ಪ್ರಧಾನ ಸುದ್ದಿ

ಅಮೆರಿಕಕ್ಕೆ ತಟ್ಟೀತೆ ಎಚ್ಚರಿಕೆ?

Published On :

ವಾಷಿಂಗ್ಟನ್: ಫಾಸ್ಟ್‌ಫುಡ್ ತಿನ್ನಬೇಡಿ, ಇದರಲ್ಲಿ ಅನಾರೋಗ್ಯಕರ ಅಂಶಗಳೇ ಹೆಚ್ಚಿವೆ ಎಂದು ತನ್ನ ನೌಕರರಿಗೆ ಎಚ್ಚರಿಕೆ ನೀಡಿರುವ ಮೆಕ್‌ಡೊನಾಲ್ಡ್ಸ್‌ನ ಮಾತನ್ನು ಕಿವಿಗೆ ಹಾಕಿಕೊಳ್ಳುವ ಸ್ಥಿತಿಯಲ್ಲಿ ಅಮೆರಿಕ ಇದೆಯೇ?
ಮೆಕ್‌ಡೊನಾಲ್ಡ್ಸ್ ತಿನಿಸುಗಳನ್ನು ತಿನ್ನದೇ ಬದುಕುವುದು ಅಮೆರಿಕನ್ನರಿಗೆ ತೀರಾ ಕಷ್ಟಸಾಧ್ಯ. ಏಕೆಂದರೆ ಅವರ ಬದುಕು ಮೆಕ್‌ಡೊನಾಲ್ಡ್ಸ್‌ನೊಂದಿಗೆ ಹಾಸುಹೊಕ್ಕಾಗಿದೆ. ಇದು ಗೊತ್ತಾಗುವುದು ಎರಿಕ್ ಶ್ಲಾಸರ್ ಅವರ ಫಾಸ್ಟ್ ಫುಡ್ ನೇಷನ್ ಪುಸ್ತಕದಿಂದ. ಕಳೆದ 25 ವರ್ಷಗಳಲ್ಲಿ ಫಾಸ್ಟ್‌ಫುಡ್‌ನೊಂದಿಗೆ ಅಮೆರಿಕ ಬೆರೆತಿರುವ ಬಗ್ಗೆ ಶ್ಲಾಸರ್ ತುಂಬಾ ಗಂಭೀರವಾಗಿಯೇ ಬರೆದಿದ್ದಾರೆ.  
ಅಮೆರಿಕದಲ್ಲಿ ಫಾಸ್ಟ್‌ಫುಡ್ ಬೆಳೆಯಲು ಕಾರಣ ಜಾಗತೀಕರಣ ಎಂಬುದು ಶ್ಲಾಸರ್ ಅವರ ಅಭಿಪ್ರಾಯ. ಫಾಸ್ಟ್‌ಫುಡ್ ತಿಂದರೆ ಯಾವ ರೀತಿಯ ಅಡ್ಡ ಪರಿಣಾಮಗಳಾಗುತ್ತವೆ ಎಂಬುದರ ಜೊತೆಗೆ, ಫಾಸ್ಟ್‌ಫುಡ್, ಅದರಲ್ಲೂ ಮೆಕ್‌ಡೊನಾಲ್ಡ್ ಹೇಗೆ ಅಮೆರಿಕದ ಜನರ ಜೊತೆ ಹಾಸುಹೊಕ್ಕಾಗಿದೆ ಎಂಬ ಬಗ್ಗೆ ಬರೆಯುತ್ತಾ ಹೋಗುತ್ತಾರೆ.

ಮಹಿಳೆಯರೇ ಕಾರಣ...!

ಇದನ್ನು ಸ್ವತಃ ಶ್ಲಾಸರ್ ಅವರೇ ಹೇಳುತ್ತಾರೆ. 1975ರ ನಂತರ ಕೈಗಾರಿಕೀಕರಣ ಬೆಳೆಯುತ್ತಾ ಹೋದಂತೆ, ಅಲ್ಲಿವರೆಗೆ ಹೌಸ್‌ವೈಫ್ ಆಗಿದ್ದ ಮಹಿಳೆಯರು ಕೆಲಸಕ್ಕೆ ಹೋಗಲು ಶುರು ಮಾಡಿದರಂತೆ. ನಂತರದ ದಿನಗಳಲ್ಲಿ ಅವರ ಪ್ರಮಾಣ ಇನ್ನಷ್ಟು ಹೆಚ್ಚಿತು. ಹೀಗಾಗಿ ಮನೆಯಲ್ಲಿ ಅಡುಗೆ, ಸ್ವಚ್ಛತೆ ಮತ್ತು ಮಕ್ಕಳ ನಿಗಾ ವಹಿಸುವುದು ಕಡಿಮೆಯಾಯಿತು.
ಇದರಿಂದಾಗಿ ಮನೆಯಲ್ಲಿ ಅಡುಗೆ ಮಾಡುವುದು ಕಡಿಮೆಯಾಯಿತು. ಈ ಕಾರಣದಿಂದಲೇ ಆಗಷ್ಟೇ ಹುಟ್ಟಿಕೊಂಡಿದ್ದ ಮೆಕ್‌ಡೊನಾಲ್ಡ್ಸ್ ಅವರ ಊಟದ ಆಶ್ರಯ ತಾಣವಾಯಿತು. ಜೊತೆಗೆ ಅಮೆರಿಕನ್ನರ ವೇತನದ ಅರ್ಧದಷ್ಟು ಹಣ ಮೆಕ್‌ಡೊನಾಲ್ಡ್ಸ್‌ಗೆ ಹಾಕುವಂಥ ಪರಿಸ್ಥಿತಿಯೂ ಉದ್ಭವವಾಯಿತು.
ಇನ್ನು ಪುಸ್ತಕದ ಎರಡನೇ ಭಾಗದಲ್ಲಿ ಮೆಕ್‌ಡೊನಾಲ್ಡ್ಸ್ ಉತ್ಪಾದಿಸುವ ಫಾಸ್ಟ್‌ಫುಡ್‌ನಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಚರ್ಚಿಸಲಾಗಿದೆ. ಆಹಾರ ಪದಾರ್ಥಗಳನ್ನು ಹೇಗೆ ಉತ್ಪಾದಿಸುತ್ತಾರೆ, ಹೇಗೆ ಸರ್ವ್ ಮಾಡುತ್ತಾರೆ ಎಂಬ ಬಗ್ಗೆ ವಿವರಣೆ ಇದೆ. ಅಲ್ಲದೆ ಕೋಳಿಗಳು ಮತ್ತು ಹಸುಗಳನ್ನು ಹೇಗೆ ಹತ್ಯೆ ಮಾಡುತ್ತಾರೆ, ಇದರ ಮಾಂಸವನ್ನು ಹೇಗೆ ಪ್ಯಾಕ್ ಮಾಡುತ್ತಾರೆ ಎಂಬ ಬಗ್ಗೆಯೂ ಎರಡನೇ ಭಾಗದಲ್ಲಿದೆ. ಇದರಿಂದ ಆಗುವ ಪರಿಣಾಮಗಳನ್ನೂ ನೀಡಲಾಗಿದೆ. ಇದನ್ನು ತಿಂದರೆ ದೇಹಕ್ಕೆ ಒಳ್ಳೆಯದಲ್ಲ ಎಂಬ ಬಗ್ಗೆಯೂ ಶ್ಲಾಸರ್ ಹೇಳುತ್ತಾರೆ. ಇದರ ಜೊತೆಗೆ ಮೆಕ್‌ಡೊನಾಲ್ಡ್ಸ್ ತನ್ನ ನೌಕರರನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂಬ ಬಗ್ಗೆಯೂ ಈ ಪುಸ್ತಕದಲ್ಲಿ ಬೆಳಕು ಚೆಲ್ಲಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.