ಬುಗುರಿ
ಅಂದ ಚೆಂದದ ಗುಂಡು ಬುಗುರಿ
ಅಜ್ಜ ಕೆತ್ತಿ ಕೊಟ್ಟ ಬುಗುರಿ
ನಾರ ದಾರ ಹೆಣೆದ ಚಾಟಿ
ಸುತ್ತಿ ಬಿಡಲು ಗಿರಕಿ ಹೊಡೆದು
ತನ್ನ ಸುತ್ತ ತಾನೆ ತಿರುಗಿ
ಗಿರಕಿ ಹಾಕಿ ಕುಣಿವ ಬುಗುರಿ
ಕರದ ಮೇಲೆ, ನೆಲದ ಮೇಲೆ
ಗಿರನೆ ಗಿರನೆ ತಿರುಗಿ ತಿರುಗಿ
ಮನವ ಸೆಳೆವ ಚೆಲುವ ಬುಗುರಿ
ಬುಗುರಿ ಮೇಲೆ ಬುಗುರಿಯಾಟ
ಗುನ್ನ ಹಾಕಿ ನಲಿವ ಪಾಠ
ಹಳ್ಳಿ ಮಕ್ಳ ಸೆಳೆವ ಆಟ
ಗುಂಪುಗೂಡಿ ನಡೆವ ಕೂಟ
ರಂಗು ರಂಗು ಬುಗುರಿಯಾಟ
- ಕೊಟ್ರೇಶ್ ಎಸ್. ಉಪ್ಪಾರ್
---------------
ಮನರಂಜಕ ಸತ್ಯಾಂಶಗಳು
ಇಲಿಗಳು ಒಂಟೆಗಳಿಗಿಂತ ಹೆಚ್ಚು ಕಾಲ ನೀರಿಲ್ಲದೇ ಇರಬಲ್ಲವು.
ಸೈಲ್ಫಿಷ್ ಬೆನ್ನೀಜು (ಹಲವು ರೆಕ್ಕೆಗಳುಳ್ಳ ಮೀನು) ಕುದುರೆಯ ದೌಡಿಗಿಂತ ಹೆಚ್ಚು ವೇಗದಿಂದ ಈಜುತ್ತವೆ.
ವಿಶ್ವದಲ್ಲೇ ಬಹು ವ್ಯಾಪಕವಾಗಿ ಬೆಳೆಯುವ ಹಣ್ಣು- ಸೇಬು. ಎರಡನೇ ಸ್ಥಾನ ಪೇರು ಹಣ್ಣಿನದು.
ಚಾಕೊಲೇಟಿನ ವಾಸನೆ ಮತ್ತು ಬಣ್ಣವುಳ್ಳ ಪಾತರಗಿತ್ತಿಯನ್ನು ಬ್ರೆಜಿಲ್ನಲ್ಲಿ ಪತ್ತೆ ಮಾಡಲಾಗಿದೆ.
ಪ್ಲಾಸ್ಮಾ ಒಂದು ವಿಚಿತ್ರ ಅನಿಲ. ಇದರಲ್ಲಿ ಅಣುಗಳು, ಪರಮಾಣುಗಳು ಇಲ್ಲ. ಐಯಾನ್ ಮತ್ತು ಎಲೆಕ್ಟ್ರಾನ್ಗಳನ್ನು ಕಾಣಬಹುದು.
ಸಂಗ್ರಹ- ವೀರನಗೌಡ. ಪಾಟೀಲ
-------
ಮೂರು ಮುತ್ತುಗಳು
ದೇಶ, ರಾಷ್ಟ್ರಧ್ವಜ, ಸ್ವಾಭಿಮಾನ ಈ ಮೂರಕ್ಕೆ ಹೋರಾಡಿ.
ಧರ್ಮ, ನ್ಯಾಯ, ವಿನಯ ಈ ಮೂರಕ್ಕೆ ಗೌರವ ಕೊಡಿ.
ಧೈರ್ಯ, ವಾತ್ಸಲ್ಯ, ಶಿಷ್ಟಾಚಾರ ಈ ಮೂರನ್ನು ಪ್ರೀತಿಸಿ.
ಸಮಯ, ಶಿಕ್ಷಣ, ಹಣ ಈ ಮೂರನ್ನು ವ್ಯರ್ಥ ಮಾಡಬೇಡಿ.
ವ್ಯಾಪಾರ, ಪ್ರಣಯ, ಮದುವೆ ಈ ಮೂರಕ್ಕೆ ಆತುರ ಬೇಡ.
ಆಸೆ, ಕೋಪ, ನಾಲಿಗೆ ಈ ಮೂರು ಹತೋಟಿಯಲ್ಲಿರಲಿ.
ಅನ್ಯಾಯ, ಅಹಂಕಾರ, ಸ್ವಾಮಿ ದ್ರೋಹ ಈ ಮೂರನ್ನು ಮಾಡಬೇಡಿ.
ಕೆಲಸ, ನಂಬಿಕೆ, ಕರ್ತವ್ಯ ಈ ಮೂರಕ್ಕೆ ದ್ರೋಹ ಮಾಡಬೇಡಿ.
ಸಾವು, ಸೋಲು, ದುಃಖ ಈ ಮೂರಕ್ಕೆ ಸಿದ್ಧರಾಗಿ.
ತಂದೆ, ತಾಯಿ, ದೇವರು ಈ ಮೂರನ್ನು ಮರೆಯಬೇಡಿ.
ಸಂಗ್ರಹ- ಕೆ.ಎಂ. ಆನಂದರಾಮ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

