ಮೈದಾನದಲ್ಲಿ ಘಳ ಘಳನೇ ಕಣ್ಣೀರು ಹಾಕಿದ KD ಬೆಡಗಿ! ನೋರಾ ಫತೇಹಿ ಕಣ್ಣೀರು ಹಾಕಿದ್ಯಾಕೆ?

ಧ್ರುವ ಸರ್ಜಾ ಅಭಿನಯದ KD: ದಿ ಡೆವಿಲ್ ಸಿನಿಮಾದ ಸರ್ಸೆ ಸರ್ಸೆ ಸೆರಗ ಸರ್ಸೆ ವಿವಾದದ ನಂತರ ಹೆಚ್ಚು ಸದ್ದು ಮಾಡಿದ್ದ ಬಾಲಿವುಡ್ ಬೆಡಗಿ ನೋರಾ ಫತೇಹಿ ಅವರು, ಇದೀಗ ಮೈದಾನದಲ್ಲಿ ಘಳ ಘಳನೇ ಕಣ್ಣೀರು ಹಾಕಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Nora Fatehi
ಕಣ್ಣೀರು ಹಾಕಿದ ನೋರಾ ಫತೇಹಿ Online Desk
Updated on

ಧ್ರುವ ಸರ್ಜಾ (Dhruva Sarja) ಅಭಿನಯದ KD: ದಿ ಡೆವಿಲ್ ಸಿನಿಮಾದ ಸರ್ಸೆ ಸರ್ಸೆ ಸೆರಗ ಸರ್ಸೆ ವಿವಾದದ ನಂತರ ಹೆಚ್ಚು ಸದ್ದು ಮಾಡಿದ್ದ ಬಾಲಿವುಡ್ ಬೆಡಗಿ ನೋರಾ ಫತೇಹಿ (Nora Fatehi) ಅವರು, ಇದೀಗ ಮೈದಾನದಲ್ಲಿ ಘಳ ಘಳನೇ ಕಣ್ಣೀರು ಹಾಕಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಾಮಾನ್ಯವಾಗಿ ಡ್ಯಾನ್ಸ್ ಮತ್ತು ಗ್ಲಾಮರ್ ಮೂಲಕ ಗಮನ ಸೆಳೆಯುವ ನೋರಾ ಅವರು ಈ ಬಾರಿ ತಮ್ಮ ಭಾವುಕತೆಯಿಂದ ಫ್ಯಾನ್ಸ್ ಗಮನ ಸೆಳೆದಿದ್ದಾರೆ. ಹಾಗಾದ್ರೆ, ಫುಟ್ಬಾಲ್ (Football) ಮೈದಾನದಲ್ಲಿಯೇ ನೋರಾ ಫತೇಹಿ ಕಣ್ಣೀರು ಹಾಕಿದ್ಯಾಕೆ ಗೊತ್ತಾ? ಇಲ್ಲಿದೆ ನೋಡಿ ಆ ಕುರಿತ ವರದಿ:

Nora Fatehi
FIFA World Cup 2026 | 'ನನಗಿಂತ ಮೊದಲು ಪೋರ್ಚುಗಲ್ ಒಂದೇ ಒಂದು ಪ್ರಶಸ್ತಿಯನ್ನೂ ಗೆದ್ದಿರಲಿಲ್ಲ'; ಇದು ನನ್ನ ಕೊನೆಯ ವಿಶ್ವಕಪ್: ಕ್ರಿಸ್ಟಿಯಾನೊ ರೊನಾಲ್ಡೊ

ಕಣ್ಣೀರು ಹಾಕಿದ್ಯಾಕೆ KD ಬೆಡಗಿ?

ಫಿಫಾ ವಿಶ್ವಕಪ್ 2026ರ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ವಿರುದ್ಧ ಮೊರಾಕೊ ತಂಡವು ಸೋಲನ್ನು ಅನುಭವಿಸಿದಾಗ, ನೋರಾ ಫತೇಹಿ ಕ್ರೀಡಾಂಗಣದಲ್ಲೇ ಅತ್ಯಂತ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ.

ಹೌದು, ನೋರಾ ಫತೇಹಿ ಕೆನಡಾದಲ್ಲಿ ಹುಟ್ಟಿ ಬೆಳೆದಿದ್ದರೂ, ಅವರ ಪೋಷಕರು ಮೊರಾಕೊ ಮೂಲದವರಾಗಿದ್ದಾರೆ. ಅದ್ರಂತೆ, ತಮ್ಮ ತಾಯ್ನಾಡು ಮತ್ತು ಮೊರಾಕೊ ಫುಟ್‌ಬಾಲ್ ತಂಡದ ಮೇಲೆ ಅವರಿಗಿದ್ದ ಅತಿಯಾದ ಅಭಿಮಾನವೇ ಈ ಭಾವುಕ ಕ್ಷಣಕ್ಕೆ ಮುಖ್ಯ ಕಾರಣವಾಗಿದೆ ಎನ್ನಲಾಗಿದೆ.

ಮುಂದುವರೆದು, ಈ ಬಾರಿಯ ವಿಶ್ವಕಪ್‌ನಲ್ಲಿ ಮೊರಾಕೊ ತಂಡವು ಅದ್ಭುತ ಪ್ರದರ್ಶನ ನೀಡುವ ಮೂಲಕ ಕ್ವಾರ್ಟರ್ ಫೈನಲ್‌ ಹಂತಕ್ಕೆ ತಲುಪಿತ್ತು. ಇನ್ನು, ನೋರಾ ಫತೇಹಿ ಕೂಡ ಆರಂಭದಿಂದಲೂ ಪ್ರತಿ ಪಂದ್ಯದಲ್ಲೂ ಕ್ರೀಡಾಂಗಣದಲ್ಲಿ, ಮೊರಾಕೊ ತಂಡದ ಜರ್ಸಿ ಧರಿಸಿ ಬೆಂಬಲಿಸುತ್ತಿದ್ದರು. ಆದರೆ, ಜುಲೈ 2026ರಲ್ಲಿ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ವಿರುದ್ಧ ಮೊರಾಕೊ 2-0 ಗೋಲುಗಳಿಂದ ಸೋತು ಟೂರ್ನಿಯಿಂದ ಹೊರಬಿದ್ದಾಗ, ನೋರಾ ಅವರಿಗೆ ತಮ್ಮ ದೇಶದ ವಿಶ್ವಕಪ್ ಕನಸು ಭಗ್ನಗೊಂಡಿದ್ದನ್ನು ತಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಹಾಗಾಗಿ, ಪಂದ್ಯ ಮುಗಿಯುತ್ತಿದ್ದಂತೆ ನೋರಾ ಮೈದಾನದ ಗ್ಯಾಲರಿಯಲ್ಲಿ ಕುಳಿತೇ ಕಣ್ಣೀರು ಹಾಕಿದ್ದಾರೆ.

Nora Fatehi
Watch | ಸರ್ಕೆ ಚುನಾರ್ ಹಾಡು ವಿವಾದ! ನೋರಾ ಫತೇಹಿ ಕ್ಷಮೆಯಾಚನೆ

ವಿಶೇಷವೆಂದರೆ, ನೋರಾ ಫತೇಹಿಗೆ ಈ ಬಾರಿಯ ಫಿಫಾ ವಿಶ್ವಕಪ್‌ನೊಂದಿಗೆ ತುಂಬಾ ಸ್ಪೆಷಲ್. ಯಾಕಂದ್ರೆ, 2026ರ ಫಿಫಾ ವಿಶ್ವಕಪ್ ಅಧಿಕೃತ ಗೀತೆಗಳಾದ ಸೀರ್ ಸೀರ್ ಮತ್ತು ಚಾಂಪಿಯನ್ಸ್ ಹಾಡುಗಳಿಗೆ ಅದ್ಭುತವಾಗಿ ನೃತ್ಯ ಪ್ರದರ್ಶನ ನೀಡುವ ಮೂಲಕ ಮಿಂಚಿದ್ದರು. ಇದರ ಜೊತೆಗೆ, ಡಲ್ಲಾಸ್‌ನಲ್ಲಿ ನಡೆದ ಪಂದ್ಯವೊಂದರ ವೇಳೆ ಭಾರತೀಯ ಅಭಿಮಾನಿಗಳು ಮೊರಾಕೊ ಜರ್ಸಿ ಧರಿಸಿ, ನೋರಾ ಮತ್ತು ಅವರ ದೇಶದ ತಂಡಕ್ಕೆ ತೋರಿದ ಬೆಂಬಲ ಕಂಡು ನೋರಾ ಆನಂದಬಾಷ್ಪ ಸುರಿಸಿದ್ದರು.

ಒಟ್ಟಾರೆಯಾಗಿ, ತಾಯ್ನಾಡಿನ ಮೇಲಿನ ಅಪಾರ ಪ್ರೀತಿ, ಕ್ರೀಡಾಭಿಮಾನ ಮತ್ತು ವಿಶ್ವಕಪ್‌ನಿಂದ ಹೊರಬಿದ್ದ ತೀವ್ರ ನಿರಾಶೆ ನೋರಾ ಫತೇಹಿ ಅವರನ್ನು ಕಣ್ಣೀರು ಹಾಕುವಂತೆ ಮಾಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com