ಪ್ರಧಾನ ಸುದ್ದಿ

ಪ್ಯಾಂಟ್ ಬಿಚ್ಚಿಸಿ ತನಿಖೆ ಮಾಡಿದರು!

ಪ್ಯಾಂಟ್ ಬಿಚ್ಚಿಸಿ ತನಿಖೆ ಮಾಡಿದರು!
Published On :

ಶಿವಮೊಗ್ಗ: ಸಾರಿಗೆ ಸಂಸ್ಥೆ ಮೇಲಧಿಕಾರಿಗಳು ಭದ್ರಾವತಿ ಡಿಪೋದಲ್ಲಿ ನಿರ್ವಾಹಕರೊಬ್ಬರನ್ನು ತನಿಖೆ ಹೆಸರಿನಲ್ಲಿ ಬಹಿರಂಗವಾಗಿ ಹತ್ತಾರು ಸಿಬ್ಬಂದಿ ಎದುರಿನಲ್ಲೇ ಪ್ಯಾಂಟ್ ಬಿಚ್ಚಿಸಿ, ಒಳ ಉಡುಪು ತಡಕಾಡಿ ಪರಿಶೀಲಿಸಿದ ಘಟನೆ ನಡೆದಿದೆ.
ಈ ವಿಚಾರ ವಿಭಾಗೀಯ ಅಧಿಕಾರಿಗಳಿಂದ ಹಿಡಿದು ವ್ಯವಸ್ಥಾಪಕ ನಿರ್ದೇಶಕರವರೆಗೆ ತಿಳಿದಿದ್ದರೂ ಯಾವ ಕ್ರಮವನ್ನೂ ತೆಗೆದುಕೊಂಡಿಲ್ಲ. ನೊಂದ ನೌಕರನ ಗೋಳು ಅವನ ಮಾತುಗಳಲ್ಲೇ ಕೇಳಿ. ನಾನು ದಿನಕರ್(ಹೆಸರು ಬದಲಿಸಲಾಗಿದೆ). ಭದ್ರಾವತಿ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಭದ್ರಾವತಿ- ಮೈಸೂರು ಬಸ್‌ನಲ್ಲಿ ನಿರ್ವಾಹಕನಾಗಿದ್ದೆ. 2013, ಸೆ. 2ರಂದು ಬೆಳಗಿನ ಜಾವ 2 ಗಂಟೆಗೆ ಮೈಸೂರಿನಿಂದ ಭದ್ರಾವತಿಗೆ ಆಗಮಿಸಿ ಡ್ಯೂಟಿ ಮುಗಿಸಿದೆ. ರಾತ್ರಿ ವೇಳೆ ಟಿಕೆಟ್ ಬಾಬ್ತಿನ ಹಣವನ್ನು ಕಟ್ಟಿಸಿಕೊಳ್ಳಲು ಕೌಂಟರ್ ಮುಚ್ಚಿದ್ದರಿಂದ ವಿಶ್ರಾಂತಿಗೆ ತೆರಳಿದೆ. ಬೆಳಗ್ಗೆ 8 ಗಂಟೆ ಸುಮಾರಿಗೆ ಕ್ಯಾಶ್ ಕಟ್ಟಲೆಂದು ಕೌಂಟರ್‌ಗೆ ತೆರಳುವ ವೇಳೆ ಸಂಚಾರ ಶಾಖೆಯಲ್ಲಿ ಎಲ್ಲಾ ಸಿಬ್ಬಂದಿ ಸಮ್ಮುಖದಲ್ಲೇ ಅಧಿಕಾರಿಗಳು ವಿಚಾರಣೆಗೆ ನಿಂತರು. ಏಕವಚನದಲ್ಲಿ ನಿಂದಿಸಿದರು, ಸುಮ್ಮನಿದ್ದೆ. ನಂತರ ಪ್ಯಾಂಟ್ ಬಿಚ್ಚಿಸಿ ಒಳಉಡುಪಿನ ಜೇಬಿನಲ್ಲಿ ಕೈ ಹಾಕಿ ಪರಿಶೀಲಿಸಿ ಅವಮಾನ ಮಾಡಿದರು. ಹತ್ತಾರು ಸಿಬ್ಬಂದಿ ಸಮ್ಮುಖದಲ್ಲಿ ನನ್ನನ್ನು ಕಳ್ಳನ ರೀತಿ ಕಂಡರು. ಪರಿಸ್ಥಿತಿ ಹೇಗಿರಬೇಡ ನೀವೇ ಊಹಿಸಿ.
ಟಿಕೆಟ್ ಬಾಬ್ತಿನ ಹೊರತಾಗಿ ಗೊಬ್ಬರ ಖರೀದಿಗೆಂದು ತಂದಿದ್ದ ಹಣದ ಬಗ್ಗೆ ಸಂಶಯ ವ್ಯಕ್ತಪಡಿಸಿದರು. ನಾನು ಬಿಎ ಪದವೀಧರ, ಕರ್ನಾಟಕ ಸಂಗೀತ ಎಂಎ ಆಗಿದೆ. ದಾವಣಗೆರೆ ವಿಭಾಗದ ಇಲಾಖೆಯ ವಾಯ್ಸ್ ರೆಕಾರ್ಡಿಂಗ್‌ಗಳನ್ನು ಉಚಿತವಾಗಿ ಮಾಡಿಕೊಟ್ಟವನು. ಸಂಸ್ಥೆಯನ್ನು ಪ್ರೀತಿಸುವ ನಾನು ಇಲಾಖೆಯ ದುಡ್ಡು ಕದ್ದು ಜೀವನ ಮಾಡಲು ಸಾಧ್ಯವೇ? ಈ ಘಟನೆಯಿಂದ ಮನಸ್ಸಿಗೆ ಭಾರೀ ಸಂಕಟವಾಯಿತು. ಸಮಸ್ಯೆ ಇಷ್ಟೇ ಆಗಲಿಲ್ಲ. ನನ್ನ ಪತ್ನಿ ಮೈಸೂರಿನಲ್ಲಿ ರೇಲ್ವೆ ಪೊಲೀಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾಳೆ. ಆಕೆಗೊಮ್ಮೆ ಗರ್ಭಪಾತವಾಯಿತು. ಈ ಹಿನ್ನೆಲೆಯಲ್ಲಿ ತುರ್ತಾಗಿ ಆಕೆಗೆ ಚಿಕಿತ್ಸೆ ಕೊಡಿಸಬೇಕಾಗಿ ಬಂತು. ರಜೆ ಕೇಳಿದರೆ, ಸಾಧ್ಯವೇ ಇಲ್ಲ ಎಂದರು. ಇದೀಗ ನನ್ನ ಮೇಲೆ ಹಠ ಸಾಧಿಸಿದ ಅಧಿಕಾರಿ, ಮೈಸೂರು ರೂಟ್‌ನಿಂದ ತೆಗೆದು ಲೋಕಲ್ ರೂಟ್‌ಗೆ ಹಾಕಿದ್ದಾರೆ ಎಂದಾಗ ಅವರ ಕಣ್ಣಂಚಲ್ಲಿ ನೀರು ಜಿಣುಗುತ್ತಿತ್ತು! ಈ ಸಂದರ್ಭದಲ್ಲಿ ಘಟಕ ವ್ಯವಸ್ಥಾಪಕ ಸೇರಿದಂತೆ ಸಂಚಾರ ನಿಯಂತ್ರಕ ಪ್ರಕಾಶ್, ರಾಮಚಂದ್ರಪ್ಪ, ಸಂಚಾರಿ ನಿರೀಕ್ಷಕ ಸಿದ್ದೇಶ ಎಲ್ಲರೂ ಇದ್ದರು. ಆದರೆ, ಯಾರೂ ದನಿ ಎತಲಿಲ್ಲ ಎಂಬುದು ವಿಪರ್ಯಾಸ.


-ಶ್ರೀಕಾಂತ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.