ನವದೆಹಲಿ: ಗೊಂಡಾದಲ್ಲಿ ನಡೆಯಲಿರುವ ರಾಷ್ಟ್ರೀಯ ಓಪನ್ ರ‍್ಯಾಂಕಿಂಗ್ ಟೂರ್ನಮೆಂಟ್‌ನಲ್ಲಿ ತನಗೆ ಅಥವಾ ತನ್ನ ತಂಡದ ಸದಸ್ಯರಿಗೆ ಏನಾದರೂ ಅಹಿತಕರ ಘಟನೆ ನಡೆದರೆ ಭಾರತ ಸರ್ಕಾರವೇ ಹೊಣೆ ಕುಸ್ತಿಪಟು ವಿನೇಶ್ ಫೋಗಟ್ ಎಚ್ಚರಿಸಿದ್ದಾರೆ. ಜೊತೆಗೆ, ತಮ್ಮ ಪುನರಾಗಮನದ ಸ್ಪರ್ಧೆಯಲ್ಲಿ 'ಪಕ್ಷಪಾತದ ಅಂಪೈರಿಂಗ್' ಬಗ್ಗೆಯೂ ಕಳವಳ ವ್ಯಕ್ತಪಡಿಸಿದ್ದಾರೆ.
ಸುಮಾರು 18 ತಿಂಗಳ ನಂತರ ಮತ್ತೆ ಸ್ಪರ್ಧೆಗೆ ಮರಳುವ ಮುನ್ನ ವಿಡಿಯೋ ಸಂದೇಶದಲ್ಲಿ, ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರಿಗೆ ಸಂಬಂಧಿಸಿದ ಸ್ಥಳದಲ್ಲಿ ಸ್ಪರ್ಧೆ ನಡೆಯಲಿದ್ದು, ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (WFI) ಮಾಜಿ ಮುಖ್ಯಸ್ಥರಿಗೆ ಹತ್ತಿರವಿರುವ ವ್ಯಕ್ತಿಗಳಿಂದ ಪಂದ್ಯಾವಳಿಯಲ್ಲಿ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ಫೋಗಟ್ ಆರೋಪಿಸಿದ್ದಾರೆ.
'ಸ್ಪರ್ಧೆಯ ಸಮಯದಲ್ಲಿ ನನಗೆ, ನನ್ನ ತಂಡಕ್ಕೆ ಅಥವಾ ಬೆಂಬಲಿಗರಿಗೆ ಯಾವುದೇ ಅಹಿತಕರ ಘಟನೆ ಸಂಭವಿಸಿದರೆ, ಭಾರತ ಸರ್ಕಾರವೇ ಜವಾಬ್ದಾರವಾಗಿರುತ್ತದೆ. ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ಮಾಧ್ಯಮಗಳು ಮತ್ತು ಕ್ರೀಡಾ ಸಮುದಾಯವು ಸ್ಥಳದಲ್ಲಿ ಹಾಜರಿರಬೇಕು' ಎಂದು ವಿನೇಶ್ ಒತ್ತಾಯಿಸಿದರು.
'ಅವರ (ಬ್ರಿಜ್ ಭೂಷಣ್ ಸಿಂಗ್) ಪ್ರಭಾವ ಪ್ರಬಲವಾಗಿರುವ ಸ್ಥಳದಲ್ಲಿ ಪಂದ್ಯಾವಳಿಯನ್ನು ಆಯೋಜಿಸಲಾಗುತ್ತಿದೆ. ಯಾವ ಪಂದ್ಯವನ್ನು ಯಾರು ನಿರ್ವಹಿಸುತ್ತಾರೆ, ಎಷ್ಟು ಅಂಕಗಳನ್ನು ನೀಡಲಾಗುತ್ತದೆ, ಯಾರು ಮ್ಯಾಟ್ ಅಧ್ಯಕ್ಷರಾಗಿ ಕುಳಿತುಕೊಳ್ಳುತ್ತಾರೆ, ಎಲ್ಲವನ್ನೂ ಅವರು ಮತ್ತು ಅವರ ಜನರು ನಿಯಂತ್ರಿಸಬಹುದು' ಎಂದು ಹೇಳಿದರು.
ಇತ್ತೀಚಿನ ತಿಂಗಳುಗಳಲ್ಲಿ ತರಬೇತಿಯನ್ನು ಪುನರಾರಂಭಿಸಿರುವ 31 ವರ್ಷದ ಅವರು, 'ಪ್ರಾಮಾಣಿಕವಾಗಿ' ಮ್ಯಾಟ್‌ಗೆ ಮರಳಲು ಮತ್ತು ದೇಶಕ್ಕಾಗಿ ಮತ್ತೆ ಪದಕಗಳನ್ನು ಗೆಲ್ಲಲು ಬಯಸುತ್ತೇನೆ. ಆದರೆ, ಲೆವೆಲ್ ಪ್ಲೇಯಿಂಗ್ ಫೀಲ್ಡ್ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸಿದರು.
'ನನಗೆ ಯಾವುದೇ ಸವಲತ್ತು ಅಥವಾ ವಿಶೇಷವಾಗಿ ಸತ್ಕರಿಸುವುದು ಬೇಡ. ಫಲಿತಾಂಶಗಳು ಮ್ಯಾಟ್‌ನಲ್ಲಿರುವ ಕ್ರೀಡಾಪಟುಗಳ ಕಠಿಣ ಪರಿಶ್ರಮವನ್ನು ಪ್ರತಿಬಿಂಬಿಸಬೇಕೆಂದು ನಾನು ಬಯಸುತ್ತೇನೆ' ಎಂದು ಅವರು ಹೇಳಿದರು.
ವಿನೇಶ್ ಈಗ ರಾಜಕಾರಣಿಯಾಗಿದ್ದು, 2024ರ ಅಕ್ಟೋಬರ್‌ನಲ್ಲಿ ಕಾಂಗ್ರೆಸ್ ಟಿಕೆಟ್‌ನಲ್ಲಿ ಜುಲಾನಾ ಕ್ಷೇತ್ರದಿಂದ ಹರಿಯಾಣ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದಾರೆ.
ಸಂತ್ರಸ್ತರ ಗುರುತು ಮತ್ತು ಘನತೆಯನ್ನು ರಕ್ಷಿಸುವ ಕುರಿತು ಸುಪ್ರೀಂ ಕೋರ್ಟ್‌ನ ಮಾರ್ಗಸೂಚಿಗಳನ್ನು ಉಲ್ಲೇಖಿಸುತ್ತಾ, ಸಂದರ್ಭಗಳಿಂದಾಗಿ ಸಾರ್ವಜನಿಕವಾಗಿ ಮಾತನಾಡಲು ತಾನು ಒತ್ತಾಯಿಸಲ್ಪಟ್ಟಿದ್ದೇನೆ ಎಂದು ಫೋಗಟ್ ಹೇಳಿದರು.
'ಬ್ರಿಜ್ ಭೂಷಣ್ ಸಿಂಗ್ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ದೂರು ಸಲ್ಲಿಸಿದ ಆರು ಮಹಿಳಾ ಕುಸ್ತಿಪಟುಗಳ ಪೈಕಿ ನಾನೂ ಒಬ್ಬಳು. ಪ್ರಕರಣ ಇನ್ನೂ ನ್ಯಾಯಾಲಯದಲ್ಲಿದೆ ಮತ್ತು ಸಾಕ್ಷಿಗಳನ್ನು ಪರಿಶೀಲಿಸಲಾಗುತ್ತಿದೆ. ಅವರಿಗೆ ಸಂಬಂಧಿಸಿದ ಸ್ಥಳದಲ್ಲಿ ನಡೆಯುತ್ತಿರುವ ಪಂದ್ಯಾವಳಿಯಲ್ಲಿ ಸ್ಪರ್ಧಿಸುವುದು, ಅಲ್ಲಿ ಹೆಚ್ಚಿನ ಜನರು ಅವರೊಂದಿಗೆ ಸಂಬಂಧ ಹೊಂದಿರಬಹುದು, ಇದು ನನ್ನ ಮೇಲೆ ಅಪಾರ ಮಾನಸಿಕ ಒತ್ತಡವನ್ನು ಬೀರುತ್ತದೆ' ಎಂದು ಅವರು ಹೇಳಿದರು.
'ಆ ವಾತಾವರಣದಲ್ಲಿ ನಾನು ನನ್ನ ಶೇ 100 ರಷ್ಟನ್ನು ನೀಡಲು ಸಾಧ್ಯವಾಗುತ್ತದೆಯೇ ಎಂಬ ಬಗ್ಗೆ ನನಗೆ ಸಂದೇಹವಿದೆ. ಸರ್ಕಾರ ಮತ್ತು ಕ್ರೀಡಾ ಸಚಿವಾಲಯವು 'ವೀಕ್ಷಕರಾಗಿ ನೋಡುತ್ತಿದೆ' ಮತ್ತು ಸಿಂಗ್‌ಗೆ ಪರಿಣಾಮಕಾರಿಯಾಗಿ 'ಮುಕ್ತ ಹಸ್ತ' ನೀಡಿದೆ ಎಂದು ಆರೋಪಿಸಿದರು.
ಗೊಂಡಾದಲ್ಲಿ ವಿನೇಶ್ 57 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ. ಅವರು ಹಿಂದೆ 50 ಕೆಜಿ ಮತ್ತು 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದರು. ಅಧಿಕ ತೂಕದ ಕಾರಣಕ್ಕಾಗಿ ಫೈನಲ್‌ನಿಂದ ಅನರ್ಹಗೊಂಡ ನಂತರ ವಿನೇಶ್, 2024ರ ಪ್ಯಾರಿಸ್ ಕ್ರೀಡಾಕೂಟದ ನಂತರ ಸ್ಪರ್ಧೆಯಿಂದ ದೂರವಿದ್ದಾರೆ.
Advertisement