ಬಾಯ್ ಫ್ರೆಂಡ್: ಸಾರಿ ಕಣೇ... ನಿನ್ನನ್ನು ಮದುವೆ ಆಗಕ್ಕಾಗಲ್ಲಾ...
ಗರ್ಲ್ ಫ್ರೆಂಡ್: ಒಹ್ ಗಾಡ್... ಯಾಕೆ?
ಬಾಯ್ ಫ್ರೆಂಡ್: ಮನೆಯಲ್ಲಿ ಒಪ್ತಾ ಇಲ್ಲಾ
ಗರ್ಲ್ ಫ್ರೆಂಡ್: ನಿನ್ನ ಮನೇಲೀ ಯಾರ್ಯಾರು ಇದ್ದಾರೆ?
ಬಾಯ್ ಫ್ರೆಂಡ್: ಹೆಂಡತಿ, ಮೂರು ಮಕ್ಕಳು.
---
ತಿಮ್ಮ: ನಿನ್ನ ಹೆಂಡತಿಗೆ ಯಾವುದರಲ್ಲಿ ಜಾಸ್ತಿ ಆಸಕ್ತಿ'
ಗುಂಡ: ಕಲೆ ಮತ್ತು ಸಾಹಿತ್ಯದ ಬಗ್ಗೆ ಸಿಕ್ಕಾಪಟ್ಟೆ ಆಸಕ್ತಿ.
ತಿಮ್ಮ: ನಿನಗೆ?
ಗುಂಡ: ಅದನ್ನೆಲ್ಲಾ ಸಹಿಸಿಕೊಳ್ಳುವ ಆಸಕ್ತಿ.
---
ಹೆಂಡತಿ: ರೀ, ನಿಮಗೊಂದು ವಿಷಯ ಹೇಳಬೇಕು... ಭಯ ಆಗ್ತಾ ಇದೆ.
ಗಂಡ: ಭಯ ಪಡಬೇಡ... ಏನು ಹೇಳು?
ಹೆಂಡತಿ: ನಾನು ತಾಯಿ ಆಗ್ತಾ ಇದ್ದೀನಿ.
ಗಂಡ: ವೆರಿ ಗುಡ್. ಇದರಲ್ಲಿ ಭಯ ಪಡೋದು ಏನಿದೆ?
ಹೆಂಡತಿ: ಇಲ್ಲಾರೀ... ನಾನು ಕಾಲೇಜಿಗೆ ಹೋಗಬೇಕಾದ್ರೆ ಇದೇ ರೀತಿ ನಮ್ಮಪ್ಪನ ಬಳಿ ಹೇಳಿದ್ದೆ... ಅವರು ನನಗೆ ಚೆನ್ನಾಗಿ ಹೊಡದಿದ್ರು.
---
ಗುಂಡಿ: ನಿನ್ನ ಮನೆಯವರಿಗೆ ನಿದ್ದೆಯಲ್ಲಿ ನಡೆಯುವ ಅಭ್ಯಾಸವಿದೆಯಂತೆ.
ತಿಮ್ಮಿ: ಹೌದು. ಆದರೆ ಭಯ ಪಡಬೇಕಾಗಿಲ್ಲ.
ಗುಂಡಿ: ಅದು ಹೇಗೆ?
ತಿಮ್ಮಿ: ನಿದ್ದೆಯಲ್ಲೂ ಎಷ್ಟು ಸೋಮಾರಿ ಎಂದರೆ ನಾಲ್ಕು ಹೆಜ್ಜೆ ಹಾಕಿ ಮತ್ತೆ ಮಂದು ಮಲ್ಕೊತಾರೆ.
---
ಗುಂಡ: ಲೇ ತಿಮ್ಮ, ಏನೋ ಹೀಗೆ ನೋಡ್ತಾ ಇದ್ದೀಯಾ?
ತಿಮ್ಮ: ನನ್ನ ಗರ್ಲ್ ಫ್ರೆಂಡ್ ಲವ್ ಲೆಟರ್ ಇದು.
ಗುಂಡ: ಆದ್ರೆ, ಇದು ಖಾಲಿ ಇದೆಯಲ್ಲೊ
ತಿಮ್ಮ: ಇತ್ತೀಚೆಗೆ ನಮ್ಮ ನಡುವೆ ಮಾತುಕತೆ ನಿಂತು ಹೋಗಿದೆ ಅದಕ್ಕೆ.