ನೀವೇ ಮಾಡಿ ಸಾಫ್ಟ್ಡ್ರಿಂಕ್ ಪುಟಾಣಿಗಳೆ,
ಅಂಗಡಿಯಿಂದ ಸಾಫ್ಟ್ಡ್ರಿಂಕ್ ತಂದಿರುತ್ತೀರಾ. ಮುಚ್ಚಳ ತೆಗೆದ ತಕ್ಷಣ ಬಾಟಲಿಯಲ್ಲಿ ಗುಳ್ಳೆಗಳೆದ್ದು ಹೊರ ಚೆಲ್ಲುತ್ತವೆ. ಅದು ಏಕೆ ಗೊತ್ತಾ? ನಾವೇ ಮನೆಯಲ್ಲಿ ಮಾಡಿ ತಿಳಿಯೋಣ.
ಅಡುಗೆ ಮನೆಗೆ ಅಮ್ಮನನ್ನು ಕಾಡಿ ಒಂದು ಲಿಂಬು, ಒಂದು ಚಮಚ ಅಡುಗೆ ಸೋಡಾ, ಸ್ವಲ್ಪ ಸಕ್ಕರೆ ಇಷ್ಟನ್ನು ತೆಗೆದುಕೊಳ್ಳಿ. ಲಿಂಬು ಕತ್ತರಿಸಿ ಅದರ ರಸವನ್ನು ಗ್ಲಾಸ್ಗೆ ಹಿಂಡಿ. ಅದಕ್ಕೆ ಎಷ್ಟು ಬೇಕೋ ಅಷ್ಟು ನೀರು ಸೇರಿಸಿ. ಈ ಮಿಶ್ರಣಕ್ಕೆ ಅಡುಗೆ ಸೋಡಾ ಬೆರೆಸಿ ಚೆನ್ನಾಗಿ ಕಲಕಿ. ಸೋಡಾ ಹಾಕಿದ ತಕ್ಷಣ ಭುಸ್... ಅಂತ ಗುಳ್ಳೆಗಳು ಏಳುತ್ತವೆ. ಆ ನಂತರ ಸಕ್ಕರೆ ಸೇರಿಸಿದರೆ ನೀವೇ ತಯಾರಿಸಿದ ಸಾಫ್ಟ್ಡ್ರಿಂಕ್ ಕುಡಿಯಲು ಸಿದ್ಧ.
ಲಿಂಬು ಮಿಶ್ರಣಕ್ಕೆ ಸೋಡಾ ಸೇರಿಸಿದಾಗ ಗುಳ್ಳೆಗಳು ಉಂಟಾಗುತ್ತವಲ್ಲ, ಅದು ಕಾರ್ಬನ್ ಡೈ ಆಕ್ಸೈಡ್ (ಈಕ2)ಅಂಗಡಿಯಲ್ಲಿ ಸಿಗುವ ಸಾಫ್ಟ್ಡ್ರಿಂಕ್ಸ್ ಬಾಟಲಿಗಳಲ್ಲಿ ಇರುವುದೂ ಇದೇ ಸಿಓ2, ಅಲ್ಲಿ ರುಚಿಗೆ ಬೇರೆಬೇರೆ ಫ್ಲೇವರ್ಗಳನ್ನು ಸೇರಿಸುತ್ತಾರೆ ಅಷ್ಟೆ. ಇಲ್ಲಿ ಬೇಕಿಂಗ್ ಸೋಡಾ ಮೂಲವಸ್ತು, ಲಿಂಬು ಆ್ಯಸಿಡ್. ಇವೆರಡರ ನಡುವೆ ರಾಸಾಯನಿಕ ಕ್ರಿಯೆ ನಡೆದು ಕಾರ್ಬನ್ ಡೈ ಆಕ್ಸೈಡ್ ಉತ್ಪತ್ತಿಯಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

