ಪ್ರಧಾನ ಸುದ್ದಿ

ಕಣ್ಮನ ಸೆಳೆದ ಫಲಪುಷ್ಪ ಪ್ರದರ್ಶನ

Published On :

ವಿದ್ಯಾಗಿರಿ, ಮೂಡುಬಿದಿರೆ: ಎಣಿಸಿದಷ್ಟೂ ಮುಗಿಯದ ಬಣ್ಣಗಳು. ಕಲ್ಲಂಗಡಿಯಲ್ಲಿ ಮೂಡಿದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಮುಖಗಳು, ಕುಂಡಗಳಲ್ಲಿ ಅರಳಿ ನಿಂತ ಹೂಗಳು, ಹಣ್ಣು, ಗಡ್ಡೆ-ಗೆಣಸು, ಅಪರೂಪದ ಸಸ್ಯಗಳ ಸಂಗಮ...
ಇದು ವಿಶ್ವನುಡಿಸಿರಿ ಅಂಗವಾಗಿ ವಿದ್ಯಾಗಿರಿಯಲ್ಲಿ ಆಯೋಜಿತವಾಗಿರುವ ಫಲಪುಷ್ಪ ಪ್ರದರ್ಶನದ ಒಂದು ನೋಟ. ನೀವು ಹಿಂದೆಂದೂ ಕೇಳಿರದ, ನೋಡಿರದಂಥ ಸನ್ಯಾಸಿ ಬಳ್ಳಿಯ ಹಣ್ಣು, ಅನೇಕಾನೇಕ ಔಷಧೀಯ ಗಿಡಗಳು, ಅಳಿವಿನಂಚಿನಲ್ಲಿರುವ ಗಿಡಮೂಲಿಕೆಗಳು ಇವೆಲ್ಲವೂ ನಿಮಗೆ ಒಂದೇ ಜಾಗದಲ್ಲಿ ನೋಡುವ ಅವಕಾಶ ಇಲ್ಲಿದೆ. ಫಲಪುಷ್ಪ ಪ್ರದರ್ಶನಕ್ಕೆ ಹೋಗುತ್ತಿದ್ದಂತೆಯೇ ಶಿವಮೊಗ್ಗದ ಕಲಾವಿದ ಹರೀಶ್, ಕಲ್ಲಂಗಡಿ ಹಣ್ಣಿನಲ್ಲಿ ಕೆತ್ತಿರುವ ಜ್ಞಾನಪೀಠ ಪುರಸ್ಕೃತರು, ಮೋಹನ್ ಆಳ್ವ, ವೀರೇಂದ್ರ ಹೆಗ್ಗಡೆ ಅವರ ಚಿತ್ರಗಳು, ಜತೆಗೆ ಬಿದಿರು ಗಣಪತಿಯ ಕಲಾಕೃತಿಗಳನ್ನು ನಿಮ್ಮನ್ನು ಆಕರ್ಷಿಸುತ್ತವೆ. ಈ ಬಾರಿಯ ಫಲಪುಷ್ಪ ಪ್ರದರ್ಶನಕ್ಕೆ ಬೆಂಗಳೂರಿನ ಇಂಡೋ ಅಮೆರಿಕನ್ ಹೈಪ್ಸ್‌ನಿಂದ ಸುಮಾರು 25000 ಹೂಕುಂಡಗಳನ್ನು ತರಿಸಲಾಗಿದೆ. ಗುಲಾಬಿ, ಸೇವಂತಿ, ಚೆಂಡು ಹೂ ಸೇರಿದಂತೆ 20 ರಿಂದ 25 ರೀತಿಯ ಹೂ ಹಾಗೂ ಅಲಂಕಾರಿಕ ಸಸ್ಯಗಳನ್ನು ತರಿಸಲಾಗಿದೆ. ಹೂಗಳ ಜತೆಗೆ ಹಣ್ಣುಗಳಿವೆ. ಹಣ್ಣಿನ ಅನೇಕ ತಳಿಗಳನ್ನು ರಾಜ್ಯದ ಬೇರೆ ಬೇರೆ ಭಾಗಗಳಿಂದ ತರಿಸಲಾಗಿದೆ. ರಸಬಾಳೆ, ಭಾಸ್ಕರ ಬಾಳೆ, ಸಕ್ಕರೆಬಾಳೆ, ಏಲಕ್ಕಿಬಾಳೆ, ತೋತಾಪುರಿ, ಮಲ್ಗೋವಾ, ರಸಪುರಿ, ಹಲಸು, ಅನಾನಸ್ ಹೀಗೆ ಹೇಳಿದರೂ ಮುಗಿಯದಷ್ಟು ವಿಧಗಳು.
ಅತ್ಯಂತ ವಿರಳವಾದ ಸನ್ಯಾಸಿಬಳ್ಳಿ ಹಣ್ಣು, ಸರ್ಪಗಂಧ, ಶಾಂತಾವರಿ, ಸೀತಾ ಅಶೋಕ ಸೇರಿದಂತೆ ಒಟ್ಟು 600 ಬಗೆಯ ಔಷಧೀಯ ಸಸ್ಯಗಳು ಪ್ರದರ್ಶನದಲ್ಲಿವೆ. ಇವೆಲ್ಲವುಗಳನ್ನು ಶೋಭಾವನ ಹರ್ಬಲ್ ಗಾರ್ಡನ್‌ನಿಂದ ತರಿಸಲಾಗಿದೆ.
- ಶಾಲಿನಿ ಬಿ.ಭಂಡಾರಿ, ದೀಕ್ಷಾ ಹೆಗಡೆ, ಪತ್ರಿಕೋದ್ಯಮ ವಿದ್ಯಾರ್ಥಿಗಳು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.