ಪ್ರಧಾನ ಸುದ್ದಿ

ದೇವತಾಣದಲ್ಲಿ ಗುಂಡು-ತುಂಡು

ದೇವತಾಣದಲ್ಲಿ ಗುಂಡು-ತುಂಡು
Published On :

ಕನ್ನಡಪ್ರಭ ವಾರ್ತೆ ಬೆಂಗಳೂರು ಫೆ.16
ಧರ್ಮಕ್ಕೊಟ್ರೆ ಹಿತ್ಲಿಗೋಗಿ ಮೊಳ ಹಾಕಿದ್ರಂತೆ...
ಇಲ್ಲಿ ದೇವಸ್ಥಾನಗಳು ಧರ್ಮಕ್ಕೆ ಕೊಟ್ಟು, ನಷ್ಟವನ್ನು ತಾವೇ ಅನುಭವಿಸುತ್ತಿವೆ. ಜತೆಗೆ ಧರ್ಮದ ಸ್ಥಳಗಳಲ್ಲೇ ಅಧರ್ಮ, ಅಕ್ರಮ ತಾಂಡವವಾಡಲು ಅವಕಾಶ ನೀಡಿವೆ. ಧರ್ಮದ ಪ್ರತಿಪಾದಕ ಸಂಸ್ಥೆಗಳೇ ತಮ್ಮದೇ ಇಲಾಖೆಯ ನಿಯಮಗಳನ್ನು ಉಲ್ಲಂಘಿಸಿವೆ. ಧರ್ಮ ಸಂಸ್ಥೆಗಳ ಜಾಗವನ್ನು ಬೇಕಾಬಿಟ್ಟಿ ಗುತ್ತಿಗೆ ನೀಡುವ ಜತೆಗೆ, ಅತ್ಯಲ್ಪ ಬಾಡಿಗೆಯನ್ನೂ ಸಂಗ್ರಹಿಸಲಾಗಿಲ್ಲ.
ಇನ್ನು ರಾಜ್ಯದ ಕೆಲವು ದೇವಸ್ಥಾನಗಳ ಆವರಣದಲ್ಲೇ ವೈನ್‌ಶಾಪ್, ಮಾಂಸಾಹಾರಿ ರೆಸ್ಟೋರೆಂಟ್‌ಗಳಿಗೆ ಅವಕಾಶ ಮಾಡಿಕೊಡಲಾಗಿದೆ. ನಿಯಮದಂತೆ, ಸರ್ಕಾರದಿಂದ ಗುತ್ತಿಗೆಗೆ ಪಡೆದ ಜಾಗದಲ್ಲಿ ಬಾರ್, ಮಾಂಸಾಹಾರಿ ರೆಸ್ಟೋರೆಂಟ್, ಮದ್ಯ, ವೈನ್ ಅಂಗಡಿಗಳನ್ನು ಅಥವಾ ಲೈವ್‌ಬ್ಯಾಂಡ್‌ಗಳನ್ನು ನಡೆಸುವಂತಿಲ್ಲ. ಆದರೆ, ಇದು ಸೇರಿದಂತೆ ಗುತ್ತಿಗೆಯ ಎಲ್ಲ ಷರತ್ತಗಳನ್ನೂ ಉಲ್ಲಂಘಿಸಲಾಗಿದೆ.
ಸರ್ಕಾರದ ದೇವಸ್ಥಾನಗಳು ತಮ್ಮ ವ್ಯಾಪ್ತಿಯ ಪ್ರದೇಶದಲ್ಲಿ ವೈನ್‌ಶಾಪ್, ಮಾಂಸಾಹಾರಿ ರೆಸ್ಟೋರೆಂಟ್, ಕಲ್ಯಾಣ ಮಂಟಪ, ಸಿನಿಮಾ ಥಿಯೇಟರ್, ನರ್ಸಿಂಗ್‌ಹೋಂ, ಶಿಕ್ಷಣ ಸಂಸ್ಥೆಗಳಿಗೆ ಗುತ್ತಿಗೆಗೆ ನೀಡಿವೆ. ಈ ಗುತ್ತಿಗೆ ಬಾಡಿಗೆ ತೀರಾ ಅತ್ಯಲ್ಪವಾಗಿದ್ದರೂ, ಅದನ್ನೂ ಸಂಗ್ರಹಿಸಿಲ್ಲ.                  
 ಗುತ್ತಿಗೆಯ ಎಲ್ಲ ನಿಯಮಗಳನ್ನು ಮೀರಿದ್ದರೂ ಗುತ್ತಿಗೆ ರದ್ದುಪಡಿಸುವ ಅಥವಾ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಸರ್ಕಾರದ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಸಿಎಜಿ ವರದಿಯಲ್ಲಿ ಸ್ಪಷ್ಟವಾಗಿದೆ. ದೇವಸ್ಥಾನ ಅಥವಾ ಸಂಸ್ಥೆಯ ಹತ್ತಿರದಲ್ಲಿರುವ ಆಸ್ತಿಯನ್ನು ಹಿಂದುಗಳಲ್ಲದೆ ಬೇರೆಯವರಿಗೆ ಗುತ್ತಿಗೆ ನೀಡುವಂತಿಲ್ಲ. ಆದರೆ, ರಾಜ್ಯದಲ್ಲೇ ಅತಿ ಹೆಚ್ಚಿನ ಆದಾಯ ಹೊಂದಿರುವ ಹೆಗ್ಗಳಿಕೆಗೆ ಪಾತ್ರವಾಗಿರುವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಇದಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡಿದೆ. ತನ್ನ ವ್ಯಾಪ್ತಿಗೆ ಸೇರಿದ 1392.76 ಚದರ ಅಡಿ ವಿಸ್ತೀರ್ಣದ ಎರಡು ಮಳಿಗೆಗಳನ್ನು ಹಿಂದುಗಳಲ್ಲದವರಿಗೆ ಗುತ್ತಿಗೆ ನೀಡಿದೆ.

ಗುತ್ತಿಗೆದಾರರಿಂದ ಬಾಡಿಗೆ ಸಂಗ್ರಹಿಸದ ದೇವಸ್ಥಾನಗಳು
ಬೆಂಗಳೂರಿನ ಶ್ರೀ ರಾಯರಾಯ ಕಲ್ಯಾಣ ಮಂಟಪ (5), ಶ್ರೀ ರಾಮೇಶ್ವರಿ ದೇವಸ್ಥಾನ (2), ಶ್ರೀ ಚೌಬಿನ ಸುಬ್ಬರಾವ್ ಕಲ್ಯಾಣ ಮಂಟಪ (4), ಶ್ರೀ ಧರ್ಮರಾಯಸ್ವಾಮಿ ದೇವಸ್ಥಾನ (3), ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನ (2), ಹಲಸೂರಿನ ಶ್ರೀ ಸೋಮೇಶ್ವರ ಸ್ವಾಮಿ ದೇವಸ್ಥಾನ (6), ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ (4), ಗವಿಪುರಂನ ಶ್ರೀ ಗವಿಗಂಗಾಧರೇಶ್ವರ ಸ್ವಾಮಿ ದೇವಸ್ಥಾನ (1), ಸಂಪಂಗಿ ರಾಮಸ್ವಾಮಿ ದೇವಸ್ಥಾನ (3), ಮೈಸೂರಿನ ಶ್ರೀ ಚಾಮುಂಡೇಶ್ವರಿ ದೇವಸ್ಥಾನ (8), ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ (1), ಕೊಲ್ಲೂರಿನ ಶ್ರೀ ಮೂಕಾಂಬಿಕ ದೇವಸ್ಥಾನ (3), ಶ್ರೀ ಕುಕ್ಕೆ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ (12), ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ (32), ಮಂಗಳೂರಿನ ಶ್ರೀ ಮಂಗಳಾದೇವಿ ದೇವಸ್ಥಾನ (12), ದೊಡ್ಡಬಳ್ಳಾಪುರದ ಶ್ರೀ ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ (8), ಯಡಿಯೂರು ಶ್ರೀ ಸಿದ್ದಲಿಂಗೇಶ್ವರಸ್ವಾಮಿ ದೇವಸ್ಥಾನ (14).

ದೇವಸ್ಥಾನದ ಆವರಣದಲ್ಲೇ ವೈನ್‌ಶಾಪ್
ಬೆಂಗಳೂರಿನ ಕೆ.ಜಿ ರಸ್ತೆಯಲ್ಲಿರುವ ಬಂಡಿ ಶೇಷಮ್ಮ ಆವರಣದಲ್ಲಿ ಮದ್ಯದ ಅಂಗಡಿ ನಡೆಸಲು ಓಜಾ ವೈನ್ಸ್‌ಗೆ ಗುತ್ತಿಗೆ ನೀಡಲಾಗಿತ್ತು. 1982ರ ಡಿಸೆಂಬರ್‌ನಲ್ಲಿ ಗುತ್ತಿಗ ಅವಧಿ ಪೂರ್ಣಗೊಂಡಿದ್ದರೂ ಸಹ ಗುತ್ತಿಗೆದಾರರು ಮಾಸಿಕ 410ರ ಅತ್ಯಲ್ಪ ಬಾಡಿಗೆ ಪಾವತಿಸುವ ಮೂಲಕ ಅನಧಿಕೃತ ವ್ಯಾಪಾರ ಮುಂದುವರಿಸಿದ್ದರು. ಇದೇ ರೀತಿ, ಬೆಂಗಳೂರು-ಮೈಸೂರು ರಸ್ತೆಯಲ್ಲಿರುವ ಶ್ರೀ ಕರಿಕಾಳ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿರುವ ಅಂಗಡಿಯಲ್ಲಿ ಗುತ್ತಿಗೆದಾರರಾದ ವಿಜಯ ಎಂಟರ್‌ಪ್ರೈಸಸ್‌ನವರು ಮಾಂಸಾಹಾರ ಮಾರಾಟ ಮಾಡುತ್ತಿದ್ದರು.

ದೇವಸ್ಥಾನದ ಆವರಣದಲ್ಲೇ ವೈನ್‌ಶಾಪ್
ಬೆಂಗಳೂರಿನ ಕೆ.ಜಿ ರಸ್ತೆಯಲ್ಲಿರುವ ಬಂಡಿ ಶೇಷಮ್ಮ ಆವರಣದಲ್ಲಿ ಮದ್ಯದ ಅಂಗಡಿ ನಡೆಸಲು ಓಜಾ ವೈನ್ಸ್‌ಗೆ ಗುತ್ತಿಗೆ ನೀಡಲಾಗಿತ್ತು. 1982ರ ಡಿಸೆಂಬರ್‌ನಲ್ಲಿ ಗುತ್ತಿಗ ಅವಧಿ ಪೂರ್ಣಗೊಂಡಿದ್ದರೂ ಸಹ ಗುತ್ತಿಗೆದಾರರು ಮಾಸಿಕ 410ರ ಅತ್ಯಲ್ಪ ಬಾಡಿಗೆ ಪಾವತಿಸುವ ಮೂಲಕ ಅನಧಿಕೃತ ವ್ಯಾಪಾರ ಮುಂದುವರಿಸಿದ್ದರು. ಇದೇ ರೀತಿ, ಬೆಂಗಳೂರು-ಮೈಸೂರು ರಸ್ತೆಯಲ್ಲಿರುವ ಶ್ರೀ ಕರಿಕಾಳ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿರುವ ಅಂಗಡಿಯಲ್ಲಿ ಗುತ್ತಿಗೆದಾರರಾದ ವಿಜಯ ಎಂಟರ್‌ಪ್ರೈಸಸ್‌ನವರು ಮಾಂಸಾಹಾರ ಮಾರಾಟ ಮಾಡುತ್ತಿದ್ದರು.

- ಕೆರೆ ಮಂಜುನಾಥ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.