್ ಶ್ರೀಜೇಶ್ ಅದ್ಬುತ ಪ್ರದರ್ಶನದ ಮೂಲಕ ತಂಡಕ್ಕೆ ನೆರವಾದರು. 1972ರ ಮ್ಯೂನಿಚ್‌ನಲ್ಲಿ ನಡೆದ ಒಲಿಂಪಿಕ್ಸ್ ನಂತರ ಸುಮಾರು 52 ವರ್ಷಗಳ ನಂತರ ಭಾರತ ಆಸ್ಟ್ರೇಲಿಯಾ ವಿರುದ್ಧ ಒಲಿಂಪಿಕ್ಸ್‌ನಲ್ಲಿ ಗೆಲುವು ಸಾಧಿಸಿದ ಮೊದಲ ಪಂದ್ಯ ಇದಾಗಿದೆ.
Advertisement