ಕಾರು-ಬಸ್ ಡಿಕ್ಕಿ: ಒಂದೇ ಕುಟುಂಬದ ಐವರ ಸಾವು
ಕನ್ನಡಪ್ರಭ ವಾರ್ತೆ ಅರಸೀಕೆರೆ ಆ. 5
ಸಾರಿಗೆ ಬಸ್‌ಗೆ ಕಾರೊಂದು ಡಿಕ್ಕಿಯಾಗಿ ಒಂದೂವರೆ ವರ್ಷದ ಗಂಡು ಮಗು ಸೇರಿದಂತೆ ಒಂದೇ ಕುಟುಂಬದ ಐವರು ಸ್ಥಳದಲ್ಲೇ ಮೃತಪಟ್ಟ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಬೆಂಡೇಕೆರೆ ಸಮೀಪ ಸೋಮವಾರ ಸಂಭವಿಸಿದೆ.
ಬೆಂಗಳೂರಿನಲ್ಲಿ ವಿದ್ಯುತ್ ಗುತ್ತಿಗೆದಾರರಾಗಿರುವ ಬೆಟ್ಟೇಗೌಡ (60), ನಾಗಮ್ಮ (50), ಜಗದೀಶ್ (35), ಸೊಸೆ ಕುಮುದಾ (27), ಧನುಷ್ (1.5) ಮೃತಪಟ್ಟವರು. ಗಂಭೀರ ಗಾಯಗೊಂಡಿರುವ ನಾಗಮ್ಮರನ್ನು ಬೆಂಗಳೂರಿನ ನಿಮಾನ್ಸ್‌ಗೆ ಸೇರಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರೆ, ಉಳಿದವರು ಸ್ಥಳದಲ್ಲಿಯೇ ಅಸುನೀಗಿದರು.
ಭಾನುವಾರ ಜೋಗ ಜಲಪಾತ ವೀಕ್ಷಿಸಲು ಈ ಕುಟುಂಬ ತೆರಳಿತ್ತು.
ಜೋಗ ಬಳಿಯ ಕಾರ್ಗಿಲ್‌ನ ಸೋದರ ಸಂಬಂಧಿಕರ ಮನೆಯಿಂದ ಸೋಮವಾರ ಬೆಳಗಿನ ಜಾವ 5.30ಕ್ಕೆ ಹೊರಟಿತ್ತು. ಬೀರೂರು ದಾಟಿದ ನಂತರ ಮುಂದೆ ಹೋಗುತ್ತಿದ್ದ ಆಟೋರಿಕ್ಷಾವನ್ನು ಹಿಂದಿಕ್ಕಲು ಹೋದ ಹುಂಡೈ ಕಾರು ಎದುರಿನಿಂದ ಬಂದ ಸಾರಿಗೆ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಅದೃಷ್ಟವಶಾತ್ ಈ ಕುಟುಂಬದ ಇನ್ನೊಂದು ಮಗು ಅಪಘಾತ ಸಂಭವಿಸುವ ತುಸು ಮುನ್ನ ಇವರೊಂದಿಗೇ ಆಗಮಿಸುತ್ತಿದ್ದ ಸಂಬಂಧಿಕರ ಮತ್ತೊಂದು ಕಾರಿನಲ್ಲಿ ಕುಳಿತಿತ್ತು.
ಡಿವೈಎಸ್‌ಪಿ ಮಂಜುನಾಥ್, ಗ್ರಾಮಾಂತರ ವೃತ್ತ ನಿರೀಕ್ಷಕ ಗಂಗಾಧರಪ್ಪ, ಬಾಣಾವರ ಪಿಎಸ್‌ಐ ನರೇಂದ್ರಕುಮಾರ್, ಗ್ರಾಮಾಂತರ ಎಸ್‌ಐ ಸುನೀಲ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬಸ್ ಚಾಲಕ ಪರಾರಿಯಾಗಿದ್ದಾನೆ. ಬಾಣಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

