ಪ್ರಧಾನ ಸುದ್ದಿ

'ತಾಲಿಬಾನಿ'ಗಳ ಬಂಧನಕ್ಕೆ ಐಜಿಪಿ ಆದೇಶ

Published On :

ಮಂಗಳೂರು: ವಿಟ್ಲದಲ್ಲಿ ಪರ್ತಕರ್ತನ ವಿರುದ್ಧ ತಾಲಿಬಾನಿಗಳಂತೆ ತೀವ್ರ ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸುವ ನಿಟ್ಟಿನಲ್ಲಿ ಪಶ್ಚಿಮ ವಲಯ ಐಜಿಪಿ ಪ್ರತಾಪ್ ರೆಡ್ಡಿ ಗುರುವಾರ ರಾತ್ರಿ ತುರ್ತು ಸಭೆ ನಡೆಸಿದರು.
'ಕನ್ನಡಪ್ರಭ'ದಲ್ಲಿ ಗುರುವಾರ ಪ್ರಕಟವಾದ 'ಮಂಗಳೂರಲ್ಲಿ ಹೆಚ್ಚುತ್ತಿದೆ ತಾಲಿಬಾನಿ ಸಂತತಿ' ಲೇಖನ ಹಿನ್ನೆಲೆಯಲ್ಲಿ ತುರ್ತು ಸಭೆ ನಡೆಸಿದರು. ಸಂಜೆ 6 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ನಡೆದ ಸಭೆಯಲ್ಲಿ ಎಸ್‌ಪಿ ಶಂತನು ಸಿನ್ಹ, ಸ್ಪೆಷಲ್ ಬ್ರಾಂಚ್ ಇನ್ಸ್‌ಪೆಕ್ಟರ್ ಸವಿತ್ರತೇಜ ಇದ್ದರು.  ಪತ್ರಿಕೆಯಲ್ಲಿ ಆರೋಪಿಗಳ ಫೋಟೋ ಬಂದಿದೆ, ಆರೋಪಿಗಳನ್ನು ಇನ್ನೂ ಏಕೆ ಬಂಧಿಸಿಲ್ಲ ಎಂದು ಐಜಿಪಿ ವಿವರಣೆ ಕೇಳಿದರು. ಆರೋಪಿಗಳ ಶೋಧ ಕಾರ್ಯ ನಡೆಯುತ್ತಿದೆ, ವಿಡಿಯೋ ಕೂಡಾ ಲಭ್ಯವಾಗಿದೆ, ಬಂಧನಕ್ಕೆ ಶೀಘ್ರ ಕ್ರಮ ಕೈಗೊಳ್ಳುವುದಾಗಿ ಎಸ್ಪಿ ವಿವರಣೆ ನೀಡಿದರು.  'ಕನ್ನಡಪ್ರಭ' ಜತೆ ಮಾತನಾಡಿದ ಐಜಿಪಿ ಪ್ರತಾಪ್ ರೆಡ್ಡಿ, 'ಕನ್ನಡಪ್ರಭ'ದಲ್ಲಿ ಪ್ರಕಟವಾದ ಲೇಖನ ಓದಿದೆ. ಅದರಂತೆ ಎಸ್‌ಪಿ ಜತೆ ಸಭೆ ನಡೆಸಿದ್ದೇನೆ. ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಎಸ್‌ಪಿಗೆ ಸೂಚಿಸಿದ್ದೇನೆ, ನೈತಿಕ ಪೊಲೀಸ್‌ಗಿರಿ ಮಾಡಿದವರನ್ನು ನಾವು ನೋಡಿಕೊಳ್ಳುತ್ತೇವೆ. ಪತ್ರಕರ್ತ ವಿರುದ್ಧವೂ ಹಳೆ ಕೇಸ್‌ಗಳು ಇವೆ. ಮಾಹಿತಿ ಕಲೆ ಹಾಕುತ್ತಿದ್ದೇವೆ. ನೈತಿಕ ಪೊಲೀಸ್‌ಗಿರಿಗೆ ಎಂದೂ ಅವಕಾಶ ನೀಡುವುದಿಲ್ಲ ಎಂದರು.

3 ಪ್ರಕರಣ ಖುಲಾಸೆ: ಪತ್ರಕರ್ತ ವಿ.ಟಿ.ಪ್ರಸಾದ್ ವಿರುದ್ಧ ಜುಲೇಕ ಎಂಬ ಯುವತಿ ಆತ್ಮಹತ್ಯೆಗೆ ಪ್ರೇರೇಪಣೆ ನೀಡಿದ ಆರೋಪದಡಿ ದಾಖಲಾಗಿದ್ದ ಪ್ರಕರಣದಿಂದ ಪತ್ರಕರ್ತ ಪ್ರಸಾದ್ ಖುಲಾಸೆಯಾಗಿದ್ದಾರೆ. ಯುವತಿಯ ತಂದೆ ಪೊಲೀಸರಿಗೆ ದೂರು ನೀಡಿದ್ದರು. ಅಬಕಾರಿ ಕಾಯ್ದೆ ಪ್ರಕರಣ ಮತ್ತು ಚೆಕ್ ಬೌನ್ಸ್ ಪ್ರಕರಣ ಈ ಹಿಂದೆ ದಾಖಲಾಗಿತ್ತು ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.