ಸರಳ, ಸಜ್ಜನಿಕೆಯ ಶಿಕ್ಷಕ ಡಾ.ವೇಣುಗೋಪಾಲ್!

ಡಾ. ಕೆ. ವೇಣುಗೋಪಾಲ್! ಈ ಹೆಸರು ಕಿವಿಗೆ ಬಿದ್ದೊಡನೆ ಬೆಂಗಳೂರು ಬೆಂಗಳೂರು ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ನೆನಪಾಗುವುದು ಸರಳ ಸಜ್ಜನಿಕೆಯ ವ್ಯಕ್ತಿತ್ವ. ಹೌದು. ಡಾ. ವೇಣುಗೋಪಾಲ್ ಅಂದ್ರೆನೇ ಹಾಗೆ. ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿರುವ ವೇಣುಗೋಪಾಲ್ ಯಾವತ್ತೂ ಸಾದಾ ಸೀದಾ. ಕಾಯಕವೇ ಕೈಲಾಸ ಎಂದು ನಂಬಿದವರು.
35ಕ್ಕೂ ಹೆಚ್ಚಿನ ಕೃತಿಗಳು ಹಾಗೂ 350ಕ್ಕೂ ಹೆಚ್ಚಿನ ಸಂಶೋಧನಾ ಲೇಖನ ಸಿದ್ಧಪಡಿಸಿರುವ ವೇಣುಗೋಪಾಲ್ ತಮ್ಮ ಪುಸ್ತಕಗಳ ಮಾರಾಟದಿಂದ ಸಿಗುವ ಸಂಭಾವನೆಯನ್ನು ವಿದ್ಯಾಲಯದಲ್ಲಿ ಓದುತ್ತಿರುವ ಮಕ್ಕಳಿಗೆ ವಿದ್ಯಾರ್ಥಿವೇತನ ರೂಪದಲ್ಲಿ ಹಾಗೂ 'ನೆಲೆ' ಎನ್ನುವ ಎನ್ಜಿಓಗೆ ನೀಡಿದ್ದಾರೆ. ಇತ್ತೀಚೆಗೆ ಟೆಕಿಪ್ ಯೋಜನೆಯಲ್ಲಿ ದೊರೆತ 5 ಲಕ್ಷದಲ್ಲಿ ಸರ್.ಎಂ.ವಿ ಹಾಗೂ ಸ್ವಾಮಿ ವಿವೇಕಾನಂದರ ಕಂಚಿನ ಪ್ರತಿಮೆಯನ್ನು ನಿರ್ಮಿಸಿ ಕಾಲೇಜಿನ ಮುಂಭಾಗದಲ್ಲಿ ಇರಿಸಿದ್ದಾರೆ.
ಕಲಿತ ಕಾಲೇಜಲ್ಲೇ ಪ್ರಿನ್ಸಿಪಾಲ್
ಕಲಿತ ಕಾಲೇಜನ್ನೇ ಮುನ್ನಡೆಸುವ ಭಾಗ್ಯ ಸಿಗುವುದು ಎಲ್ಲೋ ಒಂದಿಬ್ಬರಿಗೆ ಅಷ್ಟೆ. ಇಂಥ ಅಪರೂಪದ ವ್ಯಕ್ತಿಗಳಲ್ಲಿ ಡಾ. ವೇಣುಗೋಪಾಲ್ ಅವರೂ ಒಬ್ಬರು. 1975ರಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಎಲೆಕ್ಟ್ರಾನಿಕ್ ಆ್ಯಂಡ್ ಕಮ್ಯುನಿಕೇಷನ್ ಶಿಕ್ಷಣ ಮುಗಿಸಿದ ಡಾ. ವೇಣುಗೋಪಾಲ್ ಈಗ ಅದೇ ಕಾಲೇಜಿನ ಪ್ರಾಂಶುಪಾಲ. ಇದಕ್ಕೂ ಮೊದಲು ಭಾರತೀಯ ವಿಜ್ಞಾನ ಮಂದಿರದಲ್ಲಿ ಕಂಪ್ಯೂಟರ್ ಸೈನ್ಸ್ ಆ್ಯಂಡ್ ಅಟೋಮೆಶನ್ನಲ್ಲಿ ಶಿಕ್ಷಣ, ಬೆಂಗಳೂರು ವಿವಿಯಲ್ಲಿ ಆರ್ಥಶಾಸ್ತ್ರ ಹಾಗೂ ಮದ್ರಾಸ್ನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಕಂಪ್ಯೂಟರ್ಸ್ ಸೈನ್ಸ್ ವಿಭಾಗದಲ್ಲಿ ಪಿಎಚ್.ಡಿ ಪದವಿಯನ್ನೂ ಪಡೆದಿದ್ದಾರೆ. ಈಗ ಡಿ.ವಿ.ಜಿ. ಜ್ಞಾನವಾಹಿನಿಯ ವಿಶೇಷಾಧಿಕಾರಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಡಾ. ವೇಣುಗೋಪಾಲ್ ತಮ್ಮ ಮೂರು ದಶಕಗಳ ವೃತ್ತಿ ಜೀವನದಲ್ಲಿ 45ಕ್ಕೂ ಹೆಚ್ಚು ವಿಷಯಗಳನ್ನು ಬೋಧಿಸಿದ್ದಾರೆ. ಇವರ 18 ಶಿಷ್ಯರು ಬೆಂಗಳೂರು ವಿವಿಯಲ್ಲೇ ಕಾರ್ಯನಿರ್ವಹಿಸುತ್ತಿದ್ದಾರೆ. ವಿವಿಧ ಕಾಲೇಜಿನಲ್ಲಿ 250ಕ್ಕೂ ಹೆಚ್ಚು ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದಾರೆ.
-ದೇವರಾಜ್ ಎಲ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


