ಪ್ರಧಾನ ಸುದ್ದಿ

ಹಂಪಿ ಉತ್ಸವದ ತಯಾರಿ ಮಂಟಪ ಕಂಬಗಳಿಗೆ ಹಾನಿ

ಹಂಪಿ ಉತ್ಸವದ ತಯಾರಿ ಮಂಟಪ ಕಂಬಗಳಿಗೆ ಹಾನಿ
Published On :

ಕನ್ನಡಪ್ರಭ ವಾರ್ತೆ    ಹೊಸಪೇಟೆ    ಡಿ.29
ವಿಶ್ವವಿಖ್ಯಾತ ಹಂಪಿಯ ಕೃಷ್ಣ ದೇವಸ್ಥಾನದ ಎದುರು ಕೃಷ್ಣ ಬಜಾರ್‌ನಲ್ಲಿರುವ ಸಾಲು ಮಂಟಪಗಳಲ್ಲಿ ಒಂದು ಮಂಟಪಕ್ಕೆ ಭಾನುವಾರ ಲಾರಿಯಲ್ಲಿ ತಂದಿದ್ದ ಕಬ್ಬಿಣದ ಕಂಬಗಳು ತಾಗಿದ್ದರಿಂದ 3-4 ಕಂಬಗಳು ಮುರಿದು ಬಿದ್ದು ಮಂಟಪಕ್ಕೆ ಹಾನಿಯಾಗಿದೆ.
ಜ.10, 11 ಮತ್ತು 12ರಂದು ನಡೆಯುವ ಹಂಪಿ ಉತ್ಸವಕ್ಕಾಗಿ ವೇದಿಕೆಗಳನ್ನು ಸಿದ್ಧಪಡಿಸುವ ವಸ್ತುಗಳನ್ನು ಲಾರಿಯಲ್ಲಿ ತರುವಾಗ ಲಾರಿ ಚಾಲಕನ ಅಜಾಗರೂಕತೆಯಿಂದ ಈ ಘಟನೆ ಸಂಭವಿಸಿದೆ. ಈ ಸ್ಥಳದಲ್ಲಿ ಆಹಾರ ಮೇಳದ ವೇದಿಕೆ ಸಿದ್ಧಪಡಿಸಲಾಗುತ್ತಿದೆ. ಇಕ್ಕಟ್ಟಾದ ಸ್ಥಳದಲ್ಲಿ ಲಾರಿ ಸಾಗಿಹೋಗಬೇಕಾಗಿತ್ತು. ಹೀಗೆ ಲಾರಿ ಹಾದು ಹೋಗುವಾಗ ಲಾರಿಯಲ್ಲಿ ಹೇರಿಕೊಂಡು ಬಂದಿದ್ದ ಕಂಬಗಳು ಸಾಲು ಮಂಟಪದ ಕಂಬಗಳಿಗೆ ತಾಗಿದೆ. ಸಾಲು ಮಂಟಪದ 3-4 ಪಿಲ್ಲರ್‌ಗಳು ತುಂಡಾಗಿ ಬಿದ್ದಿವೆ. ಸಾಲು ಮಂಟಪದ ಮೇಲ್ಛಾವಣೆಯಲ್ಲಿ ಹಾಸಿರುವ ಬಂಡೆಗಳು ನೆಲಕ್ಕೆ ಉರುಳಿ ಬಿದ್ದು ತುಂಡಾಗಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.