ಬಸ್ ಡೋರ್‌ನಲ್ಲಿ ನಿಂದ್ರೊ ಮಜಾನೇ ಬೇರೆ...

Updated on: 

ಮ್ಯಾಗ್ ಹತ್ರಿ, ಒಳಗ್ ಬರ್ರಿ. ಎಷ್ಟು ಸಲ ಹೇಳೋದು. ಒಂದ್ಸಲ ಹೇಳಿದ್ರೆ ಅರ್ಥ ಆಗೋದಿಲ್ಲ ನಿಮ್ಗೆ. ಬರ್ರಿ ಒಳಗ್ ಬರ್ರಿ... ಸಿಟಿ ಬಸ್ ಕಂಡಕ್ಟರ್‌ನ ಪ್ರತಿನಿತ್ಯದ ಅಳಲು ಅಥವಾ ಮಾತಿದು. ಇತ್ತೀಚಿನ ದಿನಗಳಲ್ಲಿ ಕಾಲೇಜು ಹುಡುಗರು ಬಸ್‌ಗಳಲ್ಲಿ ಪ್ರಯಾಣಿಸಲು ಆಯ್ಕೆ ಮಾಡಿಕೊಳ್ಳುವ ಸ್ಥಳ ಬಸ್‌ನ ಡೋರ್. ಇದರಲ್ಲಿ ನಾನೂ ಒಬ್ಬ. ಪ್ರತಿನಿತ್ಯ ಕಾಲೇಜಿಗೆ ಹೊರಡುವಾಗ ಸಿಟಿ-ಬಸ್ ತುಂಬಾ ಫುಲ್ ಆಗಿರುತ್ತದೆ. ಆದರೂ ನೆಕ್ಸ್ಟ್ ಬಸ್‌ಗೆ ಹೋಗದೆ ಅದೇ ಬಸ್‌ಗೆ ಡೋರ್‌ನಲ್ಲಿ ಜೋತು ಬಿದ್ದು ಹೋಗುವ ಮಜಾನೇ ಬೇರೆ. ಕೆಲವೊಂದು ಸಲ ಅಪಾಯಕಾರಿ- ಬ್ಯಾಲೆನ್ಸ್ ಸಿಕ್ಕಿಲ್ಲಾ ಅಂದ್ರೆ.

ಕೆಲವರು ನೇತಾಡುತ್ತಲೇ ಸ್ವರ್ಗ ಸುಖ ಅನುಭವಿಸುತ್ತಾರೆ. ಇನ್ನೂ ಕೆಲವರು ನೇತಾಡುತ್ತಲೇ ಸ್ಟೈಲ್ ಮಾಡುತ್ತಿರುತ್ತಾರೆ. ಒಂದೊಂದು ಸಲ ಬಸ್ನಲ್ಲಿ ಸಾಕಷ್ಟು ಸ್ಥಳಾವಕಾಶ ಇದ್ದರೂ ಕೂಡ ಡೋರ್‌ನಲ್ಲಿ ನಿಂತುಕೊಂಡು ಮಜಾ ತಗೋತಾರೆ. ಆದರೂ ಆ ಡೋರಲ್ಲಿ ಅಂಥ ವಿಶೇಷವಾದರೂ ಏನು ಎಂಬ ಪ್ರಶ್ನೆ?

ಏಕೆಂದರೆ ಡೋರ್‌ನಲ್ಲಿ ನಿಂತು ಪ್ರಯಾಣಿಸುವಾಗ ಹೊರಗಿನ ಆಯಾ ಸ್ಟಾಪ್‌ಗಳಲ್ಲಿ ಬಸ್ ನಿಂತಾಗ ಸ್ಟೈಲ್ ಆಗಿ ಬಸ್ ಇಳಿದು ಹುಡುಗೀರನ್ನು ನೋಡಿ, ಮತ್ತೆ ಹತ್ತುವುದೇ ಒಂದು ಕ್ರೇಜು. ಅವಳು ನನ್ನನ್ನೇ ನೋಡುತ್ತಾಳೆ ಎಂಬ ಕುತೂಹಲ. ಹಾಗೇ ಪ್ರತೀಬಾರಿ ತಲೆಗೂದಲನ್ನು ಕೈಯಿಂದ ಬಾಚುತ್ತಾ ಟೀ ಶರ್ಟನ್ನು ಸೀದಾ ಮಾಡುತ್ತಾ ಅವಳನ್ನು ನೋಡಿ ನಗುವುದು. ಈ ರೀತಿಯ ಅನುಭವ ಎಲ್ಲರಿಗೂ ಆಗಿರುತ್ತದೆ. ಕೆಲವರು ತಮ್ಮ ಬಾಡಿ ಪ್ರದರ್ಶನ, ಇನ್ನೂ ಕೆಲವರೂ ಹುಡಿಗೀರ್ನ ರೇಗಿಸೋಕೆ, ಇನ್ನೊಂದಿಷ್ಟು ಜನ ಹುಡ್ಗೀರ್ ಎದುರಿಗೆ ಸ್ಕೋಪ್ ತಗೋಳದಿಕ್ಕೆ ಬೇರೆಯವರಿಗೆ ಸೀಟ್ ಬಿಡುವುದು ಸಾಮಾನ್ಯ.
ಅವತ್ತು ನಾನು ಕೂಡ ಆ ಡೋರಲ್ಲಿ ನಿಂತಿದ್ದೆ. ನನ್ನ ಜೊತೆ ನಿಂತವರನ್ನು ಗಮನಿಸ್ತಿದ್ದೆ. ಒಬ್ಬೊಬ್ಬರದು ಒಂದೊಂದು ಥರಾ ಮನಸ್ಥಿತಿ. ಕೆಲವರಿಗೆ ಅವ್ಳು ಬಂದಿಲ್ಲ ಅನ್ನೋ ಬೇಜಾರು. ಇನ್ನೂ ಕೆಲವರಿಗೆ ಹುಡ್ಗೀರ್ನ ನೋಡಿ ವಾಹ್ ವಾಟ್ ಎ ಫಿಗರ್ ಅನ್ನೋ ನುಡಿ- ಮುತ್ತುಗಳು, ಮತ್ತೆ ಅವನಲ್ಲಿ ಒಬ್ಬ ಕವಿ ಉದಯಿಸಿರುತ್ತಾನೆ. ಅಲ್ಲದೇ ಅವಳೇವಾದರೂ ಅವನನ್ನು ನೋಡಿ ನಕ್ಕರೆ ಸಾಕು ಅವನ ಖುಷಿಗೆ ಸ್ವರ್ಗಕ್ಕೆ ಮೂರೇ ಗೇಣು.

 ಅಲ್ಲದೇ ಹುಡುಗರು ರೇಗಿಸೋದ್ರ ಜೊತೆಗೆ ಮಾನವೀಯತೆ ಮರೆಯುತ್ತಾರೆ. ಯಾಕಂದ್ರೆ ಯಾರಾದರೂ ವಯಸ್ಸಾದವರೂ ಏನಾದರೂ ಬಸ್ ಹತ್ತಿದ್ರೆ ಅವರಿಗೆ ಸೀಟು ಬಿಡೋದಲ್ದೇ, ಹುಡಿಕೀನೂ ಕೊಡ್ತಾರೆ. ಅಲ್ಲದೆ ಬಸ್ ಫುಲ್ ಆಗಿದ್ರೂ ಹಿರಿಯರನ್ನು ಒಳಗೆ ಕಳ್ಸಿ ತಾವು ಡೋರ್‌ನಲ್ಲಿ ನೇತಾಡುತ್ತಿರುತ್ತಾರೆ. ಹುಡುಗರದ್ದು ಎಷ್ಟು ಒಳ್ಳೇ ಮನಸ್ಸು ಅಲ್ವಾ! ಕಾಲೇಜು ಹುಡ್ಗಗ್ರೇ ಬಸ್ಸಲ್ಲಿ ಸಿಗೋ ಮಜಾ ಬೇರೆಲ್ಲ್ಲೂ ಸಿಗಲ್ಲ ಆಂತ ಕಾಣುತ್ತೆ? ಯಾಕಂದ್ರೆ ಅದು ಕ್ಷಣಿಕ ಆದ್ರೂ ಒಳ್ಳೆ ಮಜಾ ಸಿಗತ್ತೆ. ಹಲವಾರು ನೆನಪುಗಳನ್ನು ಕಟ್ಟಿಕೊಡುತ್ತದೆ. ಅಲ್ಲದೇ ಬಸ್ ಡೋರ್‌ನಲ್ಲಿ ಸಿಗೋ ಮಜಾ, ನಮ್ಮ ನಿಲ್ದಾಣ ಬರೋವರೆಗೆ ಅಂತಾ ನಮ್ಮ ಯುವಕರು ಮಾತ್ರ ಮರೀಬಾರ್ದು ಕಣ್ರಿ.
 ಜೀವನದಲ್ಲಿ ನಿಲ್ದಾಣ ಬರೋ ತನಕ ಲೈಫ್‌ನ ಎಂಜಾಯ್ ಮಾಡಬೇಕು ಕಣ್ರೀ.

- ಶಿವಕುಮಾರ ಕೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com