ನಗಬೇಕಮ್ಮಾ ನಗಬೇಕು...

Updated on: 

ಮಾಣಿ: ಸರ್, ನಿಮಗೆ ಬ್ಲಾಕ್ ಕಾಫಿ ಕೊಡಲಾ?
ಗಿರಾಕಿ: ಅದೇ ಆಗಬೇಕು ಅಂತೇನೂ ಇಲ್ಲ, ನಿಮ್ಮ ಹೋಟೆಲಿನಲ್ಲಿ ಬೇರೆ ಕಲರಿನ ಕಾಫಿ ಇದ್ರೆ ಅದನ್ನೇ ತಂದುಕೊಡು ಪರವಾಗಿಲ್ಲ.
=
ಗುಂಡಣ್ಣ: ಇನ್ಸ್‌ಪೆಕ್ಟರ್, ಒಂದು ಶಾಕಿಂಗ್ ನ್ಯೂಸ್. ನನ್ನ ತೋಟದಲ್ಲಿ ಬಾಂಬ್ ಪತ್ತೆಯಾಗಿದೆ.
ಇನ್ಸ್‌ಪೆಕ್ಟರ್: ಹೌದಾ, ಅದು ಅಲ್ಲಿಯೇ ಇರಲಿ. ಮೂರು ದಿನಗಳ ನಂತರವೂ ಅದರ ವಾರಸುದಾರರು ಪತ್ತೆಯಾಗದಿದ್ದರೆ ಅದನ್ನು ನೀವೇ ಇಟ್ಕೊಂಡು ಬಿಡಿ.
=
ಹುಡುಗ: ನೀನು ನಿಜಕ್ಕೂ ನನ್ನನ್ನು ಪ್ರೀತಿಸ್ತಿದ್ದೀಯ ತಾನೆ? ಬೇರೆ ಯಾರಿಗೂ ನೀನು ಮನಸ್ಸು ಕೊಟ್ಟಿಲ್ಲ ತಾನೆ?
ಹುಡುಗಿ: ಸದ್ಯಕ್ಕೆ ಅಂಥಾ ಮಿಸ್ಟೇಕ್ ಆಗಿಲ್ಲ ಕಣೋ. ಮೊನ್ನೆ ರಾತ್ರಿ ನನ್ನಲ್ಲಿದ್ದ ಎರಡು ಲಿಸ್ಟ್ ಚೆಕ್ ಮಾಡಿದ್ದೀನಿ. ಅದರ ಪ್ರಕಾರ, ಈಗ ಪ್ರೀತಿಸ್ತಿರೋದು ನಿನ್ನನ್ನೇ.
=
ತಂದೆ: ನಿಮ್ಮ ಮಗನಿಗೆ ವಿದ್ಯೆ ಕಲಿಸುವುದು ಬಹಳ ಕಷ್ಟ ಎಂದು ನಿಮ್ಮ ಮಿಸ್ ಹೇಳಿದ್ರಲ್ಲೋ?
ಮಗ: ನಮ್ಮ ಸ್ಕೂಲಲ್ಲಿ ಇರೋರು ಪೆದ್ದಿ ಮೇಡಂ ಅಂತ ನಾನು ನೊದಲೇ ತಿಳಿಸಿರಲಿಲ್ವಾ ಅಪ್ಪಾ?
=
ಹೆಡ್‌ಮಾಸ್ಟರ್: ಮಕ್ಕಳಿಂದ ಲೆಕ್ಕ ಮಾಡಿಸಿ ಅಂದ್ರೆ ಡ್ಯಾನ್ಸ್ ಮಾಡಿಸ್ತಾ ಇದ್ದೀರಲ್ರೀ?
ಗಣಿತದ ಶಿಕ್ಷಕ: ಹಾಗೇನಿಲ್ಲ ಸರ್, ನಿನ್ನೆ ಲೆಕ್ಕದ ಹೋಂವರ್ಕ್ ಕೊಟ್ಟಿದ್ದೆ. ಎಲ್ಲರೂ ತಪ್ಪು ಮಾಡಿಕೊಂಡು ಬಂದಿದ್ರು, ಯಾಕಯ್ಯಾ ತಪ್ಪು ಮಾಡಿಕೊಂಡು ಬಂದಿದ್ದೀರ ಅಂತ ಕೇಳಿದ್ರೆ-ತಪ್ಪು ಮಾಡದವ್ರು ಯಾರವ್ರೆ ಅಂತ ಡ್ಯಾನ್ಸ್ ಮಾಡ್ತಿದ್ದಾರೆ!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com