ರಶೀದ್ ಮಲಬಾರಿಗೆ 5 ವರ್ಷ ಜೈಲು ಶಿಕ್ಷೆ
ಮಂಗಳೂರು: ದಾವೂದ್ ಬಂಟ ರಶೀದ್ ಮಲಬಾರಿಗೆ ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 5 ವರ್ಷಗಳ ಕಠಿಣ ಸಜೆ ವಿಧಿಸಿ ಜಿಲ್ಲಾ 2ನೇ ಹೆಚ್ಚುವರಿ ಸತ್ರ ನ್ಯಾಯಾಲಯ ತೀರ್ಪು ನೀಡಿದೆ. ವರುಣ್ ಗಾಂಧಿ ಮತ್ತು ಪ್ರಮೋದ್ ಮುತಾಲಿಕ್ ಕೊಲೆಗೆ ಸಂಚು ರೂಪಿಸಿದ ಆರೋಪದಡಿ 2009ರಲ್ಲಿ ಬಂಧಿತನಾಗಿದ್ದ ಮಲಬಾರಿ ಈಗಾಗಲೇ ಜೈಲ್ನಲ್ಲಿ 4 ವರ್ಷ 5 ತಿಂಗಳು ಕಳೆದಿರುವುದರಿಂದ ಇನ್ನು 7 ತಿಂಗಳು ಜೈಲ್ನಲ್ಲಿರಬೇಕಾಗಿದೆ. ಕೋರ್ಟ್ 11.5 ಸಾವಿರ ದಂಡ ವಿಧಿಸಿದ್ದು, ಇದನ್ನು ತೆರಲು ತಪ್ಪಿದಲ್ಲಿ ಮತ್ತೊಂದು ವರ್ಷ ಹೆಚ್ಚುವರಿ ಶಿಕ್ಷೆ ಅನುಭವಿಸುವಂತೆ ಆದೇಶದಲ್ಲಿ ಹೇಳಿದೆ.
ಕೊಲೆಗೆ ಸಂಚು ರೂಪಿಸಿದ ಆರೋಪ ಸಾಕ್ಷಿಗಳ ಕೊರತೆಯಿಂದ ಸಾಬೀತಾಗಿಲ್ಲ. ಪಿಸ್ತೂಲ್ ಹೊಂದಿದ್ದರಿಂದ ಅಕ್ರಮ ಶಸ್ತ್ರಾಸ್ತ್ರ ಆರೋಪದಡಿ ಶಿಕ್ಷೆಯಾಗಿದೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಶಿವಪ್ರಸಾದ್ ಆಳ್ವ ಕೆ. ತಿಳಿಸಿದ್ದಾರೆ.
ಅವಳಿ ಕೊಲೆ ಖುಲಾಸೆ: ಚೋಟಾರಾಜನ್ನ ಇಬ್ಬರು ಸಹಚರರನ್ನು 1998ರಲ್ಲಿ ಬೈಕಂಪಾಡಿಯಲ್ಲಿ ಕೊಲೆಗೈದ ಪ್ರಕರಣ ಸಾಕ್ಷಿಗಳ ಕೊರತೆಯಿಂದ ಕೋರ್ಟ್ ಖುಲಾಸೆಗೊಳಿಸಿದೆ. ಇನ್ನು ಮಲಬಾರಿ ಮೇಲೆ ಜಿಲ್ಲಾ ನ್ಯಾಯಾಲಯದಲ್ಲಿಯೇ 2 ಪ್ರಕರಣ ವಿಚಾರಣೆಗೆ ಬಾಕಿ ಇದೆ.
ಇನ್ಸ್ಪೆಕ್ಟರ್ಗೆ ಬೆದರಿಕೆ: ಪಾತಕಿ ರಶೀದ್ ಮಲಬಾರಿಯನ್ನು ಬಂಧಿಸಿದ ಅಂದಿನ ಇನ್ಸ್ಪೆಕ್ಟರ್ ಡಾ.ಎಚ್.ಎನ್.ವೆಂಕಟೇಶ್ ಪ್ರಸನ್ನ ವಿರುದ್ಧ ರಶೀದ್ ಮಲಬಾರಿ ಪ್ರತೀಕಾರದ ಮಾತುಗಳನ್ನಾಡಿದ್ದಾನೆ.
ಶಿಕ್ಷೆಯಾದ ಬಳಿಕ ವಾಪಸ್ ಜೈಲ್ಗೆ ಹೋಗುತ್ತಿದ್ದ ವೇಳೆ ಮಾಧ್ಯಮದ ಮುಂದೆ ಗುರುಗುಟ್ಟಿದ ಮಲಬಾರಿ 'ಪ್ರಸನ್ನಗೆ ಹೇಳಿ ನಾನು ಹೊರಗೆ ಬರುತ್ತೇನೆ. ಅವನನ್ನು ಪರ್ಸನಲ್ ಆಗಿ ನೋಡಿಕೊಳ್ಳುತ್ತೇನೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

