1. ಉದ್ದುದ್ದವನೆ, ಉರಿಮುಖದವನೆ ಎದ್ದು ಬಾರಯ್ಯ ಮುದ್ದು ಕುಮಾರ...
2. ನನ್ನೂರಿಗೆ ನಿನ್ನೂರು ಸೇರಿದರೆ ಏನಾಗುತ್ತೆ?
3. ಜಗತ್ತಿನಲ್ಲಿ ಇದುವರೆಗೆ ಹೆಚ್ಚು ತಲೆತಿಂದವನು ಇವನು...?
4. ಮೂರು ಅಕ್ಕಪಕ್ಕದ ಕಟ್ಟಡಗಳಿರುತ್ತವೆ. ಒಂದು 25 ಮಹಡಿಯದು, ಒಂದು 15 ಮಹಡಿಯದು, ಮತ್ತೊಂದು 7 ಮಹಡಿಯದು. ಮೂರಕ್ಕೂ ಒಮ್ಮೆ ಆಕಸ್ಮಿಕವಾಗಿ ಬೆಂಕಿ ಬೀಳುತ್ತದೆ. ತಕ್ಷಣ ಆ್ಯಂಬುಲೆನ್ಸ್ ಬಂದರೆ ಮೊದಲು ಯಾವ ಕಟ್ಟಡದ ಬೆಂಕಿ ನಂದಿಸುತ್ತದೆ?
5. ಎಲ್ಲ ಪ್ರತಿಮೆ ಮೇಲೂ ಕಾಗೆ ಕೂರುತ್ತದೆ. ಗಾಂಧೀಜಿ ಪ್ರತಿಮೆ ಮೇಲೆ ಮಾತ್ರ ಕೂರೋದಿಲ್ಲ. ಯಾಕೆ?
ಉತ್ತರಗಳು
1. ಮೆಣಸಿನಕಾಯಿ
2. ಇನ್ನೂರು
3. ಹೇನು
4. ಯಾವುದರದ್ದೂ ಇಲ್ಲ, ಏಕೆಂದರೆ ಬಂದಿದ್ದು ಆ್ಯಂಬುಲೆನ್ಸ್, ಫೈರ್ ಎಂಜಿನ್ ಅಲ್ಲ.
5. ಗಾಂಧೀಜಿ ಕೈಯ್ಯಲ್ಲಿ ಕೋಲಿರುತ್ತದಲ್ಲಾ ಅದಿಕ್ಕೆ.