ಒಒಡಿ ಗಲಾಟೆ: ಲಾಠಿ ಪ್ರಹಾರ
ಬಿಜಾಪುರ: ಒಒಡಿ ನೀಡುವಂತೆ ಆಗ್ರಹಿಸಿ ಭಾನುವಾರ ಬೆಳಗ್ಗೆಯಿಂದಲೇ ಮೇಲಿಂದ ಮೇಲೆ ಗಲಾಟೆಗೆ ಇಳಿದಿದ್ದ ಪ್ರತಿಭಟನೆ ನಡೆಸುತ್ತಿದ್ದ ಕೆಲವು ಸರ್ಕಾರಿ ನೌಕರರಿಗೆ ಸಂಜೆ ಪೊಲೀಸರು ಲಾಠಿ ರುಚಿ ತೋರಿಸುವ ಮೂಲಕ ಶಾಂತಗೊಳಿಸಿದರು. ಕನ್ನಡ ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಸಮ್ಮೇಳನದಲ್ಲಿ ಪಾಲ್ಗೊಂಡ ಸರ್ಕಾರಿ ನೌಕರರಿಗೆ ಸಮ್ಮೇಳನದ ಕೊನೆಯ ದಿನವಾದ ಫೆ.11ರಂದು ಒಒಡಿ ಹಾಜರಾತಿ ಪ್ರಮಾಣ ಪತ್ರ ನೀಡುವುದಾಗಿ ಸ್ಪಷ್ಟಪಡಿಸಿದ್ದರೂ, ಪ್ರಮಾಣ ಪತ್ರಕ್ಕೆ ಆಗ್ರಹಿಸಿ ಭಾನುವಾರವೂ ನೌಕರರು ಪ್ರತಿಭಟಿಸಿದರು. ಪರಿಷತ್ನ ಈ ನಿರ್ಧಾರದಿಂದ ನೌಕರರಿಗೆ ಅನಾನುಕೂಲವಾಗು ತ್ತದೆ. ಹೀಗಾಗಿ ಈ ಕೂಡಲೇ ಪ್ರಮಾಣ ಪತ್ರ ನೀಡಬೇಕೆಂದು ನೌಕರರು ಪಟ್ಟು ಹಿಡಿದರು. ಪೊಲೀಸರು ವಿನಂತಿಸಿದರೂ ನೌಕರರು ಕೇಳುವ ಸ್ಥಿತಿಯಲ್ಲಿರಲಿಲ್ಲ. ಸ್ಥಳದಲ್ಲಿದ್ದ ಇನ್ಸ್ಪೆಕ್ಟರ್ ಶರ್ಟ್ ಮೇಲಿನ ಸ್ಟಾರ್ ಕಿತ್ತು ಗುಂಪುಗೂಡಿ ಕೂಗಾಟ ನಡೆಸಿದಾಗ ಪೊಲೀಸರಿಗೆ ಲಾಠಿ ಪ್ರಹಾರ ಅನಿವಾರ್ಯವಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

