ರಸ್ತೆಯಲ್ಲೊಂದು ಭೀಕರ ಅಪಘಾತವಾಗಿತ್ತು. ಅದನ್ನು ನೋಡಲು ಜನಜಂಗುಳಿಯೇ ಸೇರಿತ್ತು. ಅಲ್ಲಿಗೆ ಬಂದ ಗುಂಡನಿಗೆ ಅಲ್ಲಿ ಏನು ನಡೆಯಿತು ಎಂದು ನೋಡುವ ಕುತೂಹಲ. ಆದರೆ ಗುಂಡನಿಗೆ ನೋಡೋಕೆ ಆಗುತ್ತಿರಲಿಲ್ಲ. ಕೂಡಲೇ ಬುದ್ಧಿವಂತ ಗುಂಡ ಜೋರಾಗಿ ಕೂಗಿದ: ಅಲ್ಲಿ ಸತ್ತವನ ಅಪ್ಪ ನಾನು. ದಾರಿ ಬಿಡಿ ಎಂದ. ಜನ ದಾರಿ ಬಿಟ್ಟರು. ಗುಂಡ ಮುಂದೆ ಬಂದು ನೋಡಿದಾಗ, ಅಲ್ಲಿ ಸತ್ತು ಬಿದ್ದಿದ್ದು ನಾಯಿ!
==
ಬಾಸ್: ಗುಂಡ ಐ ಆ್ಯಮ್ ಸಾರಿ.... ನಿನಗೆ ಈ ಆಫೀಸ್ನಲ್ಲಿ ಕೊಡಲು ಯಾವ ಕೆಲಸವೂ ಇಲ್ಲ. ನೀನು ಬೇರೆ ಕಡೆ ಕೆಲಸ ಹುಡುಕು.
ಗುಂಡ: ಸಾರ್, ದಯವಿಟ್ಟು ನನ್ನನ್ನು ಕೆಲಸಕ್ಕೆ ಸೇರಿಸಿಕೊಳ್ಳಿ. ಅಷ್ಟಾದರೆ ಸಾಕು. ಆಮೇಲೆ ಈ ಆಫೀಸ್ನಲ್ಲಿ ಕೆಲಸ ಕೊಡೀಂತ ಯಾವತ್ತೂ ನಿಮ್ಮನ್ನು ಕೇಳೊಲ್ಲ!
==
ಗುಂಡ: ಲೇ ತಿಮ್ಮ... ಜೀವನದ ಕಲ್ಲು ಮುಳ್ಳಿನ ಹಾದಿಯಲ್ಲಿ ಯಾರು ನಮ್ಮ ಜೊತೆ ಇರ್ತಾರೆ?
ತಿಮ್ಮ: ಅಪ್ಪ... ಅಮ್ಮ.
ಗುಂಡ: ಅಲ್ಲ
ತಿಮ್ಮ: ಅಣ್ಣ ತಂಗಿ, ಸ್ನೇಹಿತರು
ಗುಂಡ: ಅಲ್ಲ
ತಿಮ್ಮ: ಮತ್ತೆ ಯಾರೋ?
ಗುಂಡ: ಅಯ್ಯೋ ಮಂಕೇ... ನೀನು ಹಾಕ್ಕೊಂಡಿರೊ ಚಪ್ಪಲಿ ಕಣೋ.
==
ಬಾಸ್: ನೀನು ನನ್ನ ಕಾರ್ಗೆ ಡ್ರೈವರ್ ಆದ್ರೆ ಸ್ಟಾರ್ಟಿಂಗ್ಗೆ 2000 ರು. ಸಂಬಳ ಕೊಡ್ತೀನಿ.
ಚಿಕ್ಕ: ಸರ್, ಸ್ಟಾರ್ಟ್ ಮಾಡೋಕೇ 2000 ರು! ಹಾಗಾದ್ರೆ, ಡ್ರೈವಿಂಗ್ ಮಾಡೋಕೆ ಎಷ್ಟು ಕೊಡ್ತೀರಾ?