ಮಾಧ್ಯಮ ಕೇಂದ್ರದ ಮುಂದೆ ಘರ್ಷಣೆ
ಸಮ್ಮೇಳನದ ಸಂಘಟಕರೊಂದಿಗೆ ಊಟದ ವಿಷಯವಾಗಿ ವಾಗ್ವಾದ
ಬಿಜಾಪುರ: ಮಾಧ್ಯಮ ಕೇಂದ್ರದೊಳಕ್ಕೆ ಊಟ ಮಾಡಲು ಅವಕಾಶ ಕೊಡಲಿಲ್ಲ ಎನ್ನುವ ಕಾರಣಕ್ಕೆ ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಸಂಘಟಕರೊಂದಿಗೆ ಜಗಳಕ್ಕಿಳಿದು, ಕೆಲ ಸಮಯ ಮಾಧ್ಯಮ ಕೇಂದ್ರದ ಮುಂದೆ ಗದ್ದಲ ಉಂಟಾಗಲು ಕಾರಣರಾದರು.
ಅಧ್ಯಕ್ಷ ಚಿಕ್ಕಣ್ಣ ಬಾಡಗಿ ಮುಧೋಳದ ಕೆಲ ಪತ್ರಕರ್ತರನ್ನು ತಮ್ಮ ಜತೆ ಕರೆತಂದಿದ್ದರು. ಅವರೊಂದಿಗೆ ಮಾಧ್ಯಮ ಕೇಂದ್ರ ಪ್ರವೇಶಿಸಲು ಮುಂದಾದಾಗ ಕೇಂದ್ರದ ಮುಖ್ಯ ದ್ವಾರದಲ್ಲಿದ್ದ ಸಿಬ್ಬಂದಿ ಅವರನ್ನು ತಡೆದು, ಇದು ಮಾಧ್ಯಮದವರಿಗೆ ಮಾತ್ರ. ಬೇರೆಯವರಿಗೆ ಪ್ರವೇಶವಿಲ್ಲ ಎಂದು ಹೇಳಿದರು. ನಾನೂ ಪತ್ರಕರ್ತರನ್ನೇ ಕರೆತಂದಿದ್ದೇನೆ. ಹೀಗಾಗಿ ಅವರು ಊಟ ಮಾಡಲು ಒಳಗೆ ಬಿಡಬೇಕು ಎಂದು ಚಿಕ್ಕಣ್ಣ ಆಗ್ರಹಿಸಿದರು. ಆದರೆ ಇದಕ್ಕೆ ಸಿಬ್ಬಂದಿ ಅವಕಾಶ ಕೊಡಲಿಲ್ಲ.
ಜಿಲ್ಲಾ ವಾರ್ತಾಧಿಕಾರಿಗಳು ಮುಂಚೆಯೇ ನೋಂದಣಿ ಮಾಡಿಕೊಂಡ ಜಿಲ್ಲಾ ಮಟ್ಟದ ವರದಿಗಾರರಿಗೆ ಮತ್ತು ಟಿವಿ ಮಾಧ್ಯಮದವರಿಗೆ ಮಾತ್ರ ಪಾಸ್ಗಳನ್ನು ನೀಡಿದ್ದಾರೆ. ಪಾಸ್ ಇಲ್ಲದವರಿಗೆ ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದರು.
ಈ ಸಂದರ್ಭ ಮಾತಿನ ಚಕಮಕಿ ನಡೆದು ಕೇಂದ್ರ ನಿಯಂತ್ರಣಕ್ಕೆ ನಿಂತಿದ್ದ ವ್ಯಕ್ತಿ ಮತ್ತು ಚಿಕ್ಕಣ್ಣ ನಡುವೆ ಮಾತಿನ ಘರ್ಷಣೆ ಪ್ರಾರಂಭವಾಯಿತು.
ಈ ಸಂದರ್ಭ ಪೊಲೀಸ್ ಅಧಿಕಾರಿಗಳು ಸ್ಥಳಕ್ಕಾಗಮಿಸಿ, ಚಿಕ್ಕಣ್ಣ ಅವರನ್ನು ಸಮಾಧಾನ ಪಡಿಸಲು ಯತ್ನಿಸಿದರು. ಆದರೆ ಸಮಾಧಾನಗೊಳ್ಳದ ಅವರು ತಾನೂ ಒಬ್ಬ ಕಸಾಪ ಘಟಕದ ಅಧ್ಯಕ್ಷನಿದ್ದು ತನಗೆ ಅವಮಾನವಾಗಿದೆ. ಅವಾಚ್ಯ ಶಬ್ಧಗಳಿಂದ ಮಾತನಾಡಿದ ವ್ಯಕ್ತಿ ಬಂದು ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ವಾರ್ತಾ ಅಧಿಕಾರಿ ರಂಗನಾಥ್ ಸ್ಥಳಕ್ಕೆ ಬಂದು ಸಮಜಾಯಿಷಿ ನೀಡಿದರೂ, ಗೊಂದಲ ಬಗೆಹರಿಯಲಿಲ್ಲ. ಪೊಲೀಸರು ಬಂದ ಮೇಲೆ ಗುಂಪನ್ನು ಚದುರಿಸಿ ಚಿಕ್ಕಣ್ಣ ಮನವೊಲಿಸಿ ಗೊಂದಲಕ್ಕೆ ತೆರೆ ಎಳೆದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

