

ಪ್ರತಿಯೊಂದಕ್ಕೂ ಮಿತಿ ಅನ್ನೋದು ಇರುತ್ತದೆ. ಅದನ್ನು ಮೀರಿದರೆ ಅಪಾಯ ತಪ್ಪಿದ್ದಲ್ಲ ಎನ್ನುವುದು ತಿಳಿದವರ ಮಾತು. ಈ ಸತ್ಯ ಗೊತ್ತಿದ್ದರೂ ನಮ್ಮಲ್ಲಿ ಕೆಲವರು ಮಿತಿ ಮೀರಲು ಹೋಗಿ ಏನೇನೋ ಎಡವಟ್ಟು ಮಾಡಿಕೊಳ್ತಾರೆ....
ಈ ಪೀಠಿಕೆ ಯಾಕೆ ಅಂತೀರಾ? ಇಂಟರ್ನೆಟ್ ಅಡಿಕ್ಷನ್‌ಗಾಗಿ. ಇತ್ತೀಚಿನ ದಿನಗಳಲ್ಲಿ ಅಡಿಕ್ಷನ್ ಯುವಜನರನ್ನು ಗಂಭೀರವಾಗಿ ಕಾಡುವ ರೋಗಗಳ ಸಾಲಿಗೆ ಸೇರಿದೆ. ಕೆಲ ವರ್ಷಗಳ ಹಿಂದೆ ಕೇವಲ ಕಂಪ್ಯೂಟರ್, ಲ್ಯಾಪ್‌ಟಾಪ್‌ಗಳಿಗಷ್ಟೇ ಸೀಮಿತವಾಗಿದ್ದ ಈ ಅಡಿಕ್ಷನ್ ಸ್ಮಾರ್ಟ್‌ಫೋನ್‌ಗಳ ಕೃಪೆಯಿಂದಾಗಿ ಈಗ ಅಂಗೈಗೂ ಬಂದು ಬಿಟ್ಟಿದೆ.
ಈ ಇಂಟರ್ನೆಟ್ ಗೀಳು ಅಂದ್ರೇನು ಗೊತ್ತಾ?
ಅಡ್ಡಪರಿಣಾಮ ಉಂಟಾಗುವ ರೀತಿಯಲ್ಲಿ ಯಾವುದೇ ವಸ್ತುವನ್ನು ಬಿಡದೇ ಚಟಕ್ಕೆ ಬಿದ್ದವರಂತೆ ಉಪಯೋಗಿಸುವುದಕ್ಕೆ ವಿಶಾಲ ಅರ್ಥದಲ್ಲಿ ಗೀಳು ಅಂತ ಕರೆಯಬಹುದು. ಇಂಟರ್ನೆಟ್ ಅನ್ನೇ ಚಟಕ್ಕೆ ಬಿದ್ದವರಂತೆ ಉಪಯೋಗಿಸುವುದಕ್ಕೆ ಇಂಟರ್ನೆಟ್ ಅಡಿಕ್ಷನ್ ಎನ್ನುತ್ತಾರೆ. ಇದನ್ನು ವೈದ್ಯರು ಐಎಡಿ (ಇಂಟರ್ನೆಟ್ ಅಡಿಕ್ಷನ್ ಡಿಸಾರ್ಡರ್) ಎಂದೂ ಕರೆಯುತ್ತಾರೆ.
ಯುವಜನರನ್ನು ನಿಧಾನವಾಗಿ ಆವರಿಸುತ್ತಿರುವ ಐಎಡಿ ಏನೇನು ಮಾಡಿದೆ, ಇದರಿಂದ ಏನೇನಾಗಬಹುದು, ಈ ಗೀಳು ಯಾವ ಪ್ರಮಾಣದಲ್ಲಿದೆ ಎಂಬ ಬಗ್ಗೆ ಇಲ್ಲೊಂದಿಷ್ಟು ಮಾಹಿತಿಗಳಿವೆ.
ಐಎಡಿ ಹೇಗೆ ಉಂಟಾಗುತ್ತದೆ?