ಬೆತ್ತಲೆ ಕೂತು ಬರೆದರು!

ಬೆತ್ತಲೆಗೂ, ಸಾಹಿತ್ಯಕ್ಕೂ ಸೊಗಸಾದ ನಂಟಿದೆ. ಅನೇಕ ಸಾಹಿತಿಗಳಿಗೆ ಬೆತ್ತಲೆಯೇ ಬರವಣಿಗೆಯ ವಸ್ತುವಾದರೆ...
Updated on: 

ಬೆತ್ತಲೆಗೂ, ಸಾಹಿತ್ಯಕ್ಕೂ ಸೊಗಸಾದ ನಂಟಿದೆ. ಅನೇಕ ಸಾಹಿತಿಗಳಿಗೆ ಬೆತ್ತಲೆಯೇ ಬರವಣಿಗೆಯ ವಸ್ತುವಾದರೆ, ಕೆಲವರು ನಗ್ನವಾಗಿಯೇ 'ಸಾಹಿತ್ಯಕೃಷಿ' ನಡೆಸಿದ್ದಾರೆ. ಮೈಮೇಲಿಂದ ಬಟ್ಟೆ ಜಾರಿದರಷ್ಟೇ ಇವರಿಗೆ ಕಥೆ- ಕವನ ಬರೆಯಲು ಸಾಧ್ಯವಾಗುತ್ತಿತ್ತು. ಹಾಗಾದರೆ, ಅಂಥ ಕೆಲವು ಮಹಾತ್ಮರು ಯಾರ್ಯಾರು?

ವಿಕ್ಟರ್ ಹ್ಯುಗೋ

ಫ್ರೆಂಚ್‌ನ ಖ್ಯಾತ ಕವಿ, ಕಾದಂಬರಿಕಾರ. ಈತನ 'ಲೆಸ್ ಮಿಸರೇಬಲ್ಸ್‌' ಕಾದಂಬರಿ ತುಂಬಾ ಪ್ರಸಿದ್ಧಿ. ಬಟ್ಟೆ ಮೈ ಮೇಲಿದ್ದರೆ ಬಹುಶಃ ಈತ ಕವಿಯಾಗುತ್ತಿರಲಿಲ್ಲ! ಖಂಡಿತಾ ಹೌದು. ಸೇವಕನ ಕೈಗೆ ತಾನುಟ್ಟ ಬಟ್ಟೆ ಕೊಟ್ಟು, ಕೋಣೆಯೊಳಗೆ ಪುಸ್ತಕ, ಪೆನ್ನು, ಹಾಳೆ, ಟೇಬಲ್ಲು ಇಷ್ಟೇ ಇರಬೇಕೆಂದು ಬಯುಸುತ್ತಿದ್ದ. ಬೆತ್ತಲೆಯಾಗಿ ಕೂತು ಹೀಗೆ ಬರೆಯುವುದು ಹ್ಯುಗೋಗೆ ಅಭ್ಯಾಸವೇ ಆಗಿತ್ತು.

ಅರ್ನೆಸ್ಟ್ ಹೆಮಿಂಗ್ವೇ
ಅಮೆರಿಕದ ಲೇಖಕ, ಪತ್ರಕರ್ತ. ನೊಬೆಲ್ ಗೌರವಕ್ಕೆ ಪಾತ್ರನಾದವನೂ ಹೌದು. ಟೈಪ್‌ರೈಟರ್ ಜತೆ ಬೆತ್ತಲೆಯಾಗಿ ಕೂತು, ಪುಸ್ತಕ ಬರೆಯುವುದು ಇವನಿಗಿದ್ದ ಚಟ. ಆ ಟೈಪ್‌ರೈಟರ್‌ಗೂ ಇದೇನು ವಿಚಿತ್ರ ಅಂತ ಅನ್ನಿಸುತ್ತಿರಲಿಲ್ವಂತೆ. ವಿಚಿತ್ರವೆಂದರೆ, ತಾನೊಬ್ಬನೇ ಇದ್ದಾಗ ಮೈಮೇಲೆ ಬಟ್ಟೆ ಇರಬೇಕೆಂದು ಬಯಸುತ್ತಿದ್ದ.

ಬೆಂಜಮಿನ್ ಫ್ರಾಂಕ್ಲಿನ್

ಅಮೆರಿಕದಲ್ಲಿ ಸಾಹಿತಿಯೂ, ರಾಜಕಾರಣಿಯಾಗಿಯೂ ಹೆಸರು ಮಾಡಿದವ. 'ಪೂರ್ ರಿಚರ್ಡ್ಸ್ ಆಲ್ಮ್ಯಾನಕ್‌' ಕೃತಿಯಿಂದ ಇಂವ ಫೇಮಸ್ಸು. ಸಂಪೂರ್ಣವಾಗಿ ಬಟ್ಟೆ ಕಳಚಿ, ಮೈಗೆ 'ಗಾಳಿಸ್ನಾನ' ಮಾಡಿಸುತ್ತಿದ್ದ ಪುಣ್ಯಾತ್ಮ. ಥಂಡಿ ಕೊಠಡಿಯಲ್ಲಿ ಗಂಟೆಗಟ್ಟಲೆ ಬೆತ್ತಲೆಯಾಗಿ ಕೂತು ಬರೆದ ಈತನ ಎಷ್ಟೋ ಕೃತಿಗಳು ದಾಖಲೆ ಮಾರಾಟಗೊಂಡಿವೆ.

ಅಗಾಥಾ ಕ್ರಿಸ್ಟೀ
ಕ್ರೈಮ್ ಥ್ರಿಲ್ಲರ್‌ಗಳಿಂದಲೇ ಮನೆಮಾತಾದವಳು ಈ ಬ್ರಿಟಿಷ್ ಲೇಖಕಿ. ಕ್ರಿಸ್ಟೀ ಪತ್ತೇದಾರಿ ಕಾದಂಬರಿಗಳನ್ನು ಬರೆಯುವಾಗಲೆಲ್ಲ ಬಾತ್ ಟಬ್‌ನಲ್ಲಿ ಬೆತ್ತಲೆಯಾಗಿ ಕೂತಿರುತ್ತಿದ್ದಳು. ಕೆಲವೊಮ್ಮೆ ಆ ಹಾಳೆಗಳು ಜಾರಿ, ನೀರಲ್ಲಿ ಬಿದ್ದು ಹಾಳಾಗಿದ್ದೂ ಇದೆ. ಆದರೂ ತಲೆಕೆಡಿಸಿಕೊಳ್ಳದೆ ತನ್ನ ಬೆತ್ತಲೆ ಬರಹ ಮುಂದುವರಿಸುತ್ತಿದ್ದಳು.

ಡಿ.ಎಚ್. ಲಾರೆನ್ಸ್
ಇಂಗ್ಲೆಂಡಿನ ಪ್ರಸಿದ್ಧ ಕವಿ. ಹಿಪ್ಪನೇರಳೆ ಮರವನ್ನು ಬೆತ್ತಲೆಯಾಗಿ ಹತ್ತುವುದು ಈತನಿಗಿದ್ದ ಚಟ. ಹೀಗೆ ಹತ್ತಿ ಇಳಿಯುವಾಗ ಈತನಿಗೆ ಪದ್ಯದ ಸಾಲುಗಳು ಹೊಳೆಯುತ್ತಿದ್ದವು. 75ಕ್ಕೂ ಅಧಿಕ ಕವಿತೆಗಳನ್ನು ಲಾರೆನ್ಸ್ ಹೀಗೆಯೇ ಬರೆದಿದ್ದಾನೆ. ಪಾಪ, ಆ ಹಿಪ್ಪನೇರಳೆ ಮರದ ಗತಿ ಏನಾಗಬೇಡ?

ಜೇಮ್ಸ್ ವಿಟ್‌ಕಾಂಬ್

ಅಮೆರಿಕದ ಖ್ಯಾತ ಕವಿ. ಮದ್ಯಸೇವನೆ ಅಂದ್ರೆ ಈತನಿಗೆ ತುಂಬಾ ಇಷ್ಟ. ಗೆಳೆಯರೆಲ್ಲ ಈತನನ್ನು ಬಾರ್‌ನಲ್ಲಿ ಕೂಡಿಹಾಕುತ್ತಿದ್ದರಂತೆ. ಇಡೀ ರಾತ್ರಿ ಹೀಗೆ ಬಾರ್‌ನಲ್ಲಿ ಕಳೆಯುವಾಗ ಈತ ಸಂಪೂರ್ಣ ಬೆತ್ತಲೆ. ಮರುದಿನ ಬೆಳಗ್ಗೆಯೊಳಗೆ ಸೊಗಸಾದ ಕವಿತೆಗಳ ಸೃಷ್ಟಿ. ಕೊನೆಗೆ ಜೇಮ್ಸ್ ಕುಡಿದು ಕುಡಿದೇ ಸತ್ತ.

ಎಡ್ಮಂಡ್ ರೋಸ್ಟ್ಯಾಂಡ್

ಫ್ರೆಂಚ್ ಕವಿ ಮತ್ತು ನಾಟಕಕಾರ. 'ಸೈರನೊ ಡಿ ಬರ್ಗರ್ಯಾಕ್‌' ನಾಟಕದಿಂದ ಜನಪ್ರಿಯನಾದವ. ಈತನಿಗೂ ಕ್ರಿಸ್ಟೀಯಂತೆ ಬಾತ್ ಟಬ್‌ನಲ್ಲಿ ಮುಳುಗಿ ಬರೆಯುವ ಹವ್ಯಾಸ. 'ಬಾತ್‌ಟಬ್ ಎಡ್ಮಂಡ್‌' ಅಂತಲೇ ಜನ ಇವನನ್ನು ಕರೆಯುತ್ತಿದ್ದರಂತೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com