

ಚಿತ್ರದಲ್ಲಿರುವುದು ಫಿರಂಗಿಯ ಮೇಲಿನ ಭಾಗ. ಮಧ್ಯದಲ್ಲಿ ಕಾಣುತ್ತಿರುವ ರಂಧ್ರ ಗುರಿಯಿಡಲು ಮಾಡಿದ್ದಂತೆ. ರಂಧ್ರದ ಸುತ್ತಲೂ ಕಾಣುವ ಕೆತ್ತನೆಯ ಕುಸುರಿ ಕಲೆ ಎಂಥವರ ಮನಸ್ಸನ್ನೂ ಸೆಳೆಯುತ್ತದೆ. ಕೊಲ್ಲುವ ಸಾಧನಕ್ಕೆ ಚೆಂದ ಯಾಕೆ ಎಂದು ರೂಪಿಸಿದವನು ನಿರ್ಲಕ್ಷಿಸಿಲ್ಲ. ಈ ಮೋಹಕ ಪಾಶದ ಫಿರಂಗಿ ಕಂಡಿದ್ದು ಐತಿಹಾಸಿಕ ನಗರಿ ವಿಜಾಪುರದಲ್ಲಿ.
- ನಾರಾಯಣ ಬಾಬಾನಗರ