

ನಿಮ್ಮ ಗೆಳೆಯರು ಹಾಗೂ ಮನೆಯವರನ್ನು ಬೇಸ್ತು ಬೀಳಿಸುವ ಸುಲಭ ಪ್ರಯೋಗ ಇದು.
ಮೊಟ್ಟೆಯೊಂದನ್ನು ಬೇಯಿಸಿ, ಚಿಪ್ಪು ತೆಗೆಯದೇ ಫ್ರಿಡ್ಜ್‌ನಲ್ಲಿಡಿ. ಅದು ಹಸಿ ಮೊಟ್ಟೆಯಂತೆ ಕಾಣುವವರೆಗೆ ತೆಗೆಯಬೇಡಿ. ಇದಕ್ಕೆ 8-10 ಗಂಟೆ ಅಥವಾ ಇನ್ನೂ ಜಾಸ್ತಿ ಸಮಯ ಬೇಕಾಗಬಹುದು. ಆ ನಂತರ ಹಸಿ ಮೊಟ್ಟೆಯೊಂದಿಗೆ ಈ ಮೊಟ್ಟೆಯನ್ನೂ ನೆಲದ ಮೇಲಿಟ್ಟು ತಿರುಗಿಸಿ. ಮಜಾ ನೋಡಿ. ಒಂದು ಗಿರಕಿ ಹೊಡೆಯುತ್ತಿರುತ್ತದೆ, ಮತ್ತೊಂದು ನಿಂತಲ್ಲೇ ಅಲುಗಾಡುತ್ತಿರುತ್ತದೆ.
ಎರಡನ್ನೂ ನಿಲ್ಲಿಸಲು ಪ್ರಯತ್ನಿಸಿ. ಹಸಿ ಮೊಟ್ಟೆ ತಕ್ಷಣ ತನ್ನ ಚಲನೆ ನಿಲ್ಲಿಸುತ್ತದೆ, ಬೇಯಿಸಿದ್ದು ಇನ್ನೂ ಅಲುಗಾಡುತ್ತಲೇ ಇರುತ್ತದೆ. ಯಾಕೆ ಗೊತ್ತಾ? ಹಸಿ ಮೊಟ್ಟೆಯಲ್ಲಿ ಬಿಳಿ, ಹಳದಿ ದ್ರವಗಳಿರುತ್ತವೆ. ಹೀಗಾಗಿ ಅದು ಗಿರಕಿ ಹೊಡೆಯುತ್ತಿರುತ್ತದೆ. ಯಾವುದೇ ಕೇಂದ್ರದಲ್ಲಿ ಮುಟ್ಟಿದರೂ ತಕ್ಷಣ ನಿಲ್ಲುತ್ತದೆ. ಬೇಯಿಸಿದ ಮೊಟ್ಟೆಯಲ್ಲಿ ದ್ರವಗಳು ಗಟ್ಟಿ ರೂಪ ತಾಳುವುದರಿಂದ ಅವಕ್ಕೆ ಜಡತ್ವ ಬಂದಿರುತ್ತದೆ. ನಿಂತಲ್ಲಿಯೇ ಅಲುಗಾಡುತ್ತಿರುವ ಮೊಟ್ಟೆಯನ್ನು ನಿಲ್ಲಿಸಲು ಪ್ರಯತ್ನಿಸಿದಾಗ ಗುರುತ್ವಾಕರ್ಷಣ ಕೇಂದ್ರ ಬದಲಾಗುವುದರಿಂದ ಅಲುಗಾಡುತ್ತಲೇ ಇರುತ್ತದೆ. ಕಾರಿನಲ್ಲಿ ಹೋಗುತ್ತಿರುವಾಗ ಸಡನ್ನಾಗಿ ಬ್ರೇಕ್ ಹಾಕಿದರೆ ನಮ್ಮ ದೇಹ ಒಂದು ಕಡೆ ವಾಲುತ್ತದೆಯಲ್ಲವೆ, ಅದೇ ರೀತಿ.
ಒಂದು ಮೊಟ್ಟೆ ಗಿರಕಿ ನಿಲ್ಲಿಸಿದರೆ ಮತ್ತೊಂದು ನಿಂತಲ್ಲೇ ಅಲುಗಾಡುತ್ತಿರುವುದೇಕೆ ಎಂದು ಎಲ್ಲರೂ ಮಂಡೆಬಿಸಿ ಮಾಡಿಕೊಳ್ತಿರುವಾಗ ಎಷ್ಟು ಮಜಾ ಇರುತ್ತೆ ಅಲ್ವಾ?