ಪ್ರಧಾನ ಸುದ್ದಿ

ಮುಕ್ಕಾಲು ಹುದ್ದೆ ಖಾಲಿ; ಉನ್ನತ ಶಿಕ್ಷಣ ವಗ್ಗಾಲಿ

Published On :

ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಆ.19-
ಇಲ್ಲಿ ಮಂಜೂರಾದ 213 ಹುದ್ದೆಗಳ ಪೈಕಿ ಈಗ ಕೆಲಸದಲ್ಲಿರುವವರು 100ಕ್ಕಿಂತಲೂ ಕಡಿಮೆ.  20 ವರ್ಷಗಳಿಂದಲೂ ಈ ದುರ್ಗತಿ ಜ್ಞಾನಗಂಗೆಯನ್ನು ಕಾಡುತ್ತಿದೆ. ಹೀಗಾಗಿ ಹಿಂದುಳಿದ ನೆಲದಲ್ಲಿ ಉನ್ನತ ಶಿಕ್ಷಣ ಬಂಡಿ ಗುರಿ ತಲುಪದೆ ದಾರಿಯಲ್ಲೇ ವಗ್ಗಾಲಿ ಹೊಡೆಯತ್ತಿದೆ.
ಗುಲ್ಬರ್ಗ ವಿವಿ ಸ್ಥಾಪನೆಯಾಗಿ 32 ವರ್ಷಗಳು ಕಳೆದಿದೆ. ಈ ಪೈಕಿ ವಿವಿಯ ಎಲ್ಲ ವಿಭಾಗಗಳು ಬೋಧಕರಿಂದ ಕಂಗೊಳಿಸಿದ್ದು ಆರಂಭದ 10 ವರ್ಷ ಮಾತ್ರ. ಒಂದಾನೊಂದು ಕಾಲಕ್ಕೆ ರಸಾಯನಶಾಸ್ತ್ರ ವಿಭಾಗ (ಇದು ವಿವಿಯ ಹಳೆಯ,  ಪ್ರತಿಷ್ಠಿತ ವಿಭಾಗ) 26 ಪ್ರಾಧ್ಯಾಪಕರಿದ್ದರು. ಆದರೆ ಈಗ ಕೇವಲ 5 ಮಂದಿ ಪ್ರಾಧ್ಯಾಪಕರು ಇದ್ದಾರೆ. ಕನ್ನಡ ಅಧ್ಯಯನ, ಇಂಗ್ಲಿಷ್, ಹಿಂದಿ, ಸಂಸ್ಕೃತ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಸಮಾಜಶಾಸ್ತ್ರದಂಥ ಶಿಕ್ಷಣ ನಿಖಾಯ, ಭೌತಶಾಸ್ತ್ರ, ಪ್ರಾಣಿಶಾಸ್ತ್ರ, ಸಸ್ಯಶಾಸ್ತ್ರ,  ಸೂಕ್ಷ್ಮಜೀವಿ, ಎಂಸಿಎಯಂಥ ವಿಜ್ಞಾನ ನಿಖಾಯಗಳೂ  ಬೋಧಕರಿಲ್ಲದೆ ಬಣಗುಡುತ್ತಿವೆ.  ಹಿಂದುಳಿದ ನೆಲದಲ್ಲಿ ಉನ್ನತ ಶಿಕ್ಷಣ ಪಸರಿಸಬೇಕು ಎಂಬ ಉದ್ದೇಶದೊಂದಿಗೆ 1980ರಲ್ಲಿ ಆರಂಭವಾದ ಸಂಸ್ಥೆ   ಅಪಾಯ ಎದುರಿಸುತ್ತಿದೆ.

42 ಸ್ನಾತಕೋತ್ತರ ವಿಭಾಗಗಳು: 32 ವರ್ಷಗಳಲ್ಲಿ 42 ಸ್ನಾತಕೋತ್ತರ ವಿಭಾಗಗಳು ಇಲ್ಲಿ ಆರಂಭವಾಗಿವೆ. ಆದರೆ ಯಾವ ವಿಭಾಗದಲ್ಲಿಯೂ ವಿದ್ಯಾರ್ಥಿ, ಬೋಧಕರ ಅನುಪಾತದಂತೆ ಸಿಬ್ಬಂದಿಯಿಲ್ಲ. ಇಷ್ಟೆಲ್ಲಾ ಕೊರತೆ ಇದ್ದರೂ ಸರ್ಕಾರ ಮಾತ್ರ ಹೊಸ ಕೋರ್ಸ್ ಆರಂಭಕ್ಕೆ ಅನುಮತಿ ನೀಡಿ ಇದ್ದ ಸಿಬ್ಬಂದಿಯಲ್ಲೇ ಸರಿದೂಗಿಸಿ ಎಂಬ ಹಿತವಚನ ನೀಡುತ್ತಿದೆ. ಸಮರ್ಪಕ ಅನುದಾನವಿಲ್ಲದ್ದರಿಂದ ಅತಿಥಿ ಉಪನ್ಯಾಸಕರ ನೇಮಕವೂ ಆಗುತ್ತಿಲ್ಲ.

ದುಡ್ಡಿಗೆ ಸೆಲ್ಫ್ ಸಪೋರ್ಟಿಂಗ್ ಸ್ಕೀಂ!
ಸರ್ಕಾರದ ಅನುದಾನದಲ್ಲೇ ಖೋತಾ ಆಗಿದ್ದರಿಂದ ವಿವಿ ದುಡ್ಡಿಗಾಗಿ ಸೆಲ್ಫ್ ಸಪೋರ್ಟಿಂಗ್ ಸ್ಕೀಂ ಆರಂಭಿಸಿದೆ. ಪಾವತಿ ಸೀಟು ವಿಧಾನದಲ್ಲೇ ಹಣ ಸಂಗ್ರಹಿಸಿ ಬೋಧಕ ಸಿಬ್ಬಂದಿ ಕೊರತೆ ನಿರ್ವಹಿಸುತ್ತಿದೆ. 2009ರಲ್ಲಿ 5 ಕೋಟಿ ಅನುದಾನ ರೂಪದಲ್ಲಿ ಬರುತ್ತಿತ್ತು. ಅದರ ಮೊತ್ತ ಈಗ 1.75 ಕೋಟಿಗೆ ಇಳಿದಿದೆ. ವಿವಿ ಮೂಲಗಳ ಪ್ರಕಾರ ಕಳೆದ ವರ್ಷ 2012-13ರಲ್ಲಿ ಸೆಲ್ಫ್ ಸಪೋರ್ಟಿಂಗ್ ಸ್ಕೀಂನಿಂದ  ವಿವಿ ಬೊಕ್ಕಸಕ್ಕೆ 1 ಕೋಟಿ ಸಂಗ್ರಹವಾಗಿದೆ.

- ಶೇಷಮೂರ್ತಿ ಅವಧಾನಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.