

ಯುವಜನರಿಗೆ ಕೌಶಲ್ಯ ತರಬೇತಿ ಒದಗಿಸುವ ಗುರಿ ಇಟ್ಟುಕೊಂಡು ಟಿಎಂಐ ಇ2ಇ ವತಿಯಿಂದ ಎನ್‌ಎಸ್‌ಡಿಸಿಯ ಸಹಯೋಗದೊಂದಿಗೆ ಬೆಂಗಳೂರಿನಲ್ಲಿ ಔದ್ಯೋಗಿಕ ಸೇವಾ ಕೇಂದ್ರ(ಘಊಖ)ವೊಂದನ್ನು ಆರಂಭಿಸಲಾಗಿದೆ. ಕೋರಮಂಗಲದ ಎಲ್.ವಿ. ಕಚೇರಿ ಬಳಿ ಸ್ಥಾಪಿಸಿರುವ ಈ ಔದ್ಯೋಗಿಕ ಕೇಂದ್ರ ದೇಶದಲ್ಲೇ ವಿಶಿಷ್ಟ ಪ್ರಯೋಗವಾಗಿದೆ. ಗ್ರಾಮೀಣ ಹಾಗೂ ಪಟ್ಟಣ ಪ್ರದೇಶದ ಪದವೀಧರರನ್ನು ಗುರಿಯಾಗಿಸಿಕೊಂಡು ಈ ಕೇಂದ್ರ ಆರಂಭಿಸಲಾಗಿದೆ.
ಪದವೀಧರರಲ್ಲದ ಯುವಜನರಿಗೂ ಇಲ್ಲಿ ಕೆಲಸದ ಮಾಹಿತಿ ಲಭ್ಯ. ಅಭ್ಯರ್ಥಿ ಯಾವ ರೀತಿಯ ಉದ್ಯೋಗಕ್ಕೆ ಸರಿಹೊಂದುತ್ತಾನೆ ಎನ್ನುವುದನ್ನು ಅರಿತುಕೊಳ್ಳಲು ಉದ್ಯೋಗ ವ್ಯಕ್ತಿತ್ವ ಅರ್ಹತಾ ಪರೀಕ್ಷೆ ಹಾಗೂ ಯೋಗ್ಯತಾ ಪರೀಕ್ಷೆ, ಆಪ್ತ ಸಮಾಲೋಚನೆ ಹಾಗೂ ತಜ್ಞರಿಂದ ಉಪನ್ಯಾಸ, ತರಬೇತಿ ಕಾರ್ಯಕ್ರಮಗಳನ್ನು ಈ ಕೇಂದ್ರ ನಡೆಸಿಕೊಡುತ್ತದೆ. ಟಿಎಂಐಇ2ಇ ಬೆಂಗಳೂರು ಮಾತ್ರವಲ್ಲದೆ ಹೈದರಾಬಾದ್, ಪುಣೆ ಹಾಗೂ ಕೋಲ್ಕತಾಗಳಲ್ಲೂ ಘಊಖ ಕೇಂದ್ರಗಳನ್ನು ಆರಂಭಿಸಿದೆ. ಕೆಲವೇ ವರ್ಷಗಳಲ್ಲಿ ದೇಶಾದ್ಯಂತ ಇಂಥ ಕೇಂದ್ರಗಳನ್ನು ಆರಂಭಿಸುವ ಗುರಿ ಇಟ್ಟುಕೊಂಡಿದೆ. ಕಾರ್ಪೊರೇಟ್ ಸಂಸ್ಥೆಗಳಾದ ಬಿಎಫ್‌ಎಸ್‌ಐ, ರಿಟೇಲ್, ಅಟೊಮೊಟಿವ್ ಹಾಗೂ ಐಟಿ ಕ್ಷೇತ್ರಗಳ 10ಕ್ಕೂ ಹೆಚ್ಚಿನ ಕಂಪನಿಗಳು ಘಊಖ ಕೇಂದ್ರದ ವಿದ್ಯಾರ್ಥಿಗಳಿಗೆ ಉದ್ಯೋಗ ಮತ್ತು ತರಬೇತಿ ನೀಡಲು ಮುಂದಾಗಿವೆ. ಮಾಹಿತಿಗಾಗಿ WWW.time2eacademy.com ಅನ್ನು ಸಂಪರ್ಕಿಸಬಹುದು.