ಬಿದ್ದೇ ಬಿದ್ದ"ರು'

ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯ ಏರಿಳಿತ, ಆಹಾರ ಭದ್ರತಾ ಮಸೂದೆಯಿಂದ ಸಬ್ಸಿಡಿ ವೆಚ್ಚ ಹೆಚ್ಚಳ ಆತಂಕ ಹಾಗೂ ಸಿರಿಯಾ ಮೇಲಿನ ಅಮೆರಿಕದ ದಾಳಿ ಭೀತಿ ದೇಶದ ಮಾರುಕಟ್ಟೆಯಲ್ಲಿ ಮತ್ತೊಮ್ಮೆ ನಡುಕ ಹುಟ್ಟಿಸಿದೆ.
ಡಾಲರ್ಗೆ ಹೆಚ್ಚಿದ ಬೇಡಿಕೆ ರುಪಾಯಿ ಮೌಲ್ಯವನ್ನು ಪಾತಾಳಕ್ಕೆ ತಳ್ಳಿದೆ. ಬುಧವಾರ ಒಂದು ಹಂತದಲ್ಲಿ 68.85ಕ್ಕೆ ಕುಸಿದಿದೆ. ದಿನದಂತ್ಯಕ್ಕೆ ಐದು ಪೈಸೆಗಳಷ್ಟು ಚೇತರಿಕೆ ಕಂಡು 68.80ರಲ್ಲಿ ಸ್ಥಿರವಾಗಿದೆ. ಈ ಮೂಲಕ ಸರ್ಕಾರದ ಅಂಕೆ ಕಳೆದುಕೊಂಡಿರುವ ರುಪಾಯಿ ಮಂಗಳವಾರದ (66.24) ಸಾರ್ವಕಾಲಿಕ ಕುಸಿತದ ದಾಖಲೆಯನ್ನು ಮುರಿದಿದೆ. ಆದರೆ, ಒಂದು ಹಂತದಲ್ಲಿ 520 ಅಂಕಗಳಷ್ಟು ನಷ್ಟ ಅನುಭವಿಸಿದ್ದ ಸೆನ್ಸೆಕ್ಸ್ ದಿನದಂತ್ಯಕ್ಕೆ ಚೇತರಿಕೆ ಕಂಡು 17,996.15ರಲ್ಲಿ ವಹಿವಾಟು ಮುಗಿಸಿದೆ. ಮಂಗಳವಾರಕ್ಕೆ ಹೋಲಿಸಿದರೆ 28.07ಅಂಕಗಳಷ್ಟು ಏರಿಕೆ ದಾಖಲಿಸಿದೆ. ಆದರೆ, 5285ರಲ್ಲಿ ವಹಿವಾಟು ಮುಗಿಸಿದ ನಿಫ್ಟಿ ಮಾತ್ರ
2.45 ಅಂಕಗಳಷ್ಟು ನಷ್ಟ ಅನುಭವಿಸಿದೆ.
ಇಂದಿನ ಟ್ರೆಂಡ್
58,500
ಏಳು ತಿಂಗಳಲ್ಲಿ ಮೊದಲ ಬಾರಿಗೆ ಗರಿಷ್ಠ ಏರಿಕೆ ದಾಖಲಿಸಿದ ಕೆ.ಜಿ.ಬೆಳ್ಳಿ ದರ.
34,500
18 ವರ್ಷದಲ್ಲಿ ಇದೇ ಮೊದಲ ಬಾರಿಗೆ ಗರಿಷ್ಠ ದರ ದಾಖಲಿಸಿದ ಚಿನ್ನ
68.80
ಡಾಲರ್ ಎದುರು ಇತಿಹಾಸದಲ್ಲೇ ಮೊದಲ ಬಾರಿಗೆ 69ರ ಗಡಿ ಸಮೀಪಿಸಿದ ರುಪಾಯಿ
ಒಂದೇ ದಿನ 256 ಪೈಸೆ ನಷ್ಟ
ದಿನದ ಆರಂಭದಲ್ಲಿ 66.90ರಲ್ಲಿ ವಹಿವಾಟು ಆರಂಭಿಸಿದ ರುಪಾಯಿ ಅಂತ್ಯದ ವೇಳೆಗೆ 256 ಪೈಸೆಗಳಷ್ಟು ಕುಸಿತ ಕಂಡಿದೆ. ದಿನವೊಂದರ ವಹಿವಾಟಿನಲ್ಲಿ ರುಪಾಯಿ ಇಷ್ಟು ಪ್ರಮಾಣದಲ್ಲಿ ಕುಸಿತ ದಾಖಲಿಸಿರುವುದು ಇದೇ ಮೊದಲು.
3 ದಿನಗಳಲ್ಲಿ 560 ಪೈಸೆ
ಕಳೆದ ಮೂರು ದಿನಗಳಲ್ಲಿ ಡಾಲರ್ ಎದುರು 560 ಪೈಸೆಗಳಷ್ಟು ನಷ್ಟ ಅನುಭವಿಸಿದೆ. ಆಗಸ್ಟ್ನಿಂದ ಈವರೆಗೆ 840 ಪೈಸೆ ಅಂದರೆ ಶೇ. 14ರಷ್ಟು ನಷ್ಟ ಅನುಭವಿಸಿದೆ.
ಪ್ರಸಕ್ತ ವರ್ಷದಲ್ಲಿ
ಪ್ರಸಕ್ತ ವರ್ಷದ ರುಪಾಯಿ ಸಾಧನೆ ನೋಡಿದರೆ ಡಾಲರ್ ಎದುರು ಅದು 1381 ಪೈಸೆಗಳಷ್ಟು ನಷ್ಟ ಅನುಭವಿಸಿದೆ. ಅಂದರೆ ಶೇ. 25ರಷ್ಟು ಕುಸಿತ ದಾಖಲಿಸಿದೆ.
1,120 ಕೋಟಿ
ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಬುಧವಾರ ಷೇರುಗಳನ್ನು ಮಾರಾಟ ಮಾಡಿ1,120.43 ಕೋಟಿ ವಾಪಸ್ ಪಡೆದರು.
ಚಿನ್ನದ ದಾಖಲೆ
ರುಪಾಯಿ ಮೌಲ್ಯ ಹಾಗೂ ಷೇರು ಮಾರುಕಟ್ಟೆಯ ಕುಸಿತದಿಂದಾಗಿ ಚಿನ್ನದ ದರ ಏರಿಕೆಯ ನಾಗಾಲೋಟ ಮುಂದುವರಿದಿದೆ. 10 ಗ್ರಾಂ. ಚಿನ್ನದ ದರ 34,500 ಕ್ಕೇರುವ(ದೆಹಲಿ ಮಾರುಕಟ್ಟೆ) ಮೂಲಕ ಹೊಸ ದಾಖಲೆ ಬರೆದಿದೆ. ದಿನವೊಂದರಲ್ಲಿ ಈ ರೀತಿ 2500 ಗಳಷ್ಟು ಏರಿಕೆ ಕಂಡಿದ್ದು ಇದೇ ಮೊದಲಾಗಿದೆ. 2012ರ ನವೆಂಬರ್ನಲ್ಲಿ 10 ಗ್ರಾಂ ಚಿನ್ನದ ದರ 32,975ಕ್ಕೇರಿದ್ದು ಈವರೆಗಿನ ದಾಖಲೆಯಾಗಿತ್ತು. ಮುಂಬೈ ಚಿನಿವಾರ ಪೇಟೆಯಲ್ಲಿ 10 ಗ್ರಾಂ ಚಿನ್ನದ ದರ ದಿನದ ಅಂತ್ಯಕ್ಕೆ 33, 265 ಇತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


