ಪ್ರಧಾನ ಸುದ್ದಿ

ಸೆನ್ಸೆಕ್ಸ್ ಕುಸಿತ ಬಂಗಾರ ಜಿಗಿತ

Published On :

ನವದೆಹಲಿ/ಮುಂಬೈ: ಅಮೆರಿಕದ ಆರ್ಥಿಕ ಕ್ರಮಗಳ ಆತಂಕ ಹಾಗೂ ದೇಶೀಯ ಕಂಪನಿಗಳ ವಿದೇಶಿ ನೇರ ಬಂಡವಾಳ ಹೂಡಿಕೆ ಮೇಲೆ ನಿಯಂತ್ರಣ ಹೇರಿದ ಆರ್‌ಬಿಐ ಕ್ರಮ ಷೇರು ಮಾರುಕಟ್ಟೆಯ ಮಹಾಪತನಕ್ಕೆ ಶುಕ್ರವಾರ ಸಾಕ್ಷಿಯಾಯಿತು.
ನಾಲ್ಕು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಸೆನ್ಸೆಕ್ಸ್ 769.41 ಅಂಕ ಕುಸಿತ ಕಂಡರೆ, ಬಿಎಸ್‌ಇ 234.45 ಅಂಕಗಳಷ್ಟು ಕುಸಿತ ದಾಖಲಿಸಿದೆ. ಇದರ ಬೆನ್ನಲ್ಲೇ ರುಪಾಯಿ ಮೌಲ್ಯ ಇದೇ ಮೊದಲ ಬಾರಿಗೆ 62ರ(62.03) ಗಡಿ ದಾಟಿದೆ. ದಿನದ ಅಂತ್ಯಕ್ಕೆ ಚೇತರಿಕೆ ಕಂಡ ರುಪಾಯಿ 61.65ರಲ್ಲಿ ಸ್ಥಿರವಾಯಿತು. ಮಾರುಕಟ್ಟೆ ಮತ್ತು ರುಪಾಯಿ ಮೌಲ್ಯದಲ್ಲಿನ ಈ ಕುಸಿತದಿಂದಾಗಿ ವರಮಹಾಲಕ್ಷ್ಮಿ ಹಬ್ಬದ ಒಂದೇ ದಿನ ಮಾರುಕಟ್ಟೆ ಆತಂಕಕ್ಕೆ ಹೂಡಿಕೆದಾರರ 2 ಲಕ್ಷ ಕೋಟಿ ಸಂಪತ್ತು ನೀರಿನಲ್ಲಿ ಕೊಚ್ಚಿಹೋದಂತಾಯಿತು. ಈ ನಡುವೆ, ಷೇರುಮಾರುಕಟ್ಟೆಯ ಮಹಾಪತನದಿಂದ ಎಚ್ಚೆತ್ತುಕೊಂಡ ಸರ್ಕಾರ ಹಾಗೂ ಆರ್‌ಬಿಐ ಹೂಡಿಕೆದಾರರ ಭೀತಿ ನಿವಾರಿಸುವ ಕೆಲಸಕ್ಕೆ ಕೈಹಾಕಿದೆ. ಬಂಡವಾಳ ನಿಯಂತ್ರಣ ವ್ಯವಸ್ಥೆಗೆ ಮರಳುವುದಿಲ್ಲ ಎನ್ನುವ ಭರವಸೆ ನೀಡಿದೆ.
ಅಮೆರಿಕದಿಂದ ಹರಿದು ಬರುವ ಅಂಕಿ- ಸಂಖ್ಯೆಗಳಿಗೆ ಈಮಟ್ಟಿಗೆ ಪ್ರತಿಕ್ರಿಯಿಸುವಷ್ಟು ಮಾರುಕಟ್ಟೆ ಸೂಕ್ಷ್ಮವಾಗಬಾರದು. ಮಾರುಕಟ್ಟೆಯಲ್ಲಿ ಪರಿಸ್ಥಿತಿ ಶಾಂತಗೊಂಡಾಗ ಭಾರತೀಯ ಮಾರುಕಟ್ಟೆಯ ಸ್ಥಿತಿ ಗಳನ್ನು ಜನರು ಅರ್ಥಮಾಡಿಕೊಳ್ಳಲು ಆರಂಭಿಸುತ್ತಾರೆ.              

ಭಾರತದ ಮಾರುಕಟ್ಟೆಯ ಸ್ಥಿತಿಗಳು ದೇಶೀಯ ಮಾರುಕಟ್ಟೆ ಪರಿಸ್ಥಿತಿಯನ್ನು ಅವಲಂಬಿಸಿರುತ್ತವೆ. ಅವುಗಳು ಅಮೆರಿಕದಿಂದ ಹರಿದು ಬರುವ ಅಂಕಿ- ಅಂಶಗಳನ್ನು ಅವಲಂಬಿಸಿರುವುದಿಲ್ಲ ಎನ್ನುವುದು ಅವರಿಗೆ ಅರ್ಥವಾಗುತ್ತದೆ ಎಂದು ಚಿದಂಬರಂ ತಿಳಿಸಿದ್ದಾರೆ.
18,598 ಅಂಕ: ಇದಕ್ಕೂ ಮುನ್ನ ಹಿಂದಿನ ನಾಲ್ಕು ಸೆಷನ್‌ಗಳಲ್ಲಿ 703 ಏರಿಕೆಕಂಡಿದ್ದ ಸೆನ್ಸೆಕ್ಸ್ ದಿನದಂತ್ಯಕ್ಕೆ 769.41 ಅಂಕ ಕುಸಿತ ಕಂಡು 18,598 ಅಂಕದಲ್ಲಿ ವಹಿವಾಟು ಮುಗಿಸಿತು. ಅಂದರೆ ಶೇ. 3.97ರಷ್ಟು ಕುಸಿತ ದಾಖಲಿಸಿತು. ಇನ್ನೊಂದು ಕಡೆ ನಿಫ್ಟಿಯು ದಿನದಂತ್ಯಕ್ಕೆ ಶೇ.4.08ರಷ್ಟು ಕುಸಿತ ದಾಖಲಿಸಿ 5,507 ಅಂಕಗಳೊಂದಿಗೆ ವಹಿವಾಟು ಮುಗಿಸಿತು. ಇದರ ಮಧ್ಯದಲ್ಲೇ, ಆರ್‌ಬಿಐನ ಸುಧಾರಣಾ ಕ್ರಮಗಳ ಹೊರತಾಗಿಯೂ ಡಾಲರ್ ಎದುರು 61.35ನೊಂದಿಗೆ ವಹಿವಾಟು ಆರಂಭಿಸಿದ ರುಪಾಯಿ ಮೌಲ್ಯ ದಿನದ ಅಂತ್ಯಕ್ಕೆ ಡಾಲರ್ ಎದುರು 61.65ಕ್ಕೆ ಕುಸಿಯಿತು.


ಮಹಾ ಕುಸಿತ ಏಕೆ?

ಟ ರುಪಾಯಿ ಮೇಲಿನ ಒತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ಬುಧವಾರ ಆರ್‌ಬಿಐ ದೇಶದ ಪ್ರಜೆಗಳು ಹಾಗೂ ಕಂಪನಿಗಳು ಎಷ್ಟು ಪ್ರಮಾಣದಲ್ಲಿ ವಿದೇಶದಲ್ಲಿ ಹೂಡಿಕೆ ಮಾಡಬಹುದು ಎಂದು ಗುರಿ ನಿಗದಿ ಮಾಡಿತ್ತು. ಆದರೆ, ಇದು ಕಂಪನಿಯ ಲಾಭದ ಮೇಲೆ ಪರಿಣಾಮ ಬೀರಬಹುದು. ಇದರ ಪರಿಣಾಮ ಬಂಡವಾಳದ ಮೇಲೆ ಸರ್ಕಾರ ಇನ್ನಷ್ಟು ನಿಯಂತ್ರಣ ಹೇರಬಹುದು. ಇದು ವಿದೇಶಿ ಹೂಡಿಕೆದಾರರಲ್ಲಿ ಆತಂಕ ಮೂಡಿಸಬಹುದು ಎಂದು ವಹಿವಾಟುದಾರರು ಭೀತಿಗೊಂಡಿದ್ದರು.
ಟ ಅಮೆರಿಕದ ಆರ್ಥಿಕ ಸ್ಥಿತಿ ಸುಧಾರಣೆ ಕಾಣುತ್ತಿರುವ ಹಿನ್ನೆಲೆಯಲ್ಲಿ ಹಣಕಾಸು ಉತ್ತೇಜನ ಕ್ರಮಗಳನ್ನು ಅವಧಿಗೆ ಮೊದಲೇ ಹಿಂತೆಗೆದುಕೊಳ್ಳುತ್ತದೆ ಎನ್ನುವ ಭೀತಿ.



ಬೆಳ್ಳಿ ದರವೂ ಏರಿಕೆ

ಬೆಳ್ಳಿ ದರವೂ ಭಾರಿ ಏರಿಕೆ ಕಂಡಿದೆ. ವರ್ಷದಲ್ಲಿ ಇದೇ ಮೊದಲ ಬಾರಿಗೆ ಬೆಳ್ಳಿ ದರ ಒಂದೇ ದಿನ ಪ್ರತಿ ಕೆ.ಜಿ.ಗೆ 3,270ರಷ್ಟು ಏರಿಕೆ ಕಂಡಿದೆ. ಈ ಮೂಲಕ ಕೆ.ಜಿ. ಬೆಳ್ಳಿ ದರ 49,320 ತಲುಪಿದಂತಾಗಿದೆ. ಶುಕ್ರವಾರ ಮುಂಬೈ ಮಾರುಕಟ್ಟೆಯಲ್ಲಿ 10 ಗ್ರಾಂ ಶುದ್ಧ ಚಿನ್ನದ ಬೆಲೆ 20695 ಇದ್ದರೆ, ಬೆಂಗಳೂರಿನಲ್ಲಿ 31,078 ಇತ್ತು. ಪ್ರತಿ ಗ್ರಾಂ ಆಭರಣ ಚಿನ್ನದ ಬೆಲೆ ಬೆಂಗಳೂರಿನಲ್ಲಿ 2890 ಇತ್ತು. ಮುಂಬೈ ಮಾರುಕಟ್ಟೆಯಲ್ಲಿ ಬೆಳ್ಳಿ ದರ ಕೆ.ಜಿ.ಗೆ 49980 ಇದ್ದರೆ, ಬೆಂಗಳೂರಿನಲ್ಲಿ 46,800 ಇತ್ತು.


ಹಿಂದಿನ ಮಹಾ ಕುಸಿತ
21- 01- 2008
1744 ಅಂಕ
24- 10- 08
1100 ಅಂಕ
17- 03- 08
951 ಅಂಕ


ಅಪಮೌಲ್ಯ ಪ್ರತಿ ಡಾಲರ್‌ಗೆ 62

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.