ಚಿತ್ತಾರ
ಮನದ ಗೋಡೆಯ
ಮೇಲೆ ಚಿತ್ತಾರ ಬಿಡಿಸುತ್ತಿದ್ದೆ;
ಅದರ ಬಿಂಬ ಆಗಸದಲ್ಲಿ
ಮೂಡಿತು !
ಬೆಳಕು ಹುಡುಕುತ್ತ
ಕತ್ತಲಲ್ಲಿ
ಬೆಳಕು ಹುಡುಕುತ ನಡೆದ
ನಡೆದೇ ನಡೆದ,
ಬೆಳಕು ಕಂಡಿತು;
ತಿರುಗಿ ಮನೆ ತಲುಪುವುದರೊಳಗೆ
ಕತ್ತಲಾಗಿತ್ತು !
ನಾವು ಗೆಲ್ಲೋಣ
"ನಾನು" ಗೆಲ್ಲಬೇಕೆಂದರೆ
ಯುದ್ಧವಾಗುವುದು;
ನಾವು ಗೆಲ್ಲಬೇಕೆಂದರೆ
ಬುದ್ಧರಾಗುವುದು!
ಹೆಣವಾದವನ ಕಥೆ
ಆತ ಕಟ್ಟಿದ್ದ ಸಾಮ್ರಾಜ್ಯದಲ್ಲಿ
ಜನರಿರಲೇ ಇಲ್ಲ,
ಇದ್ದಿದ್ದು ಟನ್ನುಗಟ್ಟಲೇ ಹಣ;
ಈಗ ಏಕಾಂಗಿ ಅವನ ಹೆಣ!
- ಪರೇಶ ಸರಾಫ