ಪ್ರಧಾನ ಸುದ್ದಿ

ಸ್ವ ಉದ್ಯೋಗಕ್ಕಾಗಿ ಯಾತ್ರೆ

Published On :

ಕ.ಪ್ರ.ವಾರ್ತೆ, ಧಾರವಾಡ, ಡಿ.26-
ಸರ್ಕಾರಿ ನೌಕರಿಯೇ ಬೇಕು. ದೊಡ್ಡ ಖಾಸಗಿ ಕಂಪನಿಯಲ್ಲೇ ಕೆಲಸ ಮಾಡಬೇಕು ಎಂದೆಲ್ಲ ಕನಸು ಕಟ್ಟಿಕೊಂಡು ಉನ್ನತ ಶಿಕ್ಷಣ ಮುಗಿಸಿದ ಅದೆಷ್ಟೋ ವಿದ್ಯಾರ್ಥಿಗಳಿಂದು ನಿರಾಸೆಯಲ್ಲಿ ಬದುಕುತ್ತಿದ್ದಾರೆ. ಹೀಗಾಗಿ, ಇನ್ನೊಬ್ಬರ ಕೈ ಆಳಾಗಿ ದುಡಿಯವ ನೌಕರಿಗಿಂತ ಸ್ವಉದ್ಯೋಗವೇ ಮೇಲು. ಈ ಮೂಲಕ ನಿರುದ್ಯೋಗ ಓಡಿಸಿ ಸ್ವಉದ್ಯೋಗ ಹಿಡಿದು ದೇಶದ ಅಭಿವೃದ್ಧಿಗೂ ನಾವು ಬದ್ಧರಾಗೋಣ.
ಗುರುವಾರ ಧಾರವಾಡ ತಾಲೂಕಿನ ಕುಗ್ರಾಮ ಕಲಕೇರಿಯ ಸಂಗೀತ ಶಾಲೆಗೆ ಭೇಟಿ ನೀಡಿರುವ ಸ್ವಂತ ಉದ್ಯೋಗಿಗಳಾಗಿ ಎಂಬ ರಾಷ್ಟ್ರೀಯ ಜಾಗೃತಿ ಯಾತ್ರೆಯ ಪ್ರಮುಖ ಘೋಷಣೆ ಇದು. ನಿರುದ್ಯೋಗಿಗಳು ಸೇರಿದಂತೆ ದೇಶದ ಪ್ರತಿಷ್ಠಿತ ಕಂಪನಿಗಳ ಉನ್ನತ ಹುದ್ದೆಗಳಲ್ಲಿರುವ ಸಾಫ್ಟ್‌ವೇರ್ ಎಂಜಿನಿಯರ್ಸ್, ಐಟಿ-ಬಿಟಿ ಉದ್ಯೋಗಿಗಳು ನೌಕರಿಯಿಂದ ಬೇಸತ್ತು ಸ್ವಂತ ಉದ್ಯೋಗ ಮಾಡಲೆಂದು ಈ ಜಾಗೃತಿ ಯಾತ್ರೆಗೆ ಮುಂದಾಗಿದ್ದಾರೆ. ಇಲ್ಲಿನ ಕಲಕೇರಿ ಸಂಗೀತ ಶಾಲೆಯಲ್ಲಿ ಯಾವ ರೀತಿ ಉದ್ಯೋಗಗಳನ್ನು ಸೃಷ್ಟಿಸಿದ್ದಾರೆ ಎಂಬುದನ್ನು ಬ್ರೆಜಿಲ್, ಚೀನಾ, ಕೆನಡಾ, ಅಫಘಾನಿಸ್ತಾನ ಹಾಗೂ ಇತರ ದೇಶಗಳ 40 ಜನ ಹಾಗೂ ದೇಶದ 400 ಜನ ಮಾಹಿತಿ ಪಡೆದುಕೊಂಡರು.

8 ಸಾವಿರ ಕಿ.ಮೀ ಯಾತ್ರೆ: ಈ ಯಾತ್ರೆ ಕುರಿತು 'ಕನ್ನಡಪ್ರಭ'ದೊಂದಿಗೆ ಮಾತನಾಡಿದ ಜಾಗೃತಿ ಯಾತ್ರಾ ಮಂಡಳಿ ಸದಸ್ಯರಾದ ರೇವತಿ ಪ್ರಭು, ಡಿ.24ರಿಂದ ಪ್ರತ್ಯೇಕ ರೈಲಿನ ಮೂಲಕ ಯಾತ್ರೆ ಆರಂಭವಾಗಿದೆ. ಜ.8ರವರೆಗೆ ದೇಶದ ಮುಂಬೈ, ಅಹಮದಾಬಾದ್, ಧಾರವಾಡ, ಬೆಂಗಳೂರು, ಮಧುರೈ, ಚೆನ್ನೈ, ವಿಶಾಖಪಟ್ಟಣಂ, ಭುವನೇಶ್ವರ, ಪಾಟ್ನಾ ಸೇರಿದಂತೆ 12 ಸ್ಥಳಗಳಿಗೆ ಒಟ್ಟು 8 ಸಾವಿರ ಕಿ.ಮೀ. ಯಾತ್ರೆ ನಡೆಯಲಿದೆ. ಇದು ಸಂಚಾರಿ ಯಾತ್ರೆ. ನಾವು ಮುಂಚೆಯೇ ಗುರುತು ಪಡಿಸಿರುವ ಸ್ಥಳಗಳಲ್ಲಿ ಒಂದು ದಿನ ವಾಸ್ತವ್ಯ ಹೂಡಿ ಅಲ್ಲಿನ ಜನಜೀವನ ಹಾಗೂ ಅವರು ಕೈಗೊಂಡಿರುವ ಸ್ವಉದ್ಯೋಗದ ಬಗ್ಗೆ ತಂಡದ ಯಾತ್ರಿಗಳಿಗೆ ತಿಳಿಸಿಕೊಡಲಾಗುವುದು. ಈ ಕುರಿತು ವೆಬ್‌ಸೈಟ್ ಢಿಢಿಢಿ.ಞಛ್ಜ್ಠ್ಝಡ್ಝಿಣಛಡ್ಠಿಛ.್ಛ್ಟಟ ಸಹ ರಚಿಸಲಾಗಿದೆ ಎಂದರು.
ಕಲಕೇರಿ ಗ್ರಾಮದಲ್ಲಿ ತೆರೆಯಲಾಗಿರುವ ಈ ಸಂಗೀತ ಶಾಲೆ ಹತ್ತಾರು ಜನರಿಗೆ ಉದ್ಯೋಗ ಹಾಗೂ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಒದಗಿಸಿದೆ. ಆದ್ದರಿಂದ ಈ ಯಾತ್ರೆಯಲ್ಲಿ ಪಾಲ್ಗೊಂಡ ಯುವಕ, ಯುವತಿಯರಿಗೆ ಇದೇ ಮಾದರಿಯ ಉದ್ಯೋಗಗಳನ್ನು ಕಂಡುಕೊಳ್ಳಬೇಕೆಂಬ ಉದ್ದೇಶದಿಂದ ಇಲ್ಲಿಗೆ ಕರೆದುಕೊಂಡು ಬರಲಾಗಿದೆ.

ಮಹಿಳೆಯರಿಗೆ ಆದ್ಯತೆ: ಜಾಗೃತಿ ಯಾತ್ರೆಯಲ್ಲಿ ಶೇ.40ರಷ್ಟು ಮಹಿಳೆಯರಿಗೆ ಆದ್ಯತೆ ನೀಡಲಾಗಿದೆ. 2008ರಿಂದ ಪ್ರಥಮ ಬಾರಿಗೆ ಈ ಯಾತ್ರೆ ಪ್ರಾರಂಭವಾಯಿತು. ಅಂದಿನಿಂದ ಇಲ್ಲಿವರೆಗೆ 6ನೇ ಯಾತ್ರೆ ಇದು. ಯಾತ್ರೆಯ ಫಲವಾಗಿ ಕಲಕೇರಿ ಸಂಗೀತ ಶಾಲೆ ನೋಡಿ ಸ್ವಂತ ಉದ್ಯೋಗಿಯಾಗಿ ನಾನೂ ನಾಲ್ಕಾರು ಜನರಿಗೆ ಉದ್ಯೋಗ ನೀಡುವ ಉದ್ಯೋಗಪತಿಯಾಗುವ ಆಸೆ ಚಿಗರೊಡೆದಿದೆ. ಮಂಗಳೂರಿನಲ್ಲಿಯೇ ಇದ್ದಿದ್ದರೆ ಯಾವುದಾದರೊಂದು ಸರ್ಕಾರಿ ಅಥವಾ ಖಾಸಗಿ ನೌಕರಿ ಮಾಡುತ್ತ ಮಂಗಳೂರಿಗಷ್ಟೇ ಸೀಮಿತನಾಗುತ್ತಿದ್ದೆ. ಇದೀಗ ಇಡಿ ದೇಶವನ್ನೇ ಸುತ್ತುತ್ತಿದ್ದೇನೆ. ನನಗೆ ಬೇಕಾದ ಕೆಲಸವನ್ನು ಆಯ್ಕೆ ಮಾಡಿಕೊಂಡು ಈ ಮೂಲಕ ಜೀವನ ಸುಧಾರಿಸಿಕೊಳ್ಳುತ್ತೇನೆ ಎಂದು ಮಂಗಳೂರಿನ ಅಭ್ಯರ್ಥಿಯೊಬ್ಬರು ಅಭಿಪ್ರಾಯ ಹಂಚಿಕೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.