ಕಣ್ಣು
ಕಾಯುವುದನ್ನು ನಿಲ್ಲಿಸಿದ ಮೇಲೆ
ಕಣ್ಮುಂದೆ
ಕಾಣಿಸಿಕೊಂಡೇನು ಪ್ರಯೋಜನ ?
ನಾವು ಮಾಡುವ
ಪುಣ್ಯವೇ
ನಮ್ಮನ್ನು ಕಾಪಾಡುತ್ತದೆ
ನಾವು ಮಾಡುವ
ಪಾಪವೇ
ನಮ್ಮನ್ನು ಕಾಡುತ್ತದೆ
ಪಾಪ...
ಎನ್ನುವುದು ಸುಡುವ ಬೆಂಕಿಯಂತೆ
ಗೊತ್ತಿದ್ದು
ಮುಟ್ಟಿದರೂ ಸುಡುತ್ತದೆ.
ಗೊತ್ತಿಲ್ಲದೇ
ಮುಟ್ಟಿದರೂ ಸುಡುತ್ತದೆ.
ಗೊತ್ತಿದ್ದು ಮಾಡುವ ತಪ್ಪಿಗೂ
ಗೊತ್ತಿಲ್ಲದೇ ಮಾಡುವ ತಪ್ಪಿಗೂ
ಒಂದೇ ವ್ಯತ್ಯಾಸ...
ಗೊತ್ತಿಲ್ಲದೇ ಮಾಡುವ ತಪ್ಪಿಗೆ
ಪ್ರಾಯಶ್ಚಿತ್ತವಾದರೂ ಇದೆ...
- ಕೆ.ಎ. ಸೌಮ್ಯ