ಪ್ರಧಾನ ಸುದ್ದಿ

ಅಪಘಾತ ಏಳು ಬಲಿ

ಟಂಟಂಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಒಬ್ಬ ಪೊಲೀಸ್ ಪೇದೆ, ಒಂದೇ ಕುಟುಂಬದ ಮೂವರು ...

ಅಪಘಾತ ಏಳು ಬಲಿ
Published On :

ದೇವರಹಿಪ್ಪರಗಿ ಬಳಿ ಟಂಟಂಗೆ ಲಾರಿ ಡಿಕ್ಕಿ
ಮೃತಪಟ್ಟವರೆಲ್ಲ ದೇವರಹಿಪ್ಪರಗಿ ಗ್ರಾಮದವರು


ದೇವರಹಿಪ್ಪರಗಿ: ಟಂಟಂಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಒಬ್ಬ ಪೊಲೀಸ್ ಪೇದೆ, ಒಂದೇ ಕುಟುಂಬದ ಮೂವರು ಸೇರಿದಂತೆ ಏಳು ಜನ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಸಿಂದಗಿ ತಾಲೂಕಿನ ದೇವರಹಿಪ್ಪರಗಿ ಸಮೀಪ ರಾಷ್ಟ್ರೀಯ ಹೆದ್ದಾರಿ 218ರಲ್ಲಿ ಭಾನುವಾರ ಬೆಳಗ್ಗೆ ಸಂಭವಿಸಿದೆ.
ಅಪಘಾತದಲ್ಲಿ ಮೃತಪಟ್ಟವರು ದೇವರಹಿಪ್ಪರಗಿ ಗ್ರಾಮದ ಪೊಲೀಸ್ ಪೇದೆ ಬಸವರಾಜ ಭೂಯ್ಯಾರ (45), ಒಂದೇ ಕುಟುಂಬದ ಸದಸ್ಯರಾದ ನಬಿಲಾಲ ಇಮಾಮಸಾಬ ಕಸಾಬ (55), ಖಾಜಾಬಿ ಕಸಾಬ (45) ಮಗಳು ಲತಿಫಾ ಕಸಾಬ (19), ಗಂಗಾಬಾಯಿ ಮೆಟಗಾರ (45) ರಕ್ಷಿತಾ ಉಪ್ಪಾರ (8), ಶಹಬಾದ ಫಯಾಜ ಅಹಮ್ಮದ (50) ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಬಿಜಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.  
ಹೇಗಾಯ್ತು?: ಬಿಜಾಪುರದಿಂದ ಸಿಂದಗಿ ಕಡೆಗೆ ಹೊರಟಿದ್ದ ಸಿಮೆಂಟ್ ತುಂಬಿದ ಲಾರಿ ಟಂಟಂ ಅನ್ನು ಹಿಂದಿಕ್ಕುವ ಭರದಲ್ಲಿ ದೇವರಹಿಪ್ಪರಗಿಯಿಂದ ಸಿಂದಗಿಗೆ ಹೊರಟಿದ್ದ ಪ್ರಯಾಣಿಕರು ತುಂಬಿದ್ದ ಮತ್ತೊಂದು ಟಂಟಂ ವಾಹನಕ್ಕೆ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಟಂಟಂನಲ್ಲಿದ್ದವರ ದೇಹದ ಭಾಗಗಳು 50 ಅಡಿಗೂ ಹೆಚ್ಚು ದೂರ ಚಿಮ್ಮಿ ಬಿದ್ದಿದ್ದವು. ಮೃತರನ್ನು ಗುರುತಿಸಲು ಆಗದಷ್ಟು ಭೀಕರ ಅಪಘಾತವಾಗಿದೆ. ಅಪಘಾತದಲ್ಲಿ ಟಂಟಂ ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಲಾರಿ ರಸ್ತೆ ಪಕ್ಕದ ಕಂದಕದಲ್ಲಿ ಸಿಲುಕಿದೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಜಯ ಹಿಲೋರಿ, ಡಿವೈಎಸ್ಪಿ ಶಿವಕುಮಾರ ಗುಣಾರಿ, ತಹಸೀಲ್ದಾರ್ ಅಶ್ವತ್ಥನಾರಾಯಣ ಶಾಸ್ತ್ರೀ, ಸಿಪಿಐ ಗಂಗಾಧರಪ್ಪ, ಪಿಎಸ್‌ಐ ಅಶೋಕ ಚವ್ಹಾಣ, ಗೋಪಾಲ ಹಳ್ಳೂರ, ಆರ್. ಎಸ್. ನೀಲಮ್ಮನವರ ಭೇಟಿ ನೀಡಿದ್ದಾರೆ. ದೇವರಹಿಪ್ಪರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಲಾರಿ ಚಾಲಕ ಹಾಗೂ ಕ್ಲೀನರ್ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟುವಂತಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.