10 ವರ್ಷ ಸಂಸಾರ, 5 ಮಕ್ಕಳ ಬಳಿಕ ಜಾರ್ಜಿನಾ ರೋಡ್ರಿಗಸ್‌ ವಿವಾಹವಾದ ಖ್ಯಾತ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ!

ರೊನಾಲ್ಡೊ ಅವರಿಗೆ ಅತ್ಯಂತ ಆಪ್ತರಾಗಿರುವ ಬ್ರಿಟಿಷ್ ಪತ್ರಕರ್ತ ಪಿಯರ್ಸ್ ಮೋರ್ಗನ್, ಆ ಜೋಡಿಯು ವಿವಾಹದ ಉಂಗುರಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡ ನಂತರದ ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ.
Cristiano Ronaldo married Georgina Rodriguez
ಜಾರ್ಜಿನಾ ರೊಡ್ರಿಗಸ್ ಅವರನ್ನು ವಿವಾಹವಾದ ಕ್ರಿಸ್ಟಿಯಾನೊ ರೊನಾಲ್ಡೊ.
Updated on

ಪೋರ್ಚುಗಲ್‌ನ ಖ್ಯಾತ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಇದೀಗ ತನ್ನ ಅಭಿಮಾನಿಗಳನ್ನು ಅಚ್ಚರಿಗೊಳಿಸಿದ್ದಾರೆ. ಆಗಸ್ಟ್ 11 ರಂದು ಅವರು ತಮ್ಮ ದೀರ್ಘಕಾಲದ ಸಂಗಾತಿ ಜಾರ್ಜಿನಾ ರೊಡ್ರಿಗಸ್ ಅವರೊಂದಿಗೆ ವಿವಾಹವಾಗಿದ್ದು, ಆ ಫೋಟೊಗಳು ಇದೀಗ ಇಂಟರ್ನೆಟ್‌ನಲ್ಲಿ ಭಾರಿ ಸಂಚಲನ ಸೃಷ್ಟಿಸಿವೆ. ರೊನಾಲ್ಡೊ ಸಾಮಾಜಿಕ ಮಾಧ್ಯಮದಲ್ಲಿ ಜಾರ್ಜಿನಾ ಜೊತೆಗಿನ ತಮ್ಮ ವಿವಾಹದ ಚಿತ್ರವನ್ನು ಹಂಚಿಕೊಂಡ ನಂತರ ಈ ಸುದ್ದಿ ಹೊರಬಿದ್ದಿದೆ. ಇಬ್ಬರೂ ಮದುವೆಯ ಉಂಗುರ ಧರಿಸಿ ಪರಸ್ಪರ ಕೈ ಹಿಡಿದಿರುವುದನ್ನು ಕಾಣಬಹುದು. ದಂಪತಿ 'ತಮ್ಮ ಐದು ಮಕ್ಕಳ ಉಪಸ್ಥಿತಿಯಲ್ಲಿ ಖಾಸಗಿ ಮತ್ತು ಆತ್ಮೀಯ ಸಮಾರಂಭದಲ್ಲಿ' ವಿವಾಹವಾಗಿದ್ದಾರೆ ಎಂದು ವರದಿಯಾಗಿದೆ.

ಬ್ರನ್ಸ್‌ವಿಕ್ ಗ್ರೂಪ್ ತನ್ನ ಪ್ರಕಟಣೆಯಲ್ಲಿ ತಿಳಿಸಿರುವಂತೆ, ಪಶ್ಚಿಮ ಪೋರ್ಚುಗಲ್‌ನ ಕರಾವಳಿ ಪಟ್ಟಣವಾದ ಕ್ಯಾಸ್ಕೈಸ್‌ನಲ್ಲಿ (ರಾಜಧಾನಿ ಲಿಸ್ಬನ್ ಸಮೀಪ) ಈ ಸಮಾರಂಭ ನಡೆದಿದೆ. ದಂಪತಿಗೆ ಐವರು ಮಕ್ಕಳಿದ್ದು, ಕ್ರಿಸ್ಟಿಯಾನೋ ಜೂನಿಯರ್, ಅವಳಿಗಳಾದ ಇವಾ ಮತ್ತು ಮಟಿಯೊ, ಅಲಾನಾ ಮಾರ್ಟಿನಾ ಹಾಗೂ ಬೆಲ್ಲಾ ಎಸ್‌ಮೆರಾಲ್ಡಾ ಎಂಬ ಹೆಸರಿಡಲಾಗಿದೆ. ಇನ್‌ಸ್ಟಾಗ್ರಾಂನಲ್ಲಿನ ವಿವಾಹದ ಪೋಸ್ಟ್‌ಗೆ ರೊನಾಲ್ಡೊ 'C❤️G' ಎಂದು ಶೀರ್ಷಿಕೆ ನೀಡಿದ್ದಾರೆ.

ರೊನಾಲ್ಡೊ ಅವರಿಗೆ ಅತ್ಯಂತ ಆಪ್ತರಾಗಿರುವ ಬ್ರಿಟಿಷ್ ಪತ್ರಕರ್ತ ಪಿಯರ್ಸ್ ಮೋರ್ಗನ್, ಆ ಜೋಡಿಯು ವಿವಾಹದ ಉಂಗುರಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡ ನಂತರದ ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ.

2016ರಲ್ಲಿ ಮ್ಯಾಡ್ರಿಡ್‌ನಲ್ಲಿ ಭೇಟಿಯಾದ ನಂತರ ರೊನಾಲ್ಡೊ ಮತ್ತು ಜಾರ್ಜಿನಾ ರೋಡ್ರಿಗಸ್ ಕಳೆದ ಒಂದು ದಶಕದಿಂದ ಒಟ್ಟಿಗೆ ವಾಸವಾಗಿದ್ದಾರೆ. ಮ್ಯಾಡ್ರಿಡ್‌ನಲ್ಲಿನ ಆಕಸ್ಮಿಕ ಭೇಟಿಯಿಂದ ಆರಂಭವಾದ ಅವರ ಸಂಬಂಧವು, ಕಳೆದ ಹತ್ತು ವರ್ಷಗಳಲ್ಲಿ ಸ್ಪೇನ್, ಇಟಲಿ, ಯುಕೆ ಮತ್ತು ಸೌದಿ ಅರೇಬಿಯಾದಲ್ಲಿ ಐವರು ಮಕ್ಕಳನ್ನು ಪೋಷಿಸುತ್ತಿರುವ ಒಂದು ಸುಭದ್ರ ಕುಟುಂಬವಾಗಿ ವಿಕಸನಗೊಂಡಿದೆ.

Cristiano Ronaldo married Georgina Rodriguez
ವಿರಾಟ್ ಕೊಹ್ಲಿ ನುಡಿದಂತೆ ನಡೆಯುತ್ತಾರೆ, ಈ ವಯಸ್ಸಿನಲ್ಲಿ ಅವರ ಎನರ್ಜಿ ನಿಜಕ್ಕೂ ಆಶ್ಚರ್ಯ: ಆರ್ ಅಶ್ವಿನ್

ವರದಿಗಳ ಪ್ರಕಾರ, ಇವರಿಬ್ಬರೂ ಮೊದಲ ಬಾರಿಗೆ ಮ್ಯಾಡ್ರಿಡ್‌ನಲ್ಲಿದ್ದ 'ಗುಚ್ಚಿ' (Gucci) ಮಳಿಗೆಯೊಂದರಲ್ಲಿ ಭೇಟಿಯಾದರು; ಅಲ್ಲಿ ಜಾರ್ಜಿನಾ ಸೇಲ್ಸ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಆ ಸಮಯದಲ್ಲಿ ರೊನಾಲ್ಡೊ 'ಲಾ ಲಿಗಾ'ದ ಪ್ರಮುಖ ಕ್ಲಬ್ ಆದ 'ರಿಯಲ್ ಮ್ಯಾಡ್ರಿಡ್' ಪರವಾಗಿ ಆಡುತ್ತಿದ್ದರು. ಕೆಲ ದಿನಗಳ ನಂತರ, ಅವರು ಒಂದು ಬ್ರಾಂಡ್ ಕಾರ್ಯಕ್ರಮದಲ್ಲಿ ಮತ್ತೆ ಭೇಟಿಯಾದರು; ಅಲ್ಲಿ ಜಾರ್ಜಿನಾ ಅವರ ಕೆಲಸದ ಸಮಯದ ಹೊರತಾಗಿ, ಹೆಚ್ಚು ನಿರಾಳವಾದ ವಾತಾವರಣದಲ್ಲಿ ಪರಸ್ಪರ ಮಾತನಾಡಲು ಅವರಿಗೆ ಸಾಧ್ಯವಾಯಿತು.

ನವೆಂಬರ್ 2017ರಲ್ಲಿ, ಜಾರ್ಜಿನಾ ಅವರು ಮಗಳು ಅಲಾನಾ ಮಾರ್ಟಿನಾಳಿಗೆ ಜನ್ಮ ನೀಡಿದರು. ಅವರ ಎರಡನೇ ಮಗು ಬೆಲ್ಲಾ ಎಸ್‌ಮೆರಾಲ್ಡಾ 2017ರಲ್ಲಿ ಜನಿಸಿತು. ದುರಾದೃಷ್ಟವಶಾತ್, ಬೆಲ್ಲಾಳ ಅವಳಿ ಸಹೋದರ ಏಂಜಲ್ ಜನನದ ಸಮಯದಲ್ಲಿ ಮೃತಪಟ್ಟನು. ಮೊದಲ ಮಗು ಜನನಕ್ಕೂ ಕೆಲವು ತಿಂಗಳುಗಳ ಮೊದಲು, ಬಾಡಿಗೆ ತಾಯಿಯ (surrogate) ಮೂಲಕ ಅವಳಿ ಮಕ್ಕಳಾದ ಮಟಿಯೊ ಮತ್ತು ಇವಾ ಮಾರಿಯಾ ಅವರನ್ನು ಸ್ವಾಗತಿಸಿದ್ದರು; ಜಾರ್ಜಿನಾ ಭೇಟಿಗೂ ಮುನ್ನವೇ ರೊನಾಲ್ಡೊ ಅವರಿಗೆ ಜೂನಿಯರ್ ರೊನಾಲ್ಡೋ ಎಂಬ ಪುತ್ರನಿದ್ದನು. ಆತನ ತಾಯಿ ಯಾರೆಂಬುದು ಇಂದಿಗೂ ಗೌಪ್ಯವಾಗಿಯೇ ಉಳಿದಿದೆ.

ಪೋರ್ಚುಗಲ್ ಪರ 146 ಗೋಲುಗಳನ್ನು ಗಳಿಸಿ ಅಂತರರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ ದಾಖಲೆಯ ಗೋಲು ಗಳಿಸಿದ ಆಟಗಾರನಾಗಿರುವ ಈ ಪೋರ್ಚುಗೀಸ್ ದಿಗ್ಗಜ, ಐದು ಬಾರಿ 'ಬ್ಯಾಲನ್ ಡಿ'ಓರ್' (Ballon d'Or) ಪ್ರಶಸ್ತಿಯನ್ನು ಗೆದ್ದಿದ್ದಾರೆ. ಇತ್ತೀಚೆಗಷ್ಟೇ ಅವರು ತಮ್ಮ ದಾಖಲೆಯ ಆರನೇ ವಿಶ್ವಕಪ್‌ನಲ್ಲಿ ರಾಷ್ಟ್ರೀಯ ತಂಡದ ಪರ ಕಣಕ್ಕಿಳಿದಿದ್ದರು.

ಕ್ಲಬ್ ಮಟ್ಟದಲ್ಲಿ, ರೊನಾಲ್ಡೊ ಸೌದಿ ಪ್ರೊ ಲೀಗ್ ತಂಡವಾದ 'ಅಲ್ ನಾಸ್ರ್' ಪರ ಆಡುತ್ತಾರೆ. ಅವರು ಶನಿವಾರದಂದು ದೇಶೀಯ ಆವೃತ್ತಿಯನ್ನು ಆರಂಭಿಸುವ ನಿರೀಕ್ಷೆಯಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com